ಕನ್ನಡ ವಾರ್ತೆಗಳು

ಕುಂಭಾಸಿ ಹೈವೇ ಆಕ್ಸಿಡೆಂಟ್ ತಡೆಗೆ ಹೆದ್ದಾರಿಗೆ ಬ್ಯಾರಿಗೇಟರ್ ಅಳವಡಿಕೆ

Pinterest LinkedIn Tumblr

ಕುಂದಾಪುರ: ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ವೇಗವಾಗಿ ಬರುವ ವಾಹನಗಳ ವೇಗಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕುಂಭಾಸಿ ರಾಷ್ಟ್ರೀಯ ಹೆದ್ದಾರಿಗೆ ಬ್ಯಾರಿಗೇಟರ್ ಅಳವಡಿಸಲಾಗಿದೆ. ಆನೆಗುಡ್ಡೆ ಸ್ವಾಗತ ಗೋಪುರದ ಎದುರಿಗೆ ಅಳವಡಿಸಲಾದ ಬ್ಯಾರಿಗೇಟರುಗಳನ್ನು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದವರು ಕೊಡುಗೆಯಾಗಿ ನೀಡಿದ್ದಾರೆ.

ಕುಂಭಾಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚತುಷ್ಪತ ರಸ್ತೆ ಅವಾಂತರ, ವಿಭಾಜಕ ಸಮಸ್ಯೆ ಹಾಗೂ ಬ್ಯಾರಿಗೇಟರ್ ಅವ್ಯವಸ್ಥೆಯಿಂದ ಎರಡು ವರ್ಷಗಳಲ್ಲಿ ಹಲವಾರು ಅಪಘಾತಗಳು ಸಂಭವಿಸಿ ಕೆಲವು ಮಂದಿ ಪ್ರಾಣ ಕಳೆದುಕೊಂಡರೇ, ಇನ್ನು ಹಲವರು ಗಾಯಾಳುಗಳಾಗಿದ್ದರು. ಡಿವೈಡರ್ ಇರುವ ಕಾರಣ ವಾಹನಗಳು ವೇಗವಾಗಿ ಬರುತ್ತಿರುವುದೇ ಅಪಘಾತಗಳಿಗೆ ಕಾರಣವಾಗಿತ್ತು. ಈ ಭಾಗಕ್ಕೆ ಸಮರ್ಪಕ ಬ್ಯಾರಿಗೇಟರ್ ಅಗತ್ಯವಿತ್ತು. ಈ ಬಗ್ಗೆ ಮಾಧ್ಯಮಗಳು ವರದಿಯನ್ನು ಮಾಡಿದ್ದವು.

Aanegudde_Byarigetor_Police (4) Aanegudde_Byarigetor_Police (2) Aanegudde_Byarigetor_Police (3) Aanegudde_Byarigetor_Police (9) Aanegudde_Byarigetor_Police (10) Aanegudde_Byarigetor_Police (5) Aanegudde_Byarigetor_Police (7) Aanegudde_Byarigetor_Police (8) Aanegudde_Byarigetor_Police (6) Aanegudde_Byarigetor_Police (1)

ಗುಣಮಟ್ಟದ ಬ್ಯಾರಿಗೇಟರ್:
ಹೆದ್ದಾರಿಯ ಎರಡು ರಸ್ತೆಗಳಿಗೆ ತಲಾ ಮೂರು ಮೂರು ಬ್ಯಾರಿಗೇಟರ್ ಅಳವಡಿಸಲಾಗಿದೆ. ಬ್ಯಾರಿಗೇಟರಿನಲ್ಲಿ ಬಿಳಿ, ಕೆಂಪು ಹಾಗೂ ಹಸಿರು ಬಣ್ಣದ ಉತ್ತಮ ಗುಣಮಟ್ಟದ ರೇಡಿಯಂ ಸ್ಟಿಕ್ಕರ್ ಅಂಟಿಸಲಾಗಿದ್ದು ದೂರದಿಂದ ಬರುವ ವಾಹನಗಳ ಬೆಳಕು ಇದರ ಮೇಲೆ ಬಿದ್ದು ಪ್ರತಿಫಲನಗೊಂಡು ವಾಹನಗಳಿಗೆ ಬ್ಯಾರಿಗೇಟರ್ ಸುಲಭವಾಗಿ ಗೋಚರಿಸುವ ಕಾರಣ ವಾಹನದ ವೇಗವನ್ನು ನಿಯಂತ್ರಿಸುತ್ತಾರೆ. ಒಂದು ಬ್ಯಾರಿಗೇಟರಿಗೆ 4,500-5000 ಹಣ ಖರ್ಚಾಗಿದ್ದು ಸುಮಾರು 35,000 ವೆಚ್ಚದಲ್ಲಿ 6 ಬ್ಯಾರಿಗೇಟರ್ ನೀಡಲಾಗಿದೆ.

ಇತ್ತೀಚೆಗೆ ಆನೆಗುಡ್ಡೆ ದೇವಳದ ಅನುವಂಶಿಕ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಈ ಬ್ಯಾರಿಗೇಟರ್ ಗಳನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದರು. ಪೊಲೀಸರು ಇದನ್ನು ಸಮರ್ಪಕವಾಗಿ ಹೆದ್ದಾರಿಯಲ್ಲಿ ಅಳವಡಿಸಿದ್ದಾರೆ. ಈ ಸಂದರ್ಭ ಟ್ರಾಫಿಕ್ ಎಸ್.ಐ. ಜಯ ಹಾಗೂ ಸಿಬ್ಬಂದಿಗಳು, ಸ್ಥಳಿಯ ನಾಗರೀಕರು, ಆನೆಗುಡ್ಡೆ ದೇವಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Write A Comment