
ಮಂಗಳೂರು,ಜ.25 : ನಗರದ ಬೋಳೂರಿನ ಸುಲ್ತಾನ್ ಬತ್ತೇರಿಯಲ್ಲಿ ಮೀನುಗಾರಿಕಾ ಇಲಾಖೆಯ ನಬಾರ್ಡ್ ಯೋಜನೆಯಡಿ 5ಕೋ.ರೂ. ವೆಚ್ಚದಲ್ಲಿ 100.ಮೀ ಉದ್ದದ ಮೀನುಗಾರಿಕಾ ಬರ್ತಿಂಗ್ ಜೆಟ್ಟಿ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸವು ಭಾನುವಾರ ನೆರವೇರಿತು.
ಕರಾವಳಿ ಜಿಲ್ಲೆಯ ಯುದ್ದಕ್ಕೂ ಜಟ್ಟಿ ನಿರ್ಮಾಣಗೊಂಡರೆ,ಮೀನುಗಾರರಿಗೆ ಮೀನುಗಾರಿಕೆ ಮಾಡಲು ಅನುಕೂಲವಾಗಲಿದ್ದು ಎಂಬ ನಿಟ್ಟಿನಲ್ಲಿ ಈ ಕಾಮಗಾರಿಯನ್ನು ನಡೆಸಲಾಗುವುದು ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡೀಸ್ ಅವರು ಬರ್ತಿಂಗ್ ಜೆಟ್ಟಿ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಸುಲ್ತಾನ್ ಬತ್ತೇರಿಯಲ್ಲಿ ನಿರ್ಮಾಣವಾಗುವ ಜೆಟ್ಟಿಗೆ 5 ಕೋಟಿ ಮಂಜೂರಾಗಿದ್ದು ಅಗತ್ಯ ಬಿದ್ದರೆ 5 ಕೋಟಿ ಹೆಚ್ಚುವರಿ ಹಣವನ್ನು ಮಂಜೂರು ಮಾಡಲಾಗುವುದು ಹಾಗೂ ಈ ಪ್ರದೇಶದಲ್ಲಿ ಐಸ್ ಪ್ಲಾಂಟ್, ಡೀಸೆಲ್ ಬಂಕ್ ಮೊದಲಾದ ಮೂಲ ಸೌಕರ್ಯವನ್ನು ಒದಗಿಸಿಕೊಡಲಾಗುವುದು ಎಂದು ತಿಳಿಸಿದರು.
ಮ.ನ.ಪಾ ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್, ಮ.ನ.ಪಾ ಸಚೇತಕ ಶಶಿಧರ್ ಹೆಗ್ಡೆ, ಮ.ನ.ಪಾ ಸದಸ್ಯ ಲತಾ ಕಮಲಾಕ್ಷ ಸಾಲಿಯಾನ್ ಕಾಂಗ್ರೇಸ್ ಮುಖಂಡೆ ಸರಳ ಕಾಂಚನ್,ಮೋಗವೀರ ಮುಖಂಡ ರಾಜಶೇಖರ್ ಕರ್ಕೇರಾ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.