
ಮಂಗಳೂರು,ಜ.28 : ರೋಹಿತ್ ವೆಮಲಾರ ಸಾವಿನ ತನಿಖೆಯನ್ನು ಸಿಬಿಐ ನಡೆಸುವುದು ಬೇಡ, ಸಿಬಿಐ ಕೇಂದ್ರ ಸರಕಾರದ ಅಧೀನದಲ್ಲಿದ್ದು ನ್ಯಾಯ ಸಿಗಲಾರದು. ರೋಹಿತ್ ಸಾವಿನ ಬಗ್ಗೆ ವಿಶೇಷ ತನಿಖಾ ತಂಡ ರಚಿಸಲಿ ಎಂದು ನಾಗರಿಕ ಹಕ್ಕು ಜಾಗೃತಿ ಸಮಿತಿ ಅಧ್ಯಕ್ಷ ಚಂದ್ರಕುಮಾರ್ ಹೇಳಿದ್ದಾರೆ.
ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿಗಳ ನಾಗರಿಕ ಹಕ್ಕು ಜಾಗೃತಿ ಸಮಿತಿ ವತಿಯಿಂದ ಡಿ.ಸಿ.ಮನ್ನಾ ಜಮೀನಿನ ಸರ್ವೆ ಮಾಡಲು ವಿಶೇಷ ಸರ್ವೇದಾರಾರನ್ನು ನೇಮಿಸುವಂತೆ ಒತ್ತಾಯಿಸಿ ಹಾಗೂ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ನಡೆಸಿದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ರೋಹಿತ್ ವೆಮುಲ ಪರಿಶಿಷ್ಟ ಜಾತಿ ಪಂಗಡಗಳ ಬಗ್ಗೆ ಸಂಶೋಧನತ್ಮಾಕವಾಗಿ ಅಧ್ಯಯನ ಮಾಡುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿ. ಆದ್ರೆ, ಮೇಲ್ವರ್ಗದ ವಿದ್ಯಾರ್ಥಿಗಳು ಆತನಿಗೆ ಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದು,ಆತ ಆತ್ಮಹತ್ಯೆ ಮಾಡಿದ್ದಾನೆ.ಆತನ ಸಾವಿನ ಬಗ್ಗೆ ಸರಿಯಾದ ತನಿಖೆಯಾಗಬೇಕು ಎಂದು ಅವರು ಹೇಳಿದರು
ಎಸ್.ಸಿ ಎಸ್.ಟಿ ಜನರು ಡಿಸಿ ಮನ್ನಾ ಭೂಮಿಗೆ ಅರ್ಜಿ ಸಲ್ಲಿಸಿದರೆ ವಿಳಂಬ ಮಾಡುತ್ತಾರೆ, ಮಾತ್ರವಲ್ಲ ಕೇವಲ 2-3 ಸೆನ್ಸ್ ಜಾಗ ನೀಡುತ್ತಿದ್ದಾರೆ. ಈ ಬಗ್ಗೆ ರಾಜಕಾರಣಿಗಳು, ಅಧಿಕಾರಿಗಳನ್ನು ದೂರಿದರೆ ನಮ್ಮನ್ನು ಕಡೆಗಣಿಸಲಾಗುತ್ತದೆ ಆ ಮೂಲಕ ಅಧಿಕಾರದ ಪ್ರಹಾರ ನಡೆಯುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡ ರಾಮಚಂದ್ರ ಕೆಂಬಾರ,ಕೆ.ನಾರಾಯಾಣ,ಜಯರಾಂ, ರಮೇಶ್ ಬೋದಿ,ರಘುರಾಂ ಹೌದಾಲ್ ಮತ್ತಿತರರು ಪಾಲ್ಗೊಂಡಿದರು.