ಕನ್ನಡ ವಾರ್ತೆಗಳು

ಉಡುಪಿ ಜಿಲ್ಲೆಯಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ..!

Pinterest LinkedIn Tumblr

Helmate (1)

ಉಡುಪಿ: ಉಡುಪಿ ಜಿಲ್ಲೆಯಲ್ಲೂ ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸುವ ಬಗ್ಗೆ ಇಲಾಖೆಗೆ ಸರಕಾರದ ನೋಟಿಫಿಕೇಷನ್ ಬಂದಿದೆ.
ಈ ಕರ್ನಾಟಕ ರಾಜ್ಯಪತ್ರದಿಂದ ಅಧೀಕ್ರತವಾಗಿ ಪ್ರಕಟಿಸಲಾದ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಉಡುಪಿ ಜಿಲ್ಲೆಗೂ ಅನ್ವಯವಾಗುವಂತೆ ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್  ಧರಿಸಬೇಕು, ಇಲ್ಲವಾದಲ್ಲಿ ದಂಡ ವಿಧಿಸುವ ಬಗ್ಗೆಯೂ ಉಲ್ಲೇಖಿಸಲಾಗಿದೆ.

Helmate (2)

(ಸಾಂದರ್ಭಿಕ ಚಿತ್ರಗಳು)

ಕಡ್ಡಾಯ ಎಂದಿನಿಂದ..?
ಬುಧವಾರ ಸಂಜೆ ವೇಳೆಗೆ ಇಲಾಖೆಗೆ ಈ ನೋಟಿಫಿಕೇಷನ್ ಬಂದಿದೆ, ಆದರೇ ಕೂಡಲೇ ಇದು ಜಾರಿ ಮಾಡುವುದು ಕಷ್ಟಸಾಧ್ಯವೆನ್ನುವ ಮಾತುಗಳು ಕೇಳಿಬರುತ್ತಿದೆ. ಮೊದಲು ವಾಹನ ಸವಾರರಲ್ಲಿ ಅರಿವು ಮೂಡಿಸುವ ಪ್ರಯ್ಅತ್ನದ ಜೊತೆಗೆ ಅವರಿಗೆ ಹೆಲ್ಮೆಟ್  ಕಡ್ಡಾಯದ ಕುರಿತು ಜಾಗ್ರತಿ ಮೂಡಿಸಬೇಕಾದ ಅನಿವಾರ್ಯತೆ ಇದೆ. ಮುಂದಿನ ಹಂತದಲ್ಲಿ ವಾರ್ನಿಂಗ್ ಮಾಡುವುದು, ಬಳಿಕ ಸಣ್ಣ ಪ್ರಮಾಣದ ದಂಡ ಕಟ್ಟಿಸಿಕೊಳ್ಳುವ ಮೂಲಕ ಇನ್ನಷ್ಟು ಗಂಭೀರತೆಯನ್ನು ಮನವರಿಕೆ ಮಾಡಬೇಕಾಗುತ್ತದೆ.

ಹಂತಹಂತವಾಗಿ ಜಾರಿಯಾಗಲಿ..
ಒಂದು ಹಂತದಲ್ಲಿ ಹೆಲ್ಮೆಟ್  ಕಡ್ದಾಯದ ಬಗ್ಗೆ ಅದರಲ್ಲಿಯೂ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯದ ಬಗ್ಗೆ ಜನಸಾಮಾನ್ಯರಲ್ಲಿ ಬಹುತೇಕ ಗೊಂದಲಗಳಿದೆ, ಇದನ್ನೆಲ್ಲವನ್ನೂ ನೀಗಿಸಲು ಇಲಾಖೆಯೂ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ, ಅಲ್ಲಲ್ಲಿ ಭಿತ್ತಿ ಪತ್ರಗಳು, ಬ್ಯಾನರ್ ಅಳವಡಿಸಿ ಹೆಲ್ಮೆಟ್ ಕಡ್ಡಾಯದ ಬಗ್ಗೆ ಮಾಹಿತಿಯನ್ನು ರವಾನಿಸಬೇಕಿದೆ. ಇನ್ನು ಕೂಲಿಕಾರ್ಮಿಕರು ಸೇರಿದಂತೆ ಮಧ್ಯಮವರ್ಗದವರಿಗೆ ಒಂದೇ ಬಾರೀ ಹೆಲ್ಮೆಟ್ ಖರೀಧಿ ಮಾಡುವುದು ಕಷ್ಟವಾಗುತ್ತದೆ. ಈ ಬಗ್ಗೆಯೂ ಇಲಾಖೆಯೂ ಸ್ಪಂದಿಸಿ ಕೆಲ ದಿನಗಳ ಗಡುವು ಕೊಟ್ಟರೇ ಒಳಿತು ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಒಟ್ಟಿನಲ್ಲಿ ಹೆಲ್ಮೆಟ್ ಕಡ್ಡಾಯ ವಿಚಾರ ಜಿಲ್ಲೆಯಲ್ಲಿ ಯಾವ ರೀತಿಯ ಬೆಳವಣಿಗೆಗೆ ಕಾರಣವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ವರದಿ- ಯೋಗೀಶ್ ಕುಂಭಾಸಿ

Write A Comment