ಅಂತರಾಷ್ಟ್ರೀಯ

ಪಠಾಣ್ ಕೋಟ್ ದಾಳಿ ಪ್ರಕರಣ: ಪಾಕಿಸ್ತಾನದಲ್ಲಿ ಶಂಕಿತ ಉಗ್ರರ ಬಂಧನ

Pinterest LinkedIn Tumblr
map_pakistan
ಇಸ್ಲಾಮಾಬಾದ್: ಪಠಾಣ್ ಕೋಟ್ ವಾಯು ನೆಲೆ ಮೇಲೆ ನಡೆದ ದಾಳಿ ಸಂಬಂಧ ಪಾಕಿಸ್ತಾನದ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿರುವ ಪಾಕ್ ತನಿಖಾ ತಂಡ ಹಲವು ಶಂಕಿತ ಉಗ್ರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಗುಜ್ರಾನ್ವಾಲ್ , ಜೆಲೂಮ್ ಮತ್ತು ಬಹವಾಲ್ ಪುರ ಜಿಲ್ಲೆಗಳ ಮೇಲೆ ದಾಳಿ ನಡೆಸಿರುವ ಪಾಕ್ ಪಡೆ ಹಲವು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಹಲವು ಮಂದಿಯನ್ನು ವಶಕ್ಕೆ ಪಡೆದಿರುವ ತನಿಖಾ ತಂಡದ ಅಧಿಕಾರಿಗಳು ದಾಳಿಯಲ್ಲಿ ಬಂಧಿತರ ಕೈವಾಡ ವಿದೆಯೇ, ದಾಳಿಯಲ್ಲಿ ಯಾರ ಪಾತ್ರವಿದೆ, ಯಾರು ಇದರ ಅನುಕೂಲ ಪಡೆಯುತ್ತಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದೆ.
ಪಾಕಿಸ್ತಾನ ಪ್ರಧಾನ ಮಂತ್ರಿ ನವಾಜ್ ಷರೀಫ್  ಪಠಾಣ್ ಕೋಟ್ ದಾಳಿ ಸಂಬಂಧ ತನಿಖೆಗೆ ಆದೇಶಿಸಿದ ಬೆನ್ನಲ್ಲೇ, ಪಾಕಿಸ್ತಾನ ಗುಪ್ತಚರ ದಳ, ಆಂತರಿಕ ಗುಪ್ತಚರ ಇಲಾಖೆ, ಮಿಲಿಟರಿ ಗುಪ್ತಚರ ಇಲಾಖೆ, ಫೆಡರಲ್  ತನಿಖಾ ಏಜೆನ್ಸಿ ಗಳ ಅಧಿಕಾರಿಗಳ ತನಿಖಾ ತಂಡ ರಚಿಸಿದ್ದರು.
ಪಠಾಣ್ ಕೋಟ್ ದಾಳಿಯಲ್ಲಿ ಬಂಧಿತರಿಗೆ ನಂಟು ಇದೆಯೇ ಎಂಬುದರ ಬಗ್ಗೆ ಪಾರದರ್ಶಕ ತನಿಖೆ ನಡೆಸುವಂತೆ ಪ್ರಧಾನಿ ನವಾಜ್ ಷರೀಫ್ ಉನ್ನತ ಮಟ್ಟದ ತನಿಖಾ ತಂಡಕ್ಕೆ  ಆದೇಶಿಸಿದ್ದಾರೆ.

 

Write A Comment