ಕನ್ನಡ ವಾರ್ತೆಗಳು

ಬೈಂದೂರು: ಹುಲ್ಲು ತುಂಬಿದ್ದ ವಾಹನಕ್ಕೆ ಬೆಂಕಿ; ತಪ್ಪಿದ ಬಾರೀ ಅನಾಹುತ

Pinterest LinkedIn Tumblr

ಕುಂದಾಪುರ: ಹುಲ್ಲು ತುಂಬಿದ ಟಾಟಾ 407 ವಾಹನವೊಂದಕ್ಕೆ ಬೆಂಕಿ ತಗುಲಿದ ಘಟನೆ ಬೈಂದೂರು ಸಮೀಪದ ಹೇರೂರಿನ ಯೋಜನಾ ನಗರ ಬಳಿ ನಡೆದಿದೆ.

Byndoor_Lorry_Fire (7) Byndoor_Lorry_Fire (5) Byndoor_Lorry_Fire (3) Byndoor_Lorry_Fire (2) Byndoor_Lorry_Fire (1) Byndoor_Lorry_Fire (9) Byndoor_Lorry_Fire (8) Byndoor_Lorry_Fire (4) Byndoor_Lorry_Fire (6)

ಭಾರತಿ ಎನ್ನುವವರ ಮಾಲೀಕತ್ವದ ಅವರ ಪತಿ ರವೀಂದ್ರ ಗಾಣಿಗ ಚಲಾಯಿಸುತ್ತಿದ್ದ ವಾಹನದಲ್ಲಿ ಬೈಹುಲ್ಲು ಸಾಗಿಸುತ್ತಿದ್ದ ವೇಳೆ ಬೆಂಕಿ ತಗುಲಿದೆ. ತಕ್ಷಣವೇ ಕುಂದಾಪುರ ಅಗ್ನಿಶಾಮಕ ದಳಕ್ಕೆ ಫೋನಾಯಿಸಿದ್ದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದವರು ಬೆಂಕಿಯನ್ನು ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿರಬಹುದೆಂದು ಅಂದಾಜಿಸಲಾಗಿದ್ದು ಲಾರಿಯ ಹಿಂಭಾಗ ಸುಟ್ಟಿದ್ದು ಸಂಭವನೀಯ ಅನಾಹುತ ತಪ್ಪಿದೆ. ಲಾರಿಯಲಿದ್ದ ಸಂಪೂರ್ಣ ಹುಲ್ಲುಗಳನ್ನು ಕೆಳಕ್ಕೆ ಹಾಕಿದ ತರುವಾಯ ಬೆಂಕಿ ನಂದಿಸಿ ಲಾರಿಯನ್ನು ಬೆಂಕಿಯಿಂದ ಸುಡದಂತೆ ರಕ್ಷಿಸಲಾಯಿತು.

ಅಗ್ನಿಶಾಮಕ ಠಾಣಾಧಿಕಾರಿ ಭರತ್ ಮತ್ತು ಸಿಬ್ಬಂದಿಗಳು ಹಾಗೂ ಸ್ಥಳಿಯರ ಸಹಕಾರದಲ್ಲಿ ಬೆಂಕಿ ಶಮನ ಕಾರ್ಯ ನಡೆಯಿತು.

Write A Comment