ಕಾಸರಗೋಡು,ಜ.23 : “ಹವ್ಯಕ”ವೆಂದರೆ ಕನ್ನಡ ನಾಡಿನ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕೇಂದ್ರೀಕೃತವಾದ ಪಂಗಡ. ಹವ್ಯಕರ ಆಡುಭಾಷೆ “ಹವ್ಯಕ ಭಾಷೆ”, ಅಥವಾ ಹವಿಗನ್ನಡ. ಮಧ್ಯಕಾಲೀನ ಹಳೆಗನ್ನಡ ಭಾಷೆಗೆ ಹತ್ತಿರವಾದ ಈ ಹವಿಗನ್ನಡ – ಪ್ರಸ್ತುತ ಅನೇಕ ಸ್ಥಳೀಯ ಆವೃತ್ತಿಗಳನ್ನು ಹೊಂದಿದೆ.
ಆಧುನಿಕ ಯುಗದಲ್ಲಿ ಅಂತರ್ಜಾಲದಲ್ಲಿ ಒಪ್ಪಣ್ಣನ ನೆರೆಕರೆ www.oppanna.com ಎಂಬ ಹವ್ಯಕ ವೆಬ್ -ಸೈಟ್ ಕಳೆದ ಎಂಟು ವರುಷಗಳಿಂದ ತನ್ನ ಸಾಹಿತ್ಯ ಕೃಷಿಯನ್ನು ಮಾಡುತ್ತಿದೆ. oppanna.com ಸಾಹಿತಿ-ಚಿಂತಕ-ಬರಹಗಾರರ ಬಳಗವು ಈಗ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.) ಎಂಬ ಹೆಸರಿನಲ್ಲಿ ನೋಂದಾವಣೆಗೊಂಡು ಮಾನ್ಯತೆ ಪಡೆದ ಸಂಸ್ಥೆಯಾಗಿದೆ.
ಈಗಾಗಲೇ ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಯ ಕಡೆಗಿನ ಕೊಡುಗೆ ಮತ್ತು ಸಾಮಾಜಿಕ- ಸಾಂಸ್ಕೃತಿಕ ಕಾರ್ಯಗಳ ಮೂಲಕ ಪ್ರತಿಷ್ಠಾನವು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಕಳೆದ ನಾಲ್ಕು ವರ್ಷಗಳಿಂದ ಸೌರ ಯುಗಾದಿಗೆ ಸಂಪೂರ್ಣ ಹವಿಗನ್ನಡದಲ್ಲೇ ಆಯೋಜನೆ ಆದ ವಿಷು ವಿಶೇಷ ಸ್ಪರ್ಧೆಯು ಹವ್ಯಕ ಸಾಹಿತ್ಯ ಲೋಕಕ್ಕೆ ಹೊಸ ಸಂಚಲನ ನೀಡಿದೆ.
ಈ ವರ್ಷ ಪ್ರತಿಷ್ಠಾನವು ಯುಗಾದಿಯ ಪರ್ವಕಾಲದಲ್ಲಿ ಹೊಸ ಸಾಹಿತಿಗಳ ಅನ್ವೇಷಣೆಗಾಗಿ “ವಿಷು ವಿಶೇಷ ಸ್ಪರ್ಧೆ – 2016” ಆಯೋಜನೆಗೊಳಿಸಿದೆ.
ಬನ್ನಿ, ಭಾಗವಹಿಸಿ, ನಿಮ್ಮ ಮಿತ್ರರಿಗೂ ತಿಳಿಸಿ.
ವಿಷು ವಿಶೇಷ ಸ್ಪರ್ಧೆ – 2016 ವಿವರಗಳು:
1. ಪ್ರಬಂಧ: ವಿಷಯ : “ಅತಿಯಾದ ನಗರೀಕರಣ – ವರವೋ ಶಾಪವೊ?”
750 ಶಬ್ದಗಳಿಗೆ ಸೀಮಿತಗೊಳಿಸಿ
2. ಕಥೆ : ವ್ಯಾಪ್ತಿ: ಕುಟುಂಬ ಹಾಗೂ ಮಾನವೀಯ ಮೌಲ್ಯಗಳು (ವಿಷಯ ಸ್ಪರ್ಧಾರ್ಥಿಗಳ ಆಯ್ಕೆ)
1000 ಶಬ್ದಗಳಿಗೆ ಸೀಮಿತಗೊಳಿಸಿ
3. ಕವಿತೆ: ವಿಷಯ: ಪ್ರಕೃತಿ ವಿಕೋಪ
30 ಸಾಲುಗಳಿಗೆ ಮಿತಿಗೊಳಿಸಿ.
ಛಂದೋಬದ್ಧವಾದ ಕವಿತೆಗಳಿಗೆ ಹೆಚ್ಚಿನ ಆದ್ಯತೆ.
4. ನಗೆಬರಹ: ಸದಭಿರುಚಿಯ ಲಘುಬರಹ ಈ ವಿಭಾಗಕ್ಕೆ ಬರಲಿ. (ಅಪಹಾಸ್ಯ, ಅಶ್ಲೀಲತೆಗಳು ಬೇಡ)
500 ಶಬ್ದಗಳಿಗೆ ಮಿತಿಗೊಳಿಸಿ.
5. ವ್ಯಂಗ್ಯ ಚಿತ್ರ (ಕಾರ್ಟೂನು) ಸ್ಪರ್ಧೆ:ಭೋಜನ ಸಂದರ್ಭದಲ್ಲಿ ಕಂಡ ರಸ ನಿಮಿಷಗಳ ಬಗ್ಗೆ ವ್ಯಂಗ್ಯ ಚಿತ್ರವನ್ನು ರಚಿಸಿ ಹವ್ಯಕ ಭಾಷೆಯಲ್ಲಿ ಸೂಕ್ತ ಅಡಿಬರಹವನ್ನು ನೀಡಿ ಕಳುಹಿಸುವುದು.
ಗಾತ್ರ: ಅಂಚೆಯಲ್ಲಿ ಕಳುಹಿಸುವುದಾದರೆ ಗರಿಷ್ಟ ಎ4 ಅಳತೆಯಲ್ಲಿ.
ಮಿಂಚಂಚೆಯಲ್ಲಿ ಕಳುಹಿಸುವುದಾದರೆ ಗರಿಷ್ಠ – 1 MB
ನಿಯಮಗಳು:
1. ಎಲ್ಲಾ ಬರಹಗಳೂ ಕಡ್ಡಾಯವಾಗಿ ಹವ್ಯಕಭಾಷೆ- ಕನ್ನಡಲಿಪಿಯಲ್ಲಿ ಇರಬೇಕು.
2. ಹವ್ಯಕ ಪರಂಪರೆ – ಸಂಸ್ಕೃತಿಯ ಹಿರಿಮೆಗಳ ಬಿಂಬಿಸುವ ಬರಹಗಳಿಗೆ ಆದ್ಯತೆ.
3. ಸ್ಪರ್ಧೆಗೆ ಬರುವ ಯಾವುದೇ ಬರಹ / ವ್ಯಂಗ್ಯ ಚಿತ್ರ ಈ ಹಿಂದೆ ಬೇರೆಲ್ಲಿಯೂ ಪ್ರಕಟ ಆಗಿರಬಾರದು.
4. ಸ್ಪರ್ಧೆಗೆ ಬಂದ ಎಲ್ಲಾ ಬರಹ / ವ್ಯಂಗ್ಯ ಚಿತ್ರಗಳ ಸಂಪೂರ್ಣ ಸ್ವಾಮ್ಯ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ದ್ದೇ ಆಗಿರುತ್ತದೆ.
5. ಸ್ಪರ್ಧೆಯ ವಿಚಾರದಲ್ಲಿ ಪ್ರತಿಷ್ಠಾನದ ತೀರ್ಮಾನವೇ ಅಂತಿಮ.
6. ಪ್ರತಿ ವಿಭಾಗದಲ್ಲಿಯೂ ಪ್ರಥಮ ಮತ್ತು ದ್ವಿತೀಯ ಎರಡು ಬಹುಮಾನಗಳು ಇರುತ್ತವೆ. ಸೂಕ್ತ ಸಂದರ್ಭದಲ್ಲಿ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಗುವುದು.
7. ವಿಷು ವಿಶೇಷ ಸ್ಪರ್ಧೆ – 2015 ರಲ್ಲಿ ಭಾಗವಹಿಸಿ ಪ್ರಥಮ ಅಥವಾ ದ್ವಿತೀಯ ಸ್ಥಾನ ಪಡೆದವರು ಈ ಬಾರಿ ಸ್ಪರ್ಧೆಯ ಅದೇ ವಿಭಾಗದಲ್ಲಿ ಭಾಗವಹಿಸುವಂತಿಲ್ಲ.
8. ಬಹುಮಾನ ವಿಜೇತರ ವಿವರಗಳನ್ನು ವಿಷುವಿನಂದು (14-04-2016ರಂದು) <http://oppanna.com/> ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು.
9. ಹಸ್ತಪ್ರತಿಗಳನ್ನು ಕಳುಹಿಸುವುದಾದರೆ ಕಡ್ಡಾಯವಾಗಿ ಎ4 ಹಾಳೆಯಲ್ಲಿಯೇ ಬರೆದಿರಬೇಕು.
10. ಭಾಗವಹಿಸಲು ಕೊನೆಯ ದಿನಾಂಕ 03-03-2016
ಹೆಸರು, ಸಂಪೂರ್ಣ ವಿಳಾಸ, ಹುಟ್ಟಿದ ತಾರೀಕು, ದೂರವಾಣಿ ಸಂಖ್ಯೆ, ಸ್ವವಿವರಗಳನ್ನು ಕಡ್ಡಾಯವಾಗಿ ಪ್ರತ್ಯೇಕ ಹಾಳೆಯಲ್ಲಿ ಬರೆದು ನಿಮ್ಮ ಬರಹ/ ವ್ಯಂಗ್ಯ ಚಿತ್ರದ ಜೊತೆಗೆ ಈ ವಿಳಾಸಕ್ಕೆಕಳುಹಿಸಿಕೊಡಿ:
ಅಂಚೆ ವಿಳಾಸ:
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ),
C/O ಶ್ರೀಕರ ಅಸೋಸಿಯೇಟ್ಸ್
ಪ್ರಥಮ ಮಹಡಿ, ಕಲ್ಪತರು ಸಂಕೀರ್ಣ
ಗಾಂಧಿ ನಗರ, ಸುಳ್ಯ – 574239
ಮಿಂಚಂಚೆ ವಿಳಾಸ: editor@oppanna.com
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಸಂಖ್ಯೆ:
ಮಂಗಳೂರು – 9901200134 / 9449806563, ಕಾಸರಗೋಡು – 08547245304,ಬೆಂಗಳೂರು – 9535354380 / 9448271447
ಅಥವಾ ಅಂತರ್ಜಾಲ ಪುಟದಲ್ಲಿ ಲಭ್ಯ.
ವಿಷು ವಿಶೇಷ ಸ್ಪರ್ಧೆ 2016 – ಸಂಚಾಲಕರು:
ರವಿಶಂಕರ ದೊಡ್ಡಮಾಣಿ
editor@oppanna.com / 08547245304
ಗಮನಿಸಿ: ಈ ಸ್ಪರ್ಧೆ ಕೇವಲ ಹವ್ಯಕರಿಗಾಗಿ ಅಲ್ಲ, ಹವ್ಯಕ ಭಾಷೆಗಾಗಿ.