ಕನ್ನಡ ವಾರ್ತೆಗಳು

ಬಿಗ್ ಎಫ್.ಎಮ್ 92.7 ಹಾಗೂ ಚೈಲ್ಡ್‌ಲೈನ್ ಮಂಗಳೂರು-1098 ನಿಂದ ಉಡುಪು ವಿತರಣೆ

Pinterest LinkedIn Tumblr

red_fm_childline_1

ಮಂಗಳೂರು,ಜ.13 : ಮಂಗಳೂರಿನ ಪ್ರಸಿದ್ಧ ಬಿಗ್ ಎಫ್.ಎಮ್ 92.7 ಹಾಗೂ ಚೈಲ್ಡ್‌ಲೈನ್ ಮಂಗಳೂರು-1098 ನಿಂದ ಪಚ್ಚನಾಡಿಯ ತ್ಯಾಜ್ಯ ಘಟಕದ ನಿವಾಸಿಗಳಿಗೆ ಉಡುಪುಗಳನ್ನು ಮಂಗಳವಾರ ವಿತರಣೆ ಮಾಡಲಾಯಿತು.

ಹೊಸ ವರ್ಷದ ಪ್ರಯುಕ್ತ ಮಂಗಳೂರಿನ ಪ್ರಸಿದ್ಧ ಬಿಗ್.ಎಫ್.ಎಮ್ 92.7, ಬಿಗ್ ಹಾರ್ಟ್(ವಿಶಾಲ ಹೃದಯ) ಎಂಬ ಧ್ಯೆಯದೊಂದಿಗೆ ಸಂಗೃಹಿಸಿದ ಉಡುಪುಗಳನ್ನು ಹೊಸ ವರ್ಷದ ಪ್ರಯುಕ್ತ ಪಚ್ಚನಾಡಿಯ ತ್ಯಾಜ್ಯ ಘಟಕದ ನಿವಾಸಿಗಳಿಗೆ ವಿತರಿಸಲಾಯಿತು.

red_fm_childline_2 red_fm_childline_3

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಚೈಲ್ಡ್‌ಲೈನ್ ಮಂಗಳೂರು-1098ಇದರ ಕೇಂದ್ರ ಸಂಯೋಜಕರಾದ ಶ್ರೀ ಸಂಪತ್ ಕಟ್ಟಿ ಮಾತನಾಡುತ್ತ ಮಕ್ಕಳು ತಪ್ಪದೆ ಶಾಲೆಗೆ ಹೊಗಬೇಕು, ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಬೇಕು ಹಾಗೂ ಇದರೊಂದಿಗೆ ಬಾಲಾ ಕಾರ್ಮಿಕತೆ, ಬಾಲ್ಯ ವಿವಾಹ ಮತ್ತು ಸ್ವಚ್ಛತೆಯ ಕುರಿತು ಮಾಹಿತಿಯನ್ನು ನಿಡಿದರು ಹಾಗೂ ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳು ಕಂಡುಬಂದಲ್ಲಿ ಚೈಲ್ಡ್‌ಲೈನ್ -1098ನ್ನು ಸಂಪರ್ಕಿಸುವಂತೆ ತಿಳಿಸಿದರು.

ಬಿಗ್.ಎಫ್.ಎಮ್ 92.7ನ ಆರ್.ಜೆ ಎರೋಲ್ ಗೊನ್‌ಸಾಲ್ವಿಸ್ ಮಾತನಾಡುತ್ತ ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳನ್ನು ಕೊರಿದರು ಹಾಗೂ ಈ ಉಡುಪುಗಳನ್ನು ಹೊಸ ವರ್ಷದ ಪ್ರಯುಕ್ತ ವಿತರಿಸುತ್ತಿರುವುದಾಗಿ ತಿಳಿಸಿದರು. ಮಕ್ಕಳು ಹಾಗೂ ಹಿರಿಯರು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಬೇಕು ಹಾಗೂ ಮಕ್ಕಳು ಶಿಕ್ಷಣದ ಕಡೆಗೆ ಹೆಚ್ಚಿನ ಒಲವನ್ನು ನಿಡಬೇಕು ಎಂದು ತಿಳಿಸಿದರು.

ಈ ಒಂದು ಉಡುಪು ವಿತರಣೆಯ ಸಂದರ್ಭದಲ್ಲಿ ಬಿಗ್.ಎಫ್.ಎಮ್ ರೇಡಿಯೋ 92.7 ಇದರ ಆರ್.ಜೆ ಕು.ರಕ್ಷೀತಾ, ಶ್ರೀ ರೂಪೇಶ್ ಶೆಟ್ಟಿ, ಹಾಗೂ ತಾಂತ್ರಿಕ ಮೇಲ್ವಿಚಕರಾದ ಶ್ರೀ.ಜೋಯೆಲ್ ರೆಬೆಲ್ಲೊ ಇವರು ಉಪಸ್ಥಿತರಿದ್ದರು.

Write A Comment