ಉಡುಪಿ: ಖಾಸಗಿ ವೇಗದೂತ ಬಸ್ಸೊಂದು ಮೀನಿನ ಲಾರಿಗೆ ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಯುವಕನೋರ್ವ ಸಾವನ್ನಪ್ಪಿ ಇನ್ನೋರ್ವರಿಗೆ ಗಾಯವಾದ ಘಟನೆ ಉಡುಪಿಯ ಕಾಪು ಸಮೀಪದ ಪೊಲಿಪು ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.
ಕಾಪು ಕೋತಕಲಟ್ಟೆ ನಿವಾಸಿ ಪ್ರೀತಮ್ ಶೆಟ್ಟಿ(23) ಅಪಘಾತದಲ್ಲಿ ಸಾವನ್ನಪ್ಪಿದ ದುರ್ಧೈವಿಯಾಗಿದ್ದು ಇವರು ಉಡುಪಿಯ ಖಾಸಗಿ ಮೆಡಿಕಲ್ ಸಂಸ್ಥೆಯ ಫಾರ್ಮಾ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇನ್ನು ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜು ವಿದ್ಯಾರ್ಥಿನಿ ಮೇಘನಾ ಅವರಿಗೂ ಗಂಭೀರ ಗಾಯಗಳಾಗಿದೆ.
ಕಾಪು ಪೊಲಿಪು ಬಳಿ ಕೆಟ್ಟು ನಿಂತಿದ್ದ ಮೀನು ಲಾರಿಯೊಂದನ್ನು ಹಾದು ಹೋಗುವ ಸಂದರ್ಭ ಓವರ್ಟೇಕ್ ಹಾಗೂ ಚಾಲಕ ಅತೀ ವೇಗದ ಸಾಹಸಕ್ಕೆ ಬಸ್ಸು ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು ಈ ಸಂದರ್ಭ ಬಸ್ಸಿನ ಎದುರುಗಡೆಯ ಚಾಲಕನ ಸಮೀಪದ ಅಡ್ಡ ಬದಿ ಸೀಟಿನಲ್ಲಿ ಕುಳಿತಿದ್ದ ಪ್ರೀತಮ್ ಅವರಿಗೆ ರಾಡ್ ತಲೆಗೆ ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬಸ್ಸು ಚಾಲಕ ಅಜಾರಗುಕತೆ ಹಾಗೂ ನಿರ್ಲಕ್ಷ್ಯವನ್ನು ಖಂಡಿಸಿದ ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟಿಸಿದರು ಅಲ್ಲದೇ ಚಾಲಕನ ಚಾಲನಾ ಪರವಾನಿಗೆ ರದ್ದು ಮಾಡುವಂತೆ ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಪಡುಬಿದ್ರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೇಸುತ್ತಿದ್ದಾರೆ.