ಮಂಗಳುರು,ಜ.19 : ದ.ಕ ಜಿಲ್ಲಾ ಮಟ್ಟದ ಕರಾವಳಿ ಉತ್ಸವ ಜ.23ರಿಂದ 31 ರವರೆಗೆ ನಗರದ ಕದ್ರಿ ಉದ್ಯಾವನ ಹಾಗೂ ಲಾಲ್ ಭಾಗ್ ನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ್ ರೈ ಅವರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಉತ್ಸವ ಪೂರ್ವ ಸಿದ್ದತಾಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ವಿವಿಧ ಕಾರಣಗಳಿಂದ 2016 ಸಾಲಿನ ಕರಾವಳಿ ಉತ್ಸವ ವಿಳಂಬಗೊಂಡಿದ್ದು, ಇದರ ಪೂರ್ವಸಿದ್ದತಗೆ ಈಗಾಗಲೇ ಸಮಿತಿಯನ್ನು ರಚಿಸಲಾಗಿದ್ದು, ಸರಕಾರವು ಈ ಉತ್ಸವಕ್ಕಾಗಿ 30 ಲಕ್ಷ ರೂ ನೀಡುತ್ತಿದೆ ಎಂದು ಅವರು ಹೇಳಿದರು.
ಜ.23ರಂದು ಕರಾವಳಿ ಉತ್ಸವದ ಪ್ರಯುಕ್ತ ಕದ್ರಿ ಉದ್ಯಾನವನದಲ್ಲಿ ಪ್ರಲಪುಷ್ಪ ಪ್ರದರ್ಶನದ ಉದ್ಘಾಟನೆ ನಡೆಯಲಿದ್ದು, ಬಳಿಕ ಕರಾವಳಿ ಉತ್ಸವದ ಮೆರೆವಣೆಗೆಯು ಉದ್ಯಾವನದಿಂದ ಕರಾವಳಿ ಉತ್ಸವ ಮೈದಾನದವರೆಗೆ ಸಾಗಿ ಸಂಜೆ ಕರಾವಳಿ ಉತ್ಸವ ಉದ್ಘಾಟನ ಕಾರ್ಯಕ್ರಮ ನಡೆಯಲಿದೆ ಹಾಗೂ ಕರಾವಳಿ ಉತ್ಸವದ ಸಮಾರೋಪ ಸಮಾರಂಭವು ಜ.30ಮತ್ತು 31 ರಂದು ಪಣಂಬೂರು ಕಡಲ ಕಿನಾರೆಯಲ್ಲಿ ಬೀಛ್ ಉತ್ಸವ ರೂಪದಲ್ಲಿ ನಡೆಯಲಿದ್ದು, ಅಲ್ಲಿ ಬೀಚ್ ವಾಲಿಬಾಲ್, ಕ್ರೆಕೆಟ್, ಮರಳು ಶಿಲ್ಪ, ಗಾಳಿಪಟ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸಲಗಿದೆ. ಎಂದು ದ.ಕ ಜಿಲ್ಲಾಧಿಕಾರಿ ಎ.ಬಿ.ಒಬ್ರಾಹೀಂ ತಿಳಿಸಿದರು.
ಸಭೆಯಲ್ಲಿ ಶಾಸಕ ಜೆ. ಆರ್. ಲೋಬೋ, ಮನಪಾ ಮೇಯರ್ ಜೆಸಿಂತಾ ವಿಜಯಾ ಆಲ್ಪ್ರೆಡ್, ತುಳು ಸಾಹಿತ್ಯ ಅಕಾಡೆಮಿತ ಅಧ್ಯಕ್ಷೆ ಜಾನಜಿ ಬ್ರಹ್ಮಾವರ, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಯ್ ಕ್ಯಾಸ್ಟಲಿನೊ , ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿ.ಎ . ಮುಹಮ್ಮದ್ ಹನೀಫ್, ಮುಡಾ ಅಧ್ಯಕ್ಷ ಇಬ್ರಾಹೀಂ ಕೊಡಿಜಾಲ್ , ಅಪರ ಜಿಲ್ಲಾಧಿಕಾರಿ ಕುಮಾರ್ , ಮನಪಾ ಅಯುಕ್ತ ಡಾ. ಗೋಪಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.