
ಬೆಳ್ತಂಗಡಿ,ಜ.11: ಬೆಳ್ತಂಗಡಿ ತಾಲೂಕಿನ ಕಕ್ಕಂಜೆ ಗ್ರಾಮದ ವೃದ್ಧ ದಂಪತಿಯನ್ನು ದುಷ್ಕರ್ಮಿಗಳು ಧಾರುಣ ಹತ್ಯೆ ಗೈದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.ಮೃತ ದಂಪತಿಗಳನ್ನು ವರ್ಗೀಸ್(90) ಮತ್ತು ಅವರ ಪತ್ನಿ ಎಲಿಯಮ್ಮ(82) ಎಂದು ಗುರುತಿಸಲಾಗಿದೆ.
ಕಕ್ಕಂಜೆ ಗ್ರಾಮದ ಶಾಲೆಯ ಬಳಿ ಈ ವೃದ್ಧ ದಂಪತಿಗಳು ಮಾತ್ರ ಮನೆಯಲ್ಲಿ ವಾಸಿಸುತ್ತಿದ್ದು, ಅವರ ಮಕ್ಕಳು ವಿದೇಶದಲ್ಲಿ ನೆಲೆಸಿದ್ದು, ಮನೆಯಲ್ಲಿ ಇಬ್ಬರು ದಂಪತಿಗಳು ಮಾತ್ರ ವಾಸಿಸುತ್ತಿದ್ದರು. ದುಷ್ಕರ್ಮಿಗಳು ದೊಣ್ಣೆಯಿಂದ ಬಡಿದು ಕೊಂದಿರುವ ಬಗ್ಗೆ ಶಂಕಿಸಲಾಗಿದೆ.
ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಶ್ವಾನ ದಳದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೆಚ್ಚಿನ ವಿವರ ನಿರೀಕ್ಷಿಸಿರಿ…..