ಮಂಗಳೂರು,ಫೆ.05: ಮೌಲ್ಯಾಧರಿತ ವಹಿವಾಟು ಯಶಸ್ವಿನ ಗುಟ್ಟು ಎಂದು ವೈದಕೀಯ ಸಲಕರಣೆಗಳ ಉತ್ಪಾದನೆಯಲ್ಲಿ ಜಾಗತೀಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಮೈಸೂರಿನ ಸ್ಕ್ಯಾನರೇ ಸಂಸ್ಥಾಪಕ ಹಾಗೂ ಆಡಳಿತ ನಿರ್ದೇಶಕ ವಿಶ್ವಪ್ರಸಾದ್ ಆಳ್ವ ಅಭಿಪ್ರಾತಪಟ್ಟರು.
ಅವರು ನಗರದ ಸೆಂಟ್ ಅಲೋಶಿಯಸ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ “ವೈದಕೀಯ ಸಲಕರಣೆ ಸಂಶೋಧನೆ” ಕುರಿತ ರಾಜ್ಯ ಮಟ್ಟದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ನಾಲ್ಕು ದೇಶಗಳಲ್ಲಿ ಘಟಕಗಳನ್ನು ಹೊಂದಿರುವ ಸ್ಕ್ಯಾನ್‌ರೇ ಇಷ್ಟರಲ್ಲೇ ಮೆಕ್ಸಿಕೊ, ರಷ್ಯಾ ಹಾಗೂ ಮಧ್ಯಪ್ರಾಚ್ಯ ದೇಶಗಳಲ್ಲಿ ಘಟಕಗಳನ್ನು ಆರಂಭಿಸಲಿದೆ ಎಂದು ಅವರು ವಿವರಿಸಿದರು.
ದೇಶದ ಸರ್ವಾಂಗೀಣ ಅಭಿವೃದ್ಧಿಗೆ, ಆರೋಗ್ಯ ಸಂರಕ್ಷಣೆ ಹಾಗೂ ಶಿಕ್ಷಣ ಕ್ಷೇತ್ರದ ಬಗ್ಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂದು ಈ ಸಂಧರ್ಭದಲ್ಲಿ ಪ್ರತಿಪಾದಿಸಿದರು.
ಸಂಸ್ಥೆಯ ರಿಜಿಸ್ಟಾರ್ ಸರಹರಿ, ಉಪಪ್ರಾಚಾರ್ಯ ಜಾನ್ ಸೆರಾ, ಪ್ರವೀನ್ ಮಾರ್ಟಿಸ್ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.