ವರದಿ : ಈಶ್ವರ ಎಂ. ಐಲ್/ ಚಿತ್ರ,: ದಿನೇಶ್ ಕುಲಾಲ್
ಮುಂಬಯಿ: ಬಂಟರ ಸಂಘವು ಪ್ರಾದೇಶಿಕ ಸಮಿತಿಗಳ ಮೂಲಕ ನಮ್ಮ ಮನೆ ಬಾಗಿಲಿಗೆ ತಲಪಿದೆ. ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯ ಬಹಳ ಉತ್ತಮವಾಗಿ ಸಾಂಸ್ಕ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ನಮ್ಮ ಸಂಸ್ಕೃತಿ, ಬಾಷೆ, ಸಂಸ್ಕಾರವನ್ನು ಉಳಿಸಲು ಪ್ರಯತ್ನಿಸುತ್ತಿದೆ. ಈ ಪರಿಸರವು ನನಗೆ ಬೇಕಾದಷ್ಥನ್ನು ನೀಡಿದೆ ಹಾಗೂ ನನ್ನಿಂದಾಗುವಷ್ಥು ಇಲ್ಲಿನ ಹೋಟೇಲಿಗರ, ಉದ್ಯಮಿಗಳ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸಿದ್ದೇನೆ. ವಸಾಯಿ ಪರಿಸರವು ಇದೀಗ ಬಹಳ ಅಭಿವೃದ್ಧಿಯೊಂದಿಗೆ ಇಲ್ಲಿನ ನಮ್ಮ ಸಮುದಾಯದವರು ಪ್ರಗತಿಯನ್ನು ಸಾಧಿಸುತ್ತಿದ್ದರೆ ಎಂದು ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ಫೆ. ೭ ರಂದು ವಸಾಯಿ ಪೂರ್ವ ವಸಾಯಿ- ನಾಲಾಸೊಪಾರಾ ಲಿಂಕ್ ರೋಡ್ ನ ವಸಂತ ನಗರ ಗ್ರೌಂಡ್ ನಲ್ಲಿ ಜರಗಿದ ಬಂಟರ ಸಂಘ ಮುಂಬಯಿ ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯ ವಾರ್ಷಿಕ ಸ್ನೇಹ ಮಿಲನ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಮುಂಬಯಿಯ ತನ್ನ ಬದುಕನ್ನು ವಸಾಯಿಯಲ್ಲಿ ಪ್ರಾರಂಭಿಸಿದ ಬಗ್ಗೆ ನೆನಪಿಸುತ್ತಾ, ಈ ಪ್ರಾದೇಶಿಕ ಸಮಿತಿಯ ಮೂಲಕ ಯಾವುದೇ ಅರ್ಜಿ ಸಂಘಕ್ಕೆ ಬಂದರೂ ಅದನ್ನು ನಾವು ತಿರಸ್ಕರಿಸಿಲ್ಲ. ಹಣದ ಕೊರತಿಯಿಂದಾಗಿ ನಮ್ಮ ಯುವ ಜನಾಂಗವು ಶಿಕ್ಷಣದಿಂದ ವಂಚಿತರಾಗದಂತೆ ನಾವು ನೋಡುತ್ತಿದ್ದೇವೆ. ಶಿಕ್ಷಣಕ್ಕಾಗಿ ನಮ್ಮ ಸಂಸ್ಥೆಗಳಲ್ಲಿ ಎಲ್ಲಾ ಸೌಕರ್ಯವಿದ್ದು ಅದರ ಪ್ರಯೋಜನವನ್ನು ಪಡೆಯಬೇಕೆಂದರು. ಮಹಿಳೆಯರನ್ನುದ್ದೇಶಿಸಿ ಮಾತನಾಡಿದ ಅವರು ಇಲ್ಲಿನ ಮಹಿಳೆಯರು ಸಮಾಜಕ್ಕಾಗಿ ಬಹಳ ದುಡಿಯುತ್ತಿದ್ದು ಮಕ್ಕಳಿಗೆ ಉತ್ತಮ ಸಂಸ್ಕ್ಕೃತಿಯನ್ನು ನೀಡಬಲ್ಲರು. ಮದುವೆಗೆ ಸಾಲ ಮಾಡುವ ಬದಲು ಶಿಕ್ಷಣಕ್ಕಾಗಿ ಸಾಲ ಪಡೆಯುವುದು ಉತ್ತಮ ಎಂದರು.
ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ ವಸಾಯಿ – ವಿರಾರ್ ಸಿಟಿ ಮುನಿಸಿಪಲ್ ಕಾರ್ಪೋರೇಶನ್ ಮೇಯರ್ ಪ್ರವೀಣಾ ಹಿತೇಂದ್ರ ಠಾಕೂರ್ ಅವರು ಮಾತನಾಡುತ್ತಾ ಬಂಟ ಸಮುದಾಯದವರು ನಮಲ್ಲಿ ತುಂಬಾ ಪ್ರೀತಿಯನ್ನು ತೋರಿಸಿದ್ದಾರೆ. ನಿಮ್ಮವರ ಪ್ರೋತ್ಸಾಹವೇ ನಮ್ಮ ರಾಜಕೀಯ ಯಶಸ್ಸಿಗೆ ಕಾರಣ. ಶಿಕ್ಷಣಕ್ಕೆ ನೀವು ಸಹಕರಿಸುತ್ತಿದ್ದು ಇದು ಮಕ್ಕಳಿಗೆ ಜೀವನ ಪರ್ಯಂತ ಪ್ರಯೋಜನಕಾರಿಯಾಗುವುದು. ಇಲ್ಲಿನ ತುಳು ಕನ್ನಡಿಗರು ನಾಡಿನ ಸಂಸ್ಕೃತಿಯನ್ನು ಪಾಲಿಸುವವರು. ಭಾರತೀಯ ಸಂಸ್ಕೃತಿಯಲ್ಲಿ ವಿವಿದತೆಯಿದ್ದು ಅದರಲ್ಲಿ ಏಕತೆ ಇದೆ. ನಮ್ಮ ಹಿರಿಯರ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಬೇಕು. ಅದನ್ನು ನೀವು ಮಾಡುತ್ತಿರುವುದು ಅಭಿನಂದನೀಯ ಎಂದರು.
ಗೌರವ ಅತಿಥಿ ವಸಾಯಿ – ವಿರಾರ್ ಸಿಟಿ ಮುನಿಸಿಪಲ್ ಕಾರ್ಪೋರೇಶನ್ ಉಪ ಮೇಯರ್ ಉಮೇಶ್ ಡಿ. ನ್ಯಾಕ್ ಅವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಬಂಟ ಸಮುದಾಯದಿಂದ ನಾವು ಬಹಳ ಕಲಿತಿರುವೆವು. ನಮಗೆ ನಿಮ್ಮವರ ಕೊಡುವೆ ಅಪಾರ. ವಸಯಿ ಪರಿಸರದಲ್ಲಿ ಶಿಕ್ಷಣ ಸಂಸ್ಥೆ ಹಾಗೂ ಆಸ್ಪತ್ರೆಯನ್ನು ಯನ್ನು ಕಟ್ಟಿ ಇಲ್ಲಿನ ನಿಮ್ಮ ಹಾಗೂ ಇತರ ಸಮಾಜದವರಿಗೆ ಸಹಕರಿಸಿರಿ. ಸ್ಥಳೀಯ ಸಮಾಜ ಬಾಂಧವರಿಗೆ ನಿಮ್ಮ ಸಹಕಾರದ ಅಗತ್ಯವಿದೆ. ನಿಮ್ಮವರಿಂದಾಗಿ ಅತ್ಯದಿಕ ಮತದಿಂದ ನಾವು ವಿಜಯವನ್ನು ಸಾಧಿಸಿದ್ದೇವೆ ಅನ್ನುತ್ತಾ ಸಮಾರಂಭಕ್ಕೆ ಶುಭ ಕೋರಿದರು.
ಬಂಟರ ಸಂಘದ ಪೊವಾಯಿ ಎಸ್. ಎಮ್. ಶೆಟ್ಟಿ ಶಿಕ್ಷಣ ಸಂಸ್ಥೆಗಳ ಕಾರ್ಯಾಧ್ಯಕ್ಷ ಜಯರಾಮ ಎನ್. ಶೆಟ್ಟಿ ಯವರು ಉಪಸ್ಥಿದ್ದು ಮಾತನಾಡುತ್ತಾ ಈ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶಶಿಧರ ಕೆ.ಶೆಟ್ಟಿ ಮತ್ತವರ ತಂಡದ ಕಾರ್ಯ ಸ್ಲಾಘನೀಯ. ಬಂಟರ ಸಂಘದ ಪೊವಾಯಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಮಾತನಾಡಿದ ಅವರು ನಮ್ಮ ಶಿಕ್ಷಣ ಸಂಸ್ಥೆಯು ಉನ್ನತ ಮಟ್ಟದ ಸಾಧನೆಯನ್ನು ಮಾಡುತ್ತಿದ್ದು ಮುಂಬಯಿಯಲ್ಲೇ ನಾಲ್ಕನೇ ಸ್ಥಾನ ಗಳಿಸಿದೆ. ಬಂಟರ ಸಮುದಾಯದ ಮಾತ್ರವಲ್ಲದೆ ಇತರ ಸಮುದಾಯದ ಮಕ್ಕಳು ಸೇರಿ ಅನೇಕ ಸಾವಿರ ಮಂದಿ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇದು ನಾವು ನಮ್ಮ ತಾಯಿ ನಾಡಿಗೆ ನೀಡುತ್ತಿರುವ ಗೌರವವೂ ಹೌದು. ಇಂದು ಶಿಕ್ಷಣವು ಜೀವನದ ಯಸ್ಸಸ್ಸಿಗೆ ಅತೀ ಅಗತ್ಯವಾಗಿದೆ ಆದುದರಿಂದ ಪ್ರತಿಯೊಂದು ಮಗುವೆಗೆ ಶಿಕ್ಷಣ ನೀಡಬೇಕು ಎಂದರು.
ವಿ. ಕೆ. ಗ್ರೂಪ್ ಆಪ್ ಕಂಪೆನಿಗಳ ಸಿ.ಎಂ.ಡಿ. ಕರುಣಾಕರ ಎಂ. ಶೆಟ್ಟಿಯವರು ವಸಾಯಿ ಪರಿಸರದಲ್ಲಿ ತಾನು ಉದ್ದಿಮೆ ನಡೆಸುವ ಬಗ್ಗೆ ತಿಳಿಸುತ್ತಾ, ಸ್ಥಳೀಯ ಸಮಿತಿಯ ಪ್ರೋತ್ಸಾಹವನ್ನು ಮೆಚ್ಚಿದರು. ತಾಯಿಯಂತೆ ತಂದೆಗೂ ಕುಟುಂಬದ ಜವಾಬ್ಧಾರಿಯಿದ್ದು ತಾಯಿಗೆ ಸಿಗುವ ಗೌರವವು ತಂದೆಗೂ ಸಿಗಬೇಕಾಗಿದೆ. ಸಮಾಜದ ಯುವಜನಾಂಗವು ಅಂತರ್ಜಾತೀಯ ವಿವಾಹವಾಗುತ್ತಿದ್ದಲ್ಲಿ ಅದನ್ನು ಹತೋಟಿಗೆ ತರುವ ಪ್ರಯತ್ನ ನಡೆಸಬೇಕಾಗಿದೆ ಇಲ್ಲದಿದ್ದಲ್ಲಿ ಇದರ ದುಸ್ಪರಿಣಾಮದಿಂದಾಗಿ ಮುಂದೆ ಅವರು ಪಸ್ಚಾತಾಪಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ಕಿವಿ ಮಾತನ್ನು ಹೇಳಿದರು.
ಬಳ್ಳಾರಿ ಬಂಟರ ಸಂಘದ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿಯವರು ಉಪಸ್ಥಿತರಿದ್ದು ಮಾತನಾಡುತ್ತಾ, ಮನುಷ್ಯ ಕೇವಲ ಸಂಸಾರಮುಖಿಯಾಗಿರದೆ ಸಮಾಜ ಮುಖಿಯಾಗಿ ಬದುಕಬೇಕು. ಬಂಟರು ಎಲ್ಲಿ ಹೋದರು ಗೆದ್ದು ಬರುತ್ತಾರೆ. ಈ ಪರಿಸರ ಇದೀಗ ಬಹಳ ಅಭಿವೃದ್ದಿಯಾಗಿದ್ದು ಇಲ್ಲಿನ ಪ್ರಾದೇಶಿಕ ಸಮಿತಿಯ ಕಾರ್ಯವನ್ನು ಮೆಚ್ಚಿಬೇಕಾಗಿದೆ. ಇವತ್ತಿನ ಸಮಾರಂಭದಿಂದ ಬಗಳ ಸಂಸ ಉಂಟಾಗಿದೆ ಎಂದರು.
ಸಂಘದ ಪ್ರಾದೇಶಿಕ ಸಮಿತಿಯ ಪಶ್ಚಿಮ ವಲಯ ಸಮನ್ವಯಕ ಮುಂಡಪ್ಪ ಎಸ್. ಪಯ್ಯಡೆಯವರು ಮಾತನಾಡುತ್ತಾ ಹುಟ್ಟಿದಾಗ ನಮಗೆ ಯಾರೂ ಮಿತ್ರರು ಶತ್ರುಗಳು ಇರುದಿಲ್ಲ, ನಮ್ಮ ವಹಿವಾಟಿನಿಂದ ಅದು ನಿರ್ಮಾಣಗೊಳ್ಳುತ್ತದೆ. ಸಂಪತ್ತು ಮತ್ತು ಬಡತನ ಶಾಪವಲ್ಲ, ಅದನ್ನು ಸರಿಯಾಗಿ ಉಪಯೋಗಿಸಬೇಕು. ಬಡತನ ಬಂದಲ್ಲಿ ಬೇಸರಿಸಬಾರದು, ಅದು ನಮ್ಮ ಬುದ್ದಿಯನ್ನು ಅಭಿವೃದ್ದಿಗೊಳಿಸುತ್ತದೆ. ಕಷ್ಟದಲ್ಲಿರುವವರ ಕಣ್ಣೀರನ್ನು ಒರಸೋಣ. ಇದರಿಂದ ನಮ್ಮ ಜೀವನ ಸಾರ್ಥಕ. ಸಮಾಜದ ಅಭಿವೃದ್ದಿಗಾಗಿ ನಾವು ಇದ್ದವರಿಂದ ಪಡೆದು ಸಮಾಜಕ್ಕೆ ನೀಡೊಣ ಎಂದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾಗತಿಕ ಬಂಟರ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿಯವರನ್ನು ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಸನ್ಮಾನಿಸಿದರು.
ವಸಾಯಿ-ಡಹಾಣು ಪ್ರಾದೇಶಿಕ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶಶಿಧರ ಕೆ.ಶೆಟ್ಟಿ ಯವರು ಸ್ವಾಗತಿಸಿದರು. ಅಶೋಕ್ ಪಕ್ಕಳ ಕಾರ್ಯಕ್ರಮವನ್ನು ನಿರ್ವಹಿಸಿದರು. ಗೌ. ಕಾರ್ಯದರ್ಶಿ ಕಣಂಜಾರು ಪ್ರವೀಣ್ ಶೆಟ್ಟಿಯವರು ವಂದನಾರ್ಪಣೆ ಮಾಡಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಗೌ. ಕೋಶಾಧಿಕಾರಿ ಸಿ.ಎ. ಐ. ಆರ್. ಶೆಟ್ಟಿ, ಜೊತೆ ಕೋಶಾಧಿಕಾರಿ ಕಿಶೋರ್ ಕುಮಾರ್ ಕುತ್ಯಾರ್, ಜೊತೆ ಕೋಶಾಧಿಕಾರಿ ಮಹೇಶ್ ಶೆಟ್ಟಿ, ಉಮಾ ಎಸ್. ಶೆಟ್ಟಿ, ರೇಖಾ ಆರ್ ಶೆಟ್ಟಿ, ಲತಾ ಆರ್.ಶೆಟ್ತಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ, ಸಮನ್ವಯಕ ಕರ್ನಿರೆ ಶ್ರೀಧರ ಶೆಟ್ಟಿ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ ಪಿ.ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಮೋಹನ್ ವಿ. ಶೆಟ್ಟಿ, ಉಪ ಸಮನ್ವಯಕ ಸುರೇಂದ್ರ ಶೆಟ್ಟಿ, ಪಾಲ್ಘರ್, ಗೌ. ಕೋಶಾಧಿಕಾರಿ ವಿಜಯ್ ಎಂ ಶೆಟ್ಟಿ, ಜೊತೆ ಕಾರ್ಯದರ್ಶಿ ದಿನೇಶ್ ಹೆಗ್ಡೆ ಎಕ್ಕಾರ್, ಜೊತೆ ಕೋಶಾಧಿಕಾರಿ ತಾರಾನಾಥ ಶೆಟ್ಟಿ. ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷೆ ಮಂಜುಳಾ ಆನಂದ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶರ್ಮಿಳಾ ಎಸ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅರುಣ್ ಶೆಟ್ಟಿ, ಜಗನ್ನಾಥ ಡಿ. ಶೆಟ್ಟಿ, ಅರ್ಚನ ಆರ್. ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ, ಶರತ್ ಎನ್. ಶೆಟ್ಟಿ, ದಯಾನಂದ ಬಿ ಶೆಟ್ಟಿ, ಸುಪ್ರೀತ್ ಶೆಟ್ಟಿ, ಸಾಯಿನಾಥ್ ಶೆಟ್ಟಿ ಹಾಗು ಸಲಹಾ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.
ಮಕ್ಕಳಿಂದ ವಿವಿಧ ಸಾಂಸ್ಕ್ಟುತಿಕ ಕಾರ್ಯಕ್ರಮ ಹಾಗೂ ಪ್ರಾದೇಶಿಕ ಸಮಿತಿಯವರಿಂದ ಸತೀಶ್ ಶೆಟ್ಟಿ ಕುತ್ಯಾರ್ ರಚನೆಯ, ಬಾಬಾ ಪ್ರಸಾದ್ ಅರಸ ಅವರ ನಿರ್ದೇಶನದಲ್ಲಿ ’ಮಾಜಂದಿ ಬೊಲ್ಪು’ ತುಳು ನಾಟಕವು ಜನರ ಗಮನ ಸೆಳೆದವು.








