ಕನ್ನಡ ವಾರ್ತೆಗಳು

ಅಭ್ಯರ್ಥಿಗಳ ಮಾರ್ಗದರ್ಶನಕ್ಕಾಗಿ ಸದಾಚಾರ ನೀತಿ ಸಂಹಿತೆ.

Pinterest LinkedIn Tumblr

code_of_honer

ಮಂಗಳೂರು ಫೆ.12:  ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯ ಅಭ್ಯರ್ಥಿಗಳಿಗೆ ಮಾದರಿ ನೀತಿ ಸಂಹಿತೆಯ ಬಗ್ಗೆ ಮಂಗಳೂರು ತಾಲೂಕು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಸಭೆ ನಡೆಯಿತು.

ಚುನಾವಣಾಧಿಕಾರಿ ಎಷ್. ಆರ್ ಯೋಗೀಶ್ ಮಾತನಾಡಿ, ಯಾವುದೇ ಪಕ್ಷ ಅಥವಾ ಅಭ್ಯರ್ಥಿಯ ವಿವಿಧ ಜಾತಿ ಅಥವಾ ಸಮುದಾಯಗಳ ಮದ್ಯೆ, ಮತೀಯ ಭಾಷಾ ಸಮೂಹಗಳ ಮದ್ಯೆ ಇರುವ ವೈಮನಸ್ಸತ್ವವನ್ನು ಕೆರಳಿಸುವ, ಪರಸ್ಪರ ದ್ವೇಷ ಹುಟ್ಟಿಸುವ, ಉದ್ವೇಗಕ್ಕೆ ಕಾರಣವಾಗುವಂತಹ ಯಾವುದೇ ಚಟುವಟಿಕೆಗಳಲ್ಲಿ ತೊಡಗಬಾರದು. ಮತಗಳಿಕೆಗಾಗಿ ಜಾತಿ,ಮತ, ಮತ್ತು ಕೋಮುಭಾವನೆಗಳ ಆಧಾರದ ಮೇಲೆ ಮನವಿ ಮಾಡ ತಕ್ಕದ್ದಲ್ಲ. ದೇವಾಲಯ, ಮಸೀದಿ,ಚರ್ಚ್ ಅಥವಾ ಇತರೇ ಪೂಸ್ಥಳಗಳನ್ನು ಚುನಾವಣಾ ಪ್ರಚಾರ ವೇದಿಕೆಗಳಾಗಿ ಬಳಸಬಾರದು ಎಂದು ತಿಳೀಸಿದರು.

ಚುನಾವಣೆ ಘೋಷಣೆಯಾದ 30 ದಿನಗಳೊಳಗೆ ಚುನಾವಣಾ ಖರ್ಚುವೆಚ್ಚದ ಎಲ್ಲಾ ವಿವರಗಳನ್ನು ತಾಲೂಕು ಚುನಾವಣಾಧಿಕಾರಿಗಳಿಗೆ ಸ್ಪರ್ಧಿಸಿದ ಎಲ್ಲಾ ಅಭ್ಯರ್ಥಿಗಳು ನೀಡತಕ್ಕದ್ದು. ಇಲ್ಲದ್ದಿದ್ದರೆ ಮುಂದಿನ ಚುನಾವಣೆಯಲ್ಲಿ ಸ್ಫರ್ಧಿಸಲು ಅವಕಾಶ ನೀಡಲಾಗುವುದಿಲ್ಲ ಅವರು ತಿಳಿಸಿದರು.

ಮಂಗಳೂರು ತಾಲೂಕು ತಹಶೀಲ್ದಾರ್ ಶಿವಶಂಕರಪ್ಪ ಮಾತನಾಡಿ, ಎಲ್ಲ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಶಾಂತಿಯುತ ಮತ್ತು ಕ್ರಮಬದ್ದ ಮತದಾನ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ಅಧಿಕಾರಿಗಳೊಂದಿಗೆ ಸಹಕರಿಸಬೇಕು.

ಜಿಲ್ಲಾ ಪಂಚಾಯತ್‌ಗೆ ಬಿಳಿ ಬ್ಯಾಲೆಟ್ ಹಾಗೂ ತಾಲೂಕು ಪಂಚಾಯತ್‌ಗೆ ಗುಲಾಬಿ ಬ್ಯಾಲೆಟ್ ಪೇಪರ್ ಬಳಸಲಾಗುವುದು. ಎಂದರು. ಕಾರ್ಯಾಗಾರದಲ್ಲಿ ಚುನಾವಣಾ ವೀಕ್ಷಕ ಬಸವರಾಜು ಉಪಸ್ಥಿತರಿದ್ದರು. ಎಲ್ಲಾ ಅಭ್ಯರ್ಥಿಗಳಿಗೆ ಅಭ್ಯರ್ಥಿಗಳ ಮಾರ್ಗದರ್ಶನಕ್ಕಾಗಿ ಸದಾಚಾರ ಸಂಹಿತೆ ಪುಸ್ತಿಕೆಯನ್ನು ವಿತರಿಸಲಾಯಿತು.

ಮಂಗಳೂರು ತಾಲೂಕಿನ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಅಭ್ಯರ್ಥಿಗಳು ಹಾಜರಿದ್ದರು. ಮೂಡಬಿದ್ರೆ ತಹಶೀಲ್ದಾರ್ ಮುಹಮ್ಮದ್ ಇಸಾಕ್, ಬಿ.ಇ.ಓ ಜ್ಞಾನೇಶ್, ಉಸ್ಮಾನ್ ಉಪಸ್ಥಿತರಿದ್ದರು.

Write A Comment