ಕನ್ನಡ ವಾರ್ತೆಗಳು

ಥಿಪೆರ್ಮನ್ನೂರು ಸಿ‌ಎಲ್‌ಸಿಯ 40ನೇ ವಾರ್ಷಿಕೋತ್ಸವ

Pinterest LinkedIn Tumblr

CLS_Permannur_photo

ಉಳ್ಳಾಲ. ಫೆ, 12:  ಪೆರ್ಮನ್ನೂರು ಸಿ‌ಎಲ್‌ಸಿಯ 40 ನೇ ವಾರ್ಷಿಕೋತ್ಸವವು ಪೆರ್ಮನ್ನೂರು ಇಗರ್ಜಿಯ ವಠಾರದಲ್ಲಿ ಇತ್ತೀಚೆಗೆ ನಡೆಯಿತು.
ಮಂಗಳೂರಿನ ಬಿಷಪರಾದ ಅಲೋಶಿಯಸ್ ಪಾವ್ಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಯು ಟಿ ಖಾದರ್ ಭಾಗವಹಿಸಿದ್ದರು. ಅತಿಥಿಗಳಾಗಿ ಸ್ಟೇನಿ ಡಿಸೋಜ ಚೆಂಗ್ಳೂರು, ಮ್ಯಾಕ್ಸಿಮ್ ವಿಸ್ಕಿತ್, ಜೆಬಿ ಸ್ದೂನ್ನಾ, ಎಡ್ವಿನ್ ಮಸ್ಕರೇನಸ್, ಹೆನ್ರಿ ಸಿಕ್ವೇರಾ, ರೂಪೇಶ್ ಮಾಡ್ತಾ, ಪ್ರವೀಣ್ ಜಾಯ್ ಸಲ್ಡಾನ, ಉಲ್ಲಾಸ್ ಡಿ ಕೋಸ್ತಾ, ಲುಕಸ್ ಡಿ ಸೋಜಾ, ಡಿಮಿಟ್ರಿಯನ್ ಡಿ ಸೋಜಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬಡ ವಿದ್ಯಾರ್ಥಿಗಳ ಶಿಕ್ಷಣ ನಿಧಿಯನ್ನು ಉದ್ಘಾಟಿಸಲಾಯಿತು. ನಂತರ ದೇವಿದಾಸ್ ಕಾಪಿಕಾಡ್‌ರ `ಪನಿಯರೆ ಆವಂದಿನ’ ನಾಟಕ ಪ್ರದರ್ಶನ ನಡೆಯಿತು.

ಸಿ‌ಎಲ್‌ಸಿ ಅಧ್ಯಕ್ಷ ಜೋಸೆಫ್ ಡಿ ಸೋಜಾ ಸ್ವಾಗತಿಸಿದರು. ಕಾರ್ಯದರ್ಶಿ ರೊನಾಲ್ಡ್ ಅವೊಸೆ ವರದಿ ವಾಚಿಸಿದರು. ಸಹ ಕಾರ್ಯದರ್ಶಿ ಹೆರಾಲ್ಡ್ ಸೆರಾ ವಂದಿಸಿದರು. ಕಾರ್ಯಕ್ರಮವನ್ನು ಮೆಲ್ವಿನ್ ಡಿ ಸೋಜಾ ಹಾಗೂ ಆಲ್ವಿನ್ ಡಿ ಸೋಜಾ ನಿರೂಪಿಸಿದರು.

Write A Comment