ಕುಂದಾಪುರ: ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯಸರಕಾರ ಹೊರಡಿಸಿರುವ ದ್ವಿಚಕ್ರ ವಾಹನ ಸವಾರರಿಗೆ ಹಾಗೂ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಆದೇಶವು ಫೆ.1 ರಿಂದ ಉಡುಪಿ ಜಿಲ್ಲೆಯಲ್ಲಿ ಪಾಲನೆಯಾಗಲಿದ್ದು ಅದಕ್ಕೆ ಪೂರ್ವಭಾವಿಯಗಿ ಜನರಲಿ ಹೆಲ್ಮೆಟ್ ಕುರಿತಾದ ಅರಿವು ಹಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕುಂದಾಪುರ ಪೊಲೀಸರು ನೂತನ ಕ್ರಮಕ್ಕೆ ಮುಂದಾದರು.
ಶುಕ್ರವಾರ ಬೆಳಿಗ್ಗೆ ಕುಂದಾಪುರ ಶಾಸ್ತ್ರೀ ವ್ರತ್ತದಿಂದ ಬೈಕುಗಳಲ್ಲಿ ಹೆಲ್ಮೆಟ್ ಧರಿಸಿ ಜಾಥಾ ನಡೆಸಿದರು. ಕುಂದಾಪುರ ಪ್ರಮುಖ ಬೀದಿಗಳಲ್ಲಿ ಸಾಗಿದ ಈ ಜಾಥಾ ಹೆಲ್ಮೆಟ್ ಬಳಕೆಯ ಕುರಿತ ವಿಚಾರ, ಐ.ಎಸ್.ಐ. ಮಾರ್ಕ್ ಇರುವ ಹೆಲ್ಮೆಟ್ ಧರಿಸುವ ಬಗ್ಗೆ ಹಾಗೂ ಎಂ.ಆರ್.ಪಿ. ದರಕ್ಕಿಂತ ಜಾಸ್ಥಿ ಹಣ ನೀಡದಂತೆ ಜನರಲ್ಲಿ ಅರಿವು ಮೂಡಿಸಲಾಯಿತು. ಅಲ್ಲದೇ ಫೆ.1 ರಿಂದ ದ್ವಿಚಕ್ರ ವಾಹನ ಸವಾರ ಹಾಗೂ ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಯೇ ರಸ್ತೆಗಿಳಯ್ಬೇಕೆಂಬ ಬಗ್ಗೆ ಸಂದೇಶವನ್ನು ನೀಡಲಾಯಿತು.
ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಬೈಕ್ ಜಾಥಾಕ್ಕೆ ಚಾಲನೆ ನೀಡಿದರು. ಕುಂದಾಪುರ ವ್ರತ್ತ ನಿರೀಕ್ಷಕ ದಿವಾಕರ್ ಪಿ.ಎಂ., ಎಸ್.ಐ. ನಾಸೀರ್ ಹುಸೇನ್, ಸಂಚಾರಿ ಠಾಣೆ ಉಪನಿರೀಕ್ಷಕಾರದ ಜಯ ಹಾಗೂ ದೇವೇಂದ್ರ ಸೇರಿದಂತೆ ಕುಂದಾಪುರ ಠಾಣೆ ಹಾಗೂ ಸಂಚಾರಿ ಠಾಣೆಯ ಸಿಬ್ಬಂದಿಗಳು ಇದ್ದರು.