ಮಂಗಳೂರು : ಪೂರ್ವೋತ್ತರ ಹಸ್ತಶಿಲ್ಪ ಮತ್ತು ಕೈ ಮಗ್ಗದ ಅಭಿವೃದ್ಧಿ ನಿಗಮ ನಿಯಮಿತ ( ಕೇಂದ್ರ ಸರಕಾರದ ಅಧೀನಕೊಳ್ಳಪಟ್ಟ) ಇವರ ಪ್ರೋತ್ಸಾಹದೊಂದಿಗೆ ಈಶಾನ್ಯ ರಾಜ್ಯಗಳ ಕೈಮಗ್ಗ ಮತ್ತು ಕುಶಲಕರ್ಮಿಗಳ ಅಭಿವೃದ್ದಿ ಕಾರ್ಪೋರೇಷನ್ ಅಶ್ರಯದಲ್ಲಿ ಈಶಾನ್ಯ ರಾಜ್ಯಗಳ ಅತ್ಯೂತ್ತಮ ಗುಣಮಟ್ಟದ ಹಾಗೂ ಅಪರೂಪದ ವೈವಿಧ್ಯಮಯ ಕೈಮಗ್ಗ ಹಾಗೂ ಕರಕುಶಲ ವಸ್ತುಗಳ (ಉತ್ಪನ್ನಗಳ) ಪ್ರಾತ್ಯಕ್ಷಿಕೆ, ಪ್ರದರ್ಶನ ಮತ್ತು ಮಾರಾಟ ಮೇಳ ಮಂಗಳೂರಿನ ಹೋಟೇಲ್ ವುಡ್ಲ್ಯಾಂಡ್ಸ್ ( ಬಂಟ್ಸ್ ಹಾಸ್ಟೇಲ್ ರಸ್ತೆ) ನಲ್ಲಿ ಫೆಬ್ರವರಿ 2ರಿಂದ ಆರಂಭಗೊಂಡಿದ್ದು, ಇದರ ಅಧಿಕೃತ ಉದ್ಘಾಟನೆಯು ಫೆಬ್ರವರಿ 4ರಂದು ಬೆಳಿಗ್ಗೆ ನಡೆಯಿತು.
ಅಪರೂಪದ ಈ ಮೇಳವನ್ನು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಶ್ರೀಮತಿ ಜೆಸಿಂತಾ ವಿಜಯ ಅಲ್ಪೆಡ್ ಅವರು ಉದ್ಘಾಟಿಸಿ, ಶುಭಾ ಹಾರೈಸಿದರು.
ದ.ಕ ಜಿಲ್ಲೆಯಲ್ಲಿ ಬಹಳ ಅಪರೂಪವಾದ ಈಶಾನ್ಯ ರಾಜ್ಯದ ಉತ್ಪನ್ನಗಳು ಇಲ್ಲಿನ ಜನತೆಗೆ ಈ ಮೇಳದ ಮೂಲಕ ಲಭಿಸುತ್ತಿದ್ದು, ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಉದ್ಯಮದಲ್ಲಿ ತೊಡಗಿಕೊಂಡಿರುವ 8 ಈಶಾನ್ಯ ( ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ್, ಮೇಗಾಲಯ, ಮಿಜೋರಂ, ನಾಗಾಲ್ಯಂಡ್, ತ್ರಿಪುರ ಹಾಗೂ ಸಿಕ್ಕಿಂ) ರಾಜ್ಯಗಳ ಸುಮಾರು 50 ಮಂದಿ ಕರಕುಶಲ ಮತ್ತು ಕಲಾಕೃತಿಗಳ ತಯಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜೀವನ ಸಾಗಿಸುವ ಕುಶಲಕರ್ಮಿಗಳು ಈ ಮೇಳದಲ್ಲಿ ಭಾಗವಹಿಸಲಿದ್ದಾರೆ. ಎಂದು ಮೇಳದ ಸಂಯೋಜಕ ಹಾಗೂ North Eastern Handicrafts & Handlooms Development Corporation Ltd ನ ಮ್ಯಾನೇಜರ್ ಶ್ರೀ ಪಿ.ವಿ ರಾಜು ಅವರು ಸುದ್ಧಿಗಾರರಿಗೆ ತಿಳಿಸಿದರು.
ಕೇಂದ್ರ ಸರಕಾರದ ಕೈಮಗ್ಗ ಇಲಾಖೆಯು ಇಲ್ಲಿಯ ಕುಶಲಕರ್ಮಿಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮತ್ತು ಕುಶಲಕರ್ಮಿಗಳನ್ನು ಸಬಲೀಕರಣಗೊಳಿಸಿ ಉತ್ತೇಜನ (ಪ್ರೋತ್ಸಾಹ) ನೀಡುವ ನಿಟ್ಟಿನಲ್ಲಿ ಈ ಮೇಳವನ್ನು ಅಯೋಜಿಸಲಾಗಿದೆ. ಈ ಮೆಳದಲ್ಲಿ ಈಶಾನ್ಯ ರಾಜ್ಯಗಳ ಕೈಮಗ್ಗ ಮತ್ತು ಕರಕುಶಲ ಹಾಗೂ ಗುಡಿ ಕೈಗಾರಿಗಳ ಉತ್ಪನ್ನಗಳು ಪ್ರದರ್ಶನ ಮತ್ತು ಮಾರಾಟಗೊಳ್ಳಲಿದೆ.
ಬೆತ್ತದ ಪೀಠೋಪಕರಣಗಳು, ಬೆತ್ತ ಮತ್ತು ಬಿದಿರಿನಿಂದ ತಯಾರಿಸಲಾದ ಬುಟ್ಟಿಗಳು, ವಿವಿಧ ವಿನ್ಯಾಸಗಳ ಕೈಮಗ್ಗದ ಬಟ್ಟೆಗಳು, ವೈವಿಧ್ಯಮಯ ವಿನ್ಯಾಸದ ಸಾರಿಗಳು, ಬೆಡ್ ಕವರ್ಗಳು, ಎಂಬ್ರಾಡರಿ ವಸ್ತ್ರಗಳು, ವಿವಿಧ ವಿನ್ಯಾಸಗಳ ಮರದ ಕೆತ್ತನೆಗಳು, ವಿಶೇಷ ರೀತಿಯ ಜ್ಯುವೆಲ್ಲರಿಗಳು,(ಅಭರಣಗಳು), ಸೆಣಬಿನಿಂದ ತಯಾರಿಸಲಾದ ವಸ್ತುಗಳು, ಮಣ್ಣಿನ ಕಲಾಕೃತಿಗಳು, ಕಸೂತಿ ಉಡುಪುಗಳು, ಲೋಹದ ಕಲಾಕೃತಿಗಳು ಸೇರಿದಂತೆ ಹಲಾವರು ವೈವಿದ್ಯಮಯ ವಸ್ತುಗಳ ವಿಶೇಷ ವಿನ್ಯಾಸದ ಕೈಮಗ್ಗ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಈ ಮೇಳದಲ್ಲಿ ಇಲ್ಲಿನ ಜನತೆಗೆ ಲಭ್ಯವಾಗಲಿದೆ ಎಂದು ರಾಜು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಹ್ಯಾಂಡಿಕ್ರಾಫ್ಟ್ಸ್ ಪ್ರಮೋಷನ್ ಅಫೀಸರ್ ಜೇಕಾಬ್ ಡಿ.ಸೋಜಾ ಹಾಗೂ ಹೊಟೇಲ್ ವುಡ್‌ಲ್ಯಾಂಡ್ಸ್‌ನ ಮಾಲ್ಹಕ ವೈ.ರಮೇಶ್ ಭಟ್ ಉಪಸ್ಥಿತರಿದ್ದರು.