ಕನ್ನಡ ವಾರ್ತೆಗಳು

ಕುಂದಾಪುರದ ಕೋಡಿಯಲ್ಲಿ ನಿರ್ಮಾಣಗೊಂಡಿದೆ ವಿಶ್ವದ ಪ್ರಪ್ರಥಮ ಪರಿಸರ ಸ್ನೇಹಿ ‘ಹಸಿರು ಮಸೀದಿ’

Pinterest LinkedIn Tumblr

ಕುಂದಾಪುರ: ಕುಂದಾಪುರದ ಕೋಡಿಯಲ್ಲಿ ನಿರ್ಮಾಣಗೊಂಡು ಲೋಕಾರ್ಪಣೆಗೊಂಡ ಬದ್ರಿಯಾ ಜುಮಾ ಮಸೀದಿಯು ಜಗತ್ತಿನ ಪ್ರಥಮ ’ಶೂನ್ಯ ವಿದ್ಯುತ್’ (ಜೀರೋ ಎನರ್ಜಿ)ನ ಪರಿಸರ ಸ್ನೇಹಿ ಹಸಿರು ಮಸೀದಿಯಾಗಿದೆ. ಪರಿಸರ ಸ್ನೇಹಿ ಎಂಬ ಕಾರಣದಿಂದ ಮತ್ತು ಹಚ್ಚಹಸಿರ ವನಸಿರಿಯ ನಡುವೆ ಮೈದಳೆದಿರುವುದರಿಂದ ಈ ಮಸೀದಿಗೆ ’ಹಸಿರು ಮಸೀದಿ’ ಎನ್ನಲಾಗುತ್ತಿದೆಯೇ ಹೊರತು ಇಡೀ ಮಸೀದಿ ಶುಭ್ರ ಶ್ವೇತ ವರ್ಣದಲ್ಲಿ ಕಂಗೊಳಿಸುತ್ತಾ ಆಕರ್ಷಣೀಯವಾಗಿದೆ. ಮಸೀದಿ ಆವರಣದಲ್ಲಿ ಹಿರಿಯರು ನೆಟ್ಟ ಮಾವು, ಹೊನ್ನೆ, ತೆಂಗಿನ ಮರಗಳನ್ನು ಹಾಗೆಯೇ ಉಳಿಸಿಕೊಂಡು ಹಚ್ಚಹಸಿರಿನ ಲಾನ್ ನಿರ್ಮಿಸಲಾಗಿದೆ. ನಡುವೆ ಚೆನ್ನೈಯಿಂದ ತರಿಸಿ ನೆಟ್ಟ ಖರ್ಜೂರದ ಮರಗಳು ಅಂದ ಹೆಚ್ಚಿಸಿವೆ.

ವಿದೇಶದಲ್ಲಿ ಅಭ್ಯಸಿಸಿ ಬಂದ ಅಂತರ್‌ರಾಷ್ಟ್ರೀಯ ಖ್ಯಾತಿಯ ಕಲಾಕಾರ ಮುಕ್ತಾರ್ ಅಹಮದ್ ಮಸೀದಿಯ ಒಳಾಂಗಣದಲ್ಲಿ ಕುರಾನಿನ ಸಾಲುಗಳನ್ನು ಆಕರ್ಷಕವಾಗಿ ಕೆತ್ತಿದ್ದಾರೆ.

Elevaion 1

 Kodi Kndpr_Maseedi_inaguaration (2)

Kodi Kndpr_Maseedi_inaguaration (3)

Kodi Kndpr_Maseedi_inaguaration (4)

Kodi Kndpr_Maseedi_inaguaration (5) Kodi Kndpr_Maseedi_inaguaration (7) Kodi Kndpr_Maseedi_inaguaration (8)

Kodi Kndpr_Maseedi_inaguaration (9)

Kodi Kndpr_Maseedi_inaguaration (10) Kodi Kndpr_Maseedi_inaguaration (11) Kodi Kndpr_Maseedi_inaguaration (12) Kodi Kndpr_Maseedi_inaguaration (13)

Kodi Kndpr_Maseedi_inaguaration (14)

Kodi Kndpr_Maseedi_inaguaration (16) Kodi Kndpr_Maseedi_inaguaration (17)

Kodi Kndpr_Maseedi_inaguaration (18)

Kodi Kndpr_Maseedi_inaguaration (20) Kodi Kndpr_Maseedi_inaguaration (21) Kodi Kndpr_Maseedi_inaguaration (22) Kodi Kndpr_Maseedi_inaguaration (23)

Kodi Kndpr_Maseedi_inaguaration (1)

Kodi Kndpr_Maseedi_inaguaration (24)

Kodi Kndpr_Maseedi_inaguaration (25)

Kodi Kndpr_Maseedi_inaguaration (28) Kodi Kndpr_Maseedi_inaguaration (29) Kodi Kndpr_Maseedi_inaguaration (6) Kodi Kndpr_Maseedi_inaguaration (15) Kodi Kndpr_Maseedi_inaguaration (26) Kodi Kndpr_Maseedi_inaguaration (27)

ಮಸೀದಿಯ ವೈಶಿಷ್ಟ್ಯತೆಗಳು: ಸುಸ್ಥಿರ ಅಭಿವೃದ್ಧಿಯ ಬಗ್ಗೆ ಮುತುವರ್ಜಿ ವಹಿಸುತ್ತಿರುವ ಬ್ಯಾರೀಸ್ ಗ್ರೂಪ್ ಈ ವಿನೂತನ ಮಸೀದಿ ನಿರ್ಮಾಣದ ಕಲ್ಪನೆಯನ್ನು ಸಾಕಾರಗೊಳಿಸಿದೆ. ಸುಸ್ಥಿರ ತಂತ್ರಜ್ಞಾನಗಳ ಮೂಲಕ ನಿರ್ಮಾಣವಾಗಿರುವ ಮಸೀದಿಯ ವಿನ್ಯಾಸವು ಇಸ್ಲಾಮಿಕ್ ವಾಸ್ತುಶಿಲ್ಪದಲ್ಲೊಂದು ಕ್ರಾಂತಿಕಾರಕ ಹೆಜ್ಜೆಯಾಗಿದೆ. ನವೀಕರಿಸಬಹುದಾದ ಇಂಧನವಾದ ಪವನ ಮತ್ತು ಸೌರ (ವಿಂಡ, ಸೋಲಾರ್) ಶಕ್ತಿಯನ್ನು ಉಪಯೋಗಿಸಿಕೊಂಡು ಕಟ್ಟಡಕ್ಕೆ ಅಗತ್ಯವಿರುವ ವಿದ್ಯುತ್‌ನ್ನು ಪೂರೈಸುತ್ತಿರುವುದು ಈ ಹಸಿರು ವಿಸ್ಮಯದ ಪ್ರಮುಖ ವಿಶೇಷತೆ. ಇಡೀ ವಿಶ್ವವೇ ಹವಾಮಾನ ವೈಪರೀತ್ಯಗಳಿಂದ ತತ್ತರಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಈ ‘ಹಸಿರು ಮಸೀದಿ’ಯು ಸುಸ್ಥಿರ ಅಭಿವೃದ್ಧಿಗಳ ಮೂಲಕ ಜಾಗತಿಕ ತಾಪಮಾನವನ್ನು ಯಾವ ರೀತಿಯಲ್ಲಿ ಕಡಿಮೆ ಮಾಡಬಹುದು ಎಂದು ತೋರಿಸಿಕೊಡಲಿದೆ. ಸರ್ವ ಸಮುದಾಯಗಳೊಳಗೆ ಸಾಮರಸ್ಯವನ್ನು ಪ್ರೋತ್ಸಾಹಿಸುವ ಇಸ್ಲಾಂನ ಆಧುನಿಕ ಪರಿಚಯವನ್ನೂ ಮಸೀದಿ ಪ್ರಸ್ತುತಪಡಿಸಲಿದೆ.

ಸುಸ್ಥಿರ ಅಭಿವೃದ್ಧಿಯೆಡೆಗೆ ಭಾರತದ ನಡಿಗೆಯಲ್ಲಿ ಇದು ನಮ್ಮದೊಂದು ಪುಟ್ಟ ಕೊಡುಗೆ ಎಂದು ಹೇಳುತ್ತಾರೆ ಬ್ಯಾರೀಸ್ ಗ್ರೂಪ್‌ನ ಸಯ್ಯದ್ ಮುಹಮ್ಮದ್ ಬ್ಯಾರಿ. ವಿಶ್ವದಲ್ಲೇ ಪ್ರಥಮದ್ದಾದ ಈ ವಿಶಿಷ್ಟ ಮಸೀದಿಯನ್ನು ವೀಕ್ಷಿಸಲು ಅವರ ಆಹ್ವಾನದ ಮೇರೆಗೆ ತೆರಳಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿ ಈ ರೀತಿಯ ಮಸೀದಿಯ ನಿರ್ಮಾಣಕ್ಕೆ ಉಂಟಾದ ಪ್ರೇರಣೆ, ಜನರ ಸಹಕಾರ ಹಾಗೂ ಪರಿಸರ ಸ್ನೇಹಿ ಮಸೀದಿಯ ವಿಶೇಷತೆಗಳನ್ನು ಅವರು ವಿವರಿಸಿದರು.

ಪರಿಸರ ಸ್ನೇಹಿ ಮಸೀದಿ:
ಇದು ಪ್ರಪ್ರಥಮ ಸಂಪೂರ್ಣ ಪರಿಸರ ಸ್ನೇಹಿ ಮಸೀದಿ. ಇಲ್ಲಿ ಪ್ರಕೃತಿಯ ಅಂಶಗಳನ್ನೇ ಅತ್ಯಂತ ಪರಿಣಾಮಕಾರಿಯಾಗಿ ಬಳಸಿ ಕಟ್ಟಡ ಸದಾ ತಂಪಾಗಿರುವಂತೆ ಮಾಡಲಾಗಿದೆ. ಮಸೀದಿಯೊಳಗೆ ತಾಪಮಾನ ಏರಿಕೆ ಕನಿಷ್ಟ ಮಟ್ಟದಲ್ಲಿರುವಂತೆ ಸುತ್ತಮುತ್ತಲೂ ಹಸಿರು ಮರಗಿಡಗಳು, ನೀರಿನ ಟ್ಯಾಂಕ್‌ಗಳಿವೆ. ’ಎಲ್’ ಆಕಾರದ ಕಟ್ಟಡದ ಯೋಜನೆ ಮತ್ತು ಎತ್ತರಿಸಿದ ಮಸೀದಿಯ ಸಭಾಂಗಣಗಳನ್ನು ನೈಸರ್ಗಿಕವಾಗಿ ತಂಪಾಗಿರುವಂತೆ ನಿರ್ಮಿಸಲಾಗಿದೆ.

ಸೌರತಾಪ ತಾಗದಂತೆ ನೋಡಿಕೊಳ್ಳುವ ಬಿಳಿ ಚೀನಾ ಟೈಲ್ಸ್‌ಗಳನ್ನು ಹಾಕಿ ವಿಶೇಷ ಟರ್ಬೊ ದ್ವಾರಗಳನ್ನು ಅಳವಡಿಸುವ ತಾರಸಿ ಇಡೀ ಮಸೀದಿಯನ್ನು ತಂಪಾಗಿಡುವುದು ಮಾತ್ರವಲ್ಲದೆ ಅಕ್ಕಪಕ್ಕದಲ್ಲೂ ಬಿಸಿಲಿನ ತಾಪವನ್ನು ಕಡಿಮೆಗೊಳಿಸುತ್ತದೆ. ಮಸೀದಿಯು ಮುಕ್ತ ಹೊದಿಕೆಯಿಂದ ಕೂಡಿದೆ. ಕಟ್ಟಡದ ನಿರ್ಮಾಣಕ್ಕೆ ಆವಾಹಕ ಗ್ಲಾಸ್ ರಿ‌ಇನ್‌ಫೋರ್ಸ್‌ಡ್ ಕಾಂಕ್ರೀಟ್ (ಜಿ‌ಆರ್‌ಸಿ) ಬಳಸಿ ಸ್ವಾಭಾವಿಕ ಗಾಳಿ-ಬೆಳಕು ಧಾರಾಳ ಸಿಗುವಂತೆ ರೂಪಿಸಲಾಗಿದೆ. ಇದರಿಂದ ಮಸೀದಿಯೊಳಗೆ ಬಿಸಿಲಿನ ಧಗೆ ಮತ್ತಷ್ಟು ಕಡಿಮೆಯಾಗಲಿದೆ.

ಈ ಮಸೀದಿಯ ಮಿನಾದ ಕೇವಲ ಪ್ರಾರ್ಥನೆಗೆ ಕರೆ ನೀಡಲು ಹಾಗೂ ಸೌಂದರ್ಯ ಹೆಚ್ಚಿಸಲು ಮಾತ್ರ ಸೀಮಿತವಾಗಿಲ್ಲ. ಈ 70ಅಡಿ ಎತ್ತರದ ಬಹೂಪಯೋಗಿ ಮಿನಾರದಿಂದ ಒಳ ಬರುವ ತಂಗಾಳಿ ಪ್ರಾರ್ಥನಾ ಸಭಾಂಗಣವನ್ನು ತಣ್ಣಗಾಗಿಸುತ್ತದೆ. ಈ ಮಿನಾರದ ಮೇಲೆಯೇ ಗಾಳಿಯನ್ನು ಬಳಸಿ ವಿದ್ಯುತ್ ಉತ್ಪಾದಿಸುವ ವಿಂಡ್ ಟರ್ಬೈನ್‌ಅನ್ನು ಅಳವಡಿಸಲಾಗಿದೆ.

ಸೌರ ಮತ್ತು ಪವನ ಶಕ್ತಿಯಂತಹ ನವೀಕರಿಸಬಹುದಾದ ಇಂಧನಗಳ ಬಳಕೆಯಿಂದ ಮಸೀದಿಯ ಬಳಕೆಗಿಂತ ಅಧಿಕ ವಿದ್ಯುತ್ ಉತ್ಪಾದನೆಯಾಗಲಿದೆ. ಈ ಹೆಚ್ಚುವರಿ ವಿದ್ಯುತ್ ಸರಕಾರದ ಗ್ರಿಡ್‌ಗೆ ರವಾನೆಯಾಗಲಿದ್ದು ಮುಂದಿನ 25 ವರ್ಷಗಳಿಗೆ ಮಸೀದಿಗೆ ’ಸಿ‌ಇ‌ಆರ್ (ಸರ್ಟಿಫೈಡ್ ಎಮಿಶನ್ ರಿಡಕ್ಷನ್) ಕ್ರೆಡಿಟ್’ ಸಿಗಲಿದೆ.

‘ಡಿಮೆ-ಮರುಬಳಕೆ-ಪುನರ್ಬಳಕೆ-ಮರು ಉತ್ಪಾದನೆ’ ಎಂಬ ತತ್ವಗಳ ಆಧಾರದಲ್ಲಿ ಮಸೀದಿಯು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡಿದೆ ಮತ್ತು ಅಮೂಲ್ಯವಾದ ಜೀವಜಲವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ’ಪ್ರೆಸ್‌ಮ್ಯಾಟಿಕ್ ಟೋಟೋ’ ನೀರಿನ ಜೋಡಣೆಗಳನ್ನು ಅಳವಡಿಸಿದೆ.

ಈ ಮಸೀದಿ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಮಾತ್ರವಲ್ಲದೆ, ಆಕರ್ಷಕ ಪ್ರವಾಸೀ ಕೇಂದ್ರವಾಗಿಯೂ ಬೆಳೆಯುವ ಲಕ್ಷಣ ಗೋಚರಿಸಿದೆ. ಉದ್ಘಾಟನಾ ಪೂರ್ವದಲ್ಲೇ ನೂರಾರು ಮಂದಿ ದೇಶ-ವಿದೇಶಗಳ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

Write A Comment