ಮಂಗಳೂರು,ಜ.15: ರಾಜ್ಯದಲ್ಲಿ ಮೊದಲನೆ ಸುತ್ತು ಮತ್ತು ದ್ವೀತೀಯ ಸುತ್ತಿನ ಪಲ್ಸ್ ಪೊಲಿಯೋ ಲಸಿಕಾ ಕಾರ್ಯಕ್ರಮವನ್ನು ಜನವರಿ 17 ಮತ್ತು ಫೆಬ್ರವರಿ 21,ನಡೆಯಲಿದ್ದು, 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ತಪ್ಪದೇ ಈ ಲಸಿಕೆಯನ್ನು ನೀಡತಕ್ಕದ್ದು ಎಂದು ಆರೋಗ್ಯ ಸಚಿವ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿದ್ದಾರೆ .
ಅವರು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿ, 74.25 ಲಕ್ಶ್ಝ ಮಕ್ಕಳಿಗೆ ಲಸಿಕೆ ಸಿದ್ದತೆ ಮಾಡಲಾಗಿದ್ದು, ರಾಜ್ಯದ ಹಳ್ಳಿ, ಪಟ್ಟಣ ಹಾಗೂ ನಗರಗಳು ಸೇರಿದಂತೆ 32617 ಬೂತ್‌ಗಳಲ್ಲಿ 51732 ತಂಡಗಳು ,10464 ಲಸಿಕಾ ಕಾರ್ಯಕರ್ತರು, 6522 ಮೇಲ್ವಿಚಾರಕರು, 1205 ಸಂಚಾರಿ ತಂಡಗಳು , 1736 ಟ್ರಾಸಿಟ್ ತಂಡಗಳು ಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ ಎಂದರು.
ಸುದ್ಧಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ ರಮಕೃಷ್ಣ ರಾವ್, ವೆನ್ ಲಾಕ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕಿ ಡಾ.ರಾಜೇಶ್ವರಿ ದೇವಿ ಮೊದಲಾದವರು ಉಪಸ್ಥಿತರಿದ್ದರು.