ಕನ್ನಡ ವಾರ್ತೆಗಳು

ಕುಂದಾಪುರ: ಪೇಜಾವರ ಶ್ರೀ ಪರ್ಯಾಯಕ್ಕೆ ಮುಸ್ಲೀಂ ಬಾಂಧವರಿಂದಲೂ ಹೊರೆಕಾಣಿಕೆ

Pinterest LinkedIn Tumblr

ಕುಂದಾಪುರ: ಐದನೇ ಬಾರಿಗೆ ಪರ್ಯಾಯ ಪೀಠವನ್ನು ಅಲಂಕರಿಸುತ್ತಿರುವ ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರ ಪರ್ಯಾಯ ಕಾರ್ಯಕ್ರಮ ಜ.೧೮ರಂದು ನಡೆಯಲಿದ್ದು ಇದಕ್ಕೆ ಪೂರ್ವಭಾವಿಯಾಗಿ ಕುಂದಾಪುರದಿಂದ ಹೊರೆಕಾಣಿಕೆಯನ್ನು ಸೋಮವಾರ ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ನೇತ್ರತ್ವದಲ್ಲಿ ಕಳುಹಿಸಲಾಗುತ್ತಿದೆ. ಪರ್ಯಾಯಕ್ಕೆ ಜಾತಿಧರ್ಮಗಳ ಎಲ್ಲೇ ಮೀರಿ ಹೊರೆಕಾಣಿಕೆಯನ್ನು ಕಳುಹಿಸುತ್ತಿರುವುದು ವಿಶೇಷವಾಗಿದೆ.

Paryaya2015_Horekanike_Kundapura (3) Paryaya2015_Horekanike_Kundapura (4) Paryaya2015_Horekanike_Kundapura (2)

ಮೂಡುಗೋಪಾಡಿ ಮುಸ್ಲೀಂ ಬಾಂಧವರಿಂದ ಹೊರೆಕಾಣಿಕೆ:
ಮೂಡುಗೋಪಾಡಿಯ ಮುಸ್ಲೀಂ ಬಾಂಧವರು ಪೇಜಾವರ ಶ್ರೀ ಪರ್ಯಾಯಕ್ಕೆ ಅಕ್ಕಿ, ಬೆಲ್ಲ, ಕಾಯಿಗಳ ಸಹಿತಿ ವಿವಿಧ ಸರುಕುಗಳನ್ನು ಹೊರೆಕಾಣಿಕೆ ರೂಪದಲ್ಲಿ ಸೋಮವಾರ ಕಳುಹಿಸಿದ್ದು ಎಲ್ಲೆಡೆ ಶ್ಲಾಘನೆಗೆ ಪಾತ್ರವಾಯಿತು. ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಹಾಗೂ ಎಸ್.ಐ. ನಾಸೀರ್ ಹುಸೇನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಈ ಕಾರ್ಯವನ್ನು ಮೆಚ್ಚಿಕೊಂಡರು. ಗೋಪಾಡಿ ಗ್ರಾಮಪಂಚಾಯತ್ ಉಪಾಧ್ಯಕ್ಷೆ ವೈಲೆಟ್ ಬೆರೆಟ್ಟೋ, ಸದಸ್ಯ ಸುರೇಶ್ ಶೆಟ್ಟಿ, ಸುಬ್ರಮಣ್ಯ ಶೆಟ್ಟಿ, ಮುಸ್ಲೀಂ ಸಮುದಾಯದ ಮುಖಂಡರಾದ ಬಿ.ಎಂ. ಹಂಝಾ, ಬಿ.ಎ. ಮೊಹಮ್ಮದ್, ಜಿ.ಮೊಹಮ್ಮದ್, ಅದಮ್ ಸಾಹೇಬ್, ಹಾರೀಸ್ ಸಿದ್ದಿಕ್, ರಫಿಕ್, ಅಬ್ದುಲ್ ಖಾದರ್, ಧರ್ಮಸ್ಥಳ ಗ್ರಾ.ಯೋಜನೆಯ ಅಮರಪ್ರಸಾದ್ ಶೆಟ್ಟಿ ಮೊದಲಾದವರು ಇದ್ದರು.

Paryaya2015_Horekanike_Kundapura (8) Paryaya2015_Horekanike_Kundapura (9) Paryaya2015_Horekanike_Kundapura (5) Paryaya2015_Horekanike_Kundapura (6) Paryaya2015_Horekanike_Kundapura (16) Paryaya2015_Horekanike_Kundapura (15) Paryaya2015_Horekanike_Kundapura (13) Paryaya2015_Horekanike_Kundapura (14) Paryaya2015_Horekanike_Kundapura (11) Paryaya2015_Horekanike_Kundapura (17) Paryaya2015_Horekanike_Kundapura (12) Paryaya2015_Horekanike_Kundapura (10) Paryaya2015_Horekanike_Kundapura (7) Paryaya2015_Horekanike_Kundapura (1)

ಕುಂದಾಪುರದಿಂದ ಬ್ರಹತ್ ಹೊರೆಕಾಣಿಕೆ:
ಕುಂದಾಪುರ ತಾಲೂಕಿನ ಹಲವೆಡೇಯಿಂದ ನೂರಾರು ವಾಹನಗಳಲ್ಲಿ ಅಕ್ಕಿ, ಬೆಲ್ಲ, ತರಕಾರಿ, ತೆಂಗಿನಕಾಯಿ, ವಿವಿಧ ಧಾನ್ಯಗಳು ಸೇರಿದಂತೆ ಹೊರೆ ಕಾಣಿಕೆಗಳು ಉಡುಪಿಯತ್ತ ಸಾಗಿದೆ. ಅಪ್ಪಣ್ಣ ಹೆಗ್ಡೆ ಮುಖಂಡತ್ವದಲ್ಲಿ ಆನೆಗುಡ್ಡೆ ದೇವಳದ ಅನುವಂಶಿಕ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯಾಯ, ಹೈದರಬಾದ್ ಉದ್ಯಮಿ ನೇರಂಬಳ್ಳಿ ರಾಘವೇಂದ್ರ ರಾವ್, ಸಂಪಾದಕ ಯು.ಎಸ್. ಶೈಣೈ ಅಮರಪ್ರಸಾದ್ ಶೆಟ್ಟಿ ನೇತ್ರತ್ವದಲ್ಲಿ ಹೊರೆಕಾಣಿಕೆಯನ್ನು ಕಳುಹಿಸಲಾಗಿದೆ.

Write A Comment