ಕಾಸರಗೋಡು, ಜ.26 : ವಸತಿಗೃಹದ ಸ್ನಾನಗೃಹದಲ್ಲಿ ಸ್ನಾನ ಮಾಡುತ್ತಿದ್ದ ವಿದ್ಯಾರ್ಥಿಯೋರ್ವಳ ಸ್ನಾನದ ದೃಶ್ಯವನ್ನು ಮೊಬೈಲ್ ಫೋನ್‌ನಲ್ಲಿ ಸೆರೆ ಹಿಡಿದ ಯುವಕನೋರ್ವನನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಜಾಫರ್ (18) ಎಂದು ಗುರುತಿಸಲಾಗಿದೆ. ವಸತಿಗೃಹದಲ್ಲಿ ವಾಸವಿರುವ ವಿದ್ಯಾರ್ಥಿನಿ ಸ್ನಾನಗೃಹದಲ್ಲಿ ಸ್ನಾನಮಾಡುತ್ತಿದ್ದಾಗ ಜಾಫರ್ ಕಿಟಕಿಯ ಮೂಲಕ ಆ ದೃಶ್ಯವನ್ನು ತನ್ನ ಮೊಬೈಲ್ ಫೋನ್ ನಲ್ಲಿ ಸೆರೆ ಹಿಡಿದಿದ್ದ ಇದನ್ನು ಗಮನಿಸಿದ ವಿದ್ಯಾರ್ಥಿನಿ ಬೊಬ್ಬೆ ಹೊಡೆದಾಗ ವಸತಿಗೃಹದಲ್ಲಿದ್ದ ಇತರರು ಧಾವಿಸಿ ಬಂದಿದ್ದು ಅಷ್ಟರಲ್ಲಿ ಜಾಫರ್ ಅಲ್ಲಿಂದ ಪರಾರಿಯಾಗಿದ್ದ.
ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡ ಕಾಸರಗೋಡು ನಗರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ಮೊಬೈಲ್ ಫೋನ್ ಪರಿಶೀಲಿಸಿದಾಗ ವಿದ್ಯಾರ್ಥಿನಿಯ ಸ್ನಾನದ ದೃಶ್ಯಗಳು ಪತ್ತೆಯಾಗಿವೆ. ಈ ಬಗ್ಗೆ ಮುಂದಿನ ತನಿಖೆ ನಡೆಯುತ್ತಿದೆ.