
ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು : ಕುಲಶೇಖರ ಹಿಂದೂ ಸೇವಾ ಸಮಿತಿ ಟ್ರಸ್ಟ್‌ನ ನೂತನ ಮಂದಿರ ಹಾಗೂ ಸಭಾಭವನ ನಿರ್ಮಾಣ ಸಮಿತಿ ವತಿಯಿಂದ ಕುಲಶೇಖರದ ಪದವು ಮೇಗೀನ ಮನೆ ರಸ್ತೆ ಬಳಿ ಸುಮಾರು 1.5 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಮಂದಿರ ಹಾಗೂ ಸಭಾಭವನ ಗುರುವಾರ ಉದ್ಘಾಟನೆಗೊಂಡಿತ್ತು. .
ಬುಧವಾರದಿಂದ ಮೊದಲ್ಗೊಂಡು ಶನಿವಾರದವರೆಗೆ ಪರ್ಯಂತ ಸಮಿತಿಯು ಪದವು ಮೇಗಿನ ಮನೆ ರಸ್ತೆ ಕುಲಶೇಖರದಲ್ಲಿ ನಿರ್ಮಿಸಿದ ಭವ್ಯ ಮಂದಿರ ಹಾಗೂ ಸುಸಜ್ಜಿತವಾದ ಸಭಾಭವನದ ಲೋಕಾರ್ಪಣೆಯ ” ಉದ್ಘಾಟನಾ ಸಮಾರಂಭ” ದ ವೈದಿಕ ವಿದಿವಿಧಾನಗಳು ಶ್ರೀ ಪಿ.ವೇದವ್ಯಾಸ ಭಟ್ ನೀರುಮಾರ್ಗರವರ ನೇತೃತ್ವದಲ್ಲಿ ಎಡಪದವು ಶ್ರಿ ರಾಧಕೃಷ್ಣ ತಂತ್ರಿಯವರ ಪೌರೋಹಿತ್ಯದಲ್ಲಿ, ವಿವಿಧ ಧಾರ್ಮಿಕ ಹಾಗೂ ಸಾಂಸ್ಕತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಬುಧವಾರ ಸಂಜೆ ಶ್ರೀದೇವರ ಭಾವಚಿತ್ರ, ಬೆಳ್ಳಿ ಮೂರ್ತಿ ಹಾಗೂ ಹೊರೆಕಾಣಿಕೆಯ ವೈಭವದ ಮೆರೆವಣಿಗೆ ಚೆಂಡೆ , ಶಂಖ, ಜಾಗಟೆ ಹಾಗೂ ಇತರೇ ವಾದ್ಯಗಳೊಂದಿಗೆ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ನಂತೂರಿನಿಂದ ಹೊರಟು ಮಂದಿರದವರೆಗೆ ಸಾಗಿ ಬಂದವು.
ಗುರುವಾರ ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಶ್ರೀ ನರಸಿಂಹ ಮಠದ ಶ್ರೀ ವಿಧ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಅಶೀರ್ವಚನ ನೀಡಿ, ನಮ್ಮ ಹಿರಿಯರು ಅನುಸರಿಸಿಕೊಂಡು ಬಂದಿರುವ ಧರ್ಮ, ಸಂಸ್ಕೃತಿಯನ್ನು ನಾವು ಪಾಲಿಸುವ ಜತೆಗೆ ಅದನ್ನು ಮುಂದಿನ ತಲೆಮಾರಿಗೆ ತಲುಪಿಸಬೇಕು ಎಂದರು.
ನೂತನ ಮಂದಿರ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಹಾಗೂ ಕಾರ್ಪೋರೇಶನ್ ಬ್ಯಾಂಕ್ ಹಾಗೂ ನಿವೃತ್ತ ಜನರಲ್ ಮ್ಯಾನೇಜರ್ ಶ್ರೀಪಿ.ಕೆ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಪ್ರಕಾಶ್ ಶೇರಿಗಾರ್ , ಪದವು ಮೇಗಿನ ಮನೆ ಯಜಮಾನರು ಶ್ರೀ ಮನೋಹರ ಶೆಟ್ಟಿ, ಸ್ಥಳೀಯ ಮ.ನ.ಪಾ ಸದಸ್ಯ ಭಾಸ್ಕರ.ಕೆ, ಮಾಜಿ ಮೇಯರ್ ಅಬ್ದುಲ್ ಅಜೀಜ್ ಮುಖ್ಯ ಅತಿಥಿಗಳಾಗಿದ್ದರು.
ಹಿಂದೂ ಸೇವಾ ಸಮಿತಿ ಟ್ರಸ್ಟ್‌ನ ಅಧ್ಯಕ್ಷ ಎ.ನರಸಿಂಹ ಪ್ರಭು, ಮಂದಿರ ಹಾಗೂ ಸಭಾಭವನ ನಿರ್ಮಾಣ ಸಮಿತಿ ಅಧ್ಯಕ್ಷ ಅಚ್ಚುತ ಭಟ್, ಆಡಳಿತ ಮಂಡಳಿ ಅಧ್ಯಕ್ಷ ಗಣೇಶ್ ಆಚಾರ್, ಟ್ರಸ್ಟಿ ಶ್ರೀನಿವಾಸ ಶೇರಿಗಾರ್, ಟ್ರಸ್ಟ್ ಹಾಗೂ ಸಭಾಭವನ ನಿರ್ಮಾಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೀತಾರಾಮ.ಕೆ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಿಂದೂ ಸೇವಾ ಸಮಿತಿಯಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದವರನ್ನು ಹಾಗೂ ಕಟ್ಟಡ ನಿರ್ಮಾಣಕ್ಕೆ ರೂ.25,000 ರೂ.ಗಳಿಗಿಂತ ಅಧಿಕಾ ದೇಣಿಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು.
ಟ್ರಸ್ಟ್‌ನ ಕೋಶಾಧಿಕಾರಿ ಸುಂದರ.ಜಿ ಆಚಾರ್ಯ ಬೆಳುವಾಯಿ ದಾನಿಗಳ ವಿವರ ನೀಡಿದರು. ಸಮಿತಿ ಕೋಶಾಧಿಕಾರಿ ಮೋಹನದಾಸ ನಾಯಕ್ ಸ್ವಾಗತಿಸಿದರು. ಟ್ರಸ್ಟಿ ರಾಜು.ಬಿ.ವಂದಿಸಿದರು. ಭಾಸ್ಕರ ಹೊಸಮನೆ ಕಾರ್ಯಕ್ರಮ ನಿರೂಪಿಸಿದರು.
ಸಭಾಕಾರ್ಯಕ್ರಮದ ಬಳಿಕ ಲ.ಕಿಶೋರ್ ಡಿ.ಶೆಟ್ಟಿ ಸಾರಥ್ಯದ ಲಕುಮಿ ತಂಡದವರಿಂದ “ನಂಕ್ ಮಾತೆರ್‍ಲಾ ಬೋಡು” ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತ್ತು.

ಎರಡನೇ ದಿನದ ಧಾರ್ಮಿಕ ಕಾರ್ಯಕ್ರಮ :
ಶುಕ್ರವಾರ ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರ ಸಂಸದ ನಳಿನ್ ಕುಮಾರ್ ಕಟೀಲ್, ದ.ಕ.ಸ.ಹಾ.ಉ.ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ, ಪದವು ಮೇಗಿನ ಮನೆ ಉಮೇಶ್ ರೈ, ಉದ್ಯಮಿ ಅಲ್ಬನ್ ಮಿನೇಜಸ್, ಬಿಕರ್ನಕಟ್ಟೆ ಶುಭ ಇಂಜಿನಿಯರಿಂಗ್ ವರ್ಕ್ಸ್ ನ ಮಾಲಕ ಚಂದ್ರಶೇಖರ ಕರ್ಕೇರ, ಲಕ್ಷ್ಮೀ ವಿನಾಯಕ ಎಂಟರ್‍ಪ್ರೈಸಸ್‌ನ ಮಾಲಕ ಜಗದೀಶ್.ಕೆ ಮೊದಲಾದವರು ಮುಖ್ಯ ಅಥಿತಿಗಳಾಗಿದ್ದರು.
ಹಿಂದೂ ಸೇವಾ ಸಮಿತಿ ಟ್ರಸ್ಟ್ ನ ಅಧ್ಯಕ್ಷರಾದ ಎ.ನರಸಿಂಹ ಪ್ರಭು ಅಧ್ಯಕ್ಷತೆ ವಹಿಸಿದ್ದರು. ನೂತನ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ಕೆ.ಅಚ್ಯುತ ಭಟ್, ಹಿಂದೂ ಸೇವಾ ಸಮಿತಿ ಟ್ರಸ್ಟ್‌ನ ಅಧ್ಯಕ್ಷ ಗಣೇಶ್ ಆಚಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಟ್ಟಡ ನಿರ್ಮಾಣಕ್ಕೆ ರೂ. 5,000 ದಿಂದ ರೂ.25,000 ರೂ.ಗಳಿಗಿಂತ ಅಧಿಕಾ ದೇಣಿಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು.
ಬಾಸ್ಕರ್ ಹೊಸಮನೆ ಕಾರ್ಯಕ್ರಮ ನಿರ್ವಹಿಸಿದರು.

ಸಭಾಕಾರ್ಯಕ್ರಮದ ಬಳಿಕ ಕುಲಶೇಖರ ಸುಧಾಕರ ಸಾಲ್ಯಾನ್ ಅವರ ಸಂಯೋಜನೆಯಲ್ಲಿ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ “ಗಜೇಂದ್ರ ಮೋಕ್ಷ” ಯಕ್ಷಗಾನ ಬಯಲಾಟ ನಡೆಯಿತು.