ಕನ್ನಡ ವಾರ್ತೆಗಳು

ಉಳ್ಳಾಲ :ಅಪರಿಚಿತ ವ್ಯಕ್ತಿಯ ಶವ ಪತ್ತೆ – ಕೊಲೆ ಶಂಕೆ..?

Pinterest LinkedIn Tumblr

ULLALA_DEAD_BODY_2

ಉಳ್ಳಾಲ, ಜ.6: ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದ ಅಪರಿಚಿತ ವ್ಯಕ್ತಿಯ ಶವವೊಂದು  ಕೈ ಮತ್ತು ಕಾಲುಗಳನ್ನು ಕಟ್ಟಿ ಹಾಕಿದ ಸ್ಥಿತಿಯಲ್ಲಿ ಉಳ್ಳಾಲದ ಕೋಟೆಪುರ ಸಮುದ್ರ ತೀರದಲ್ಲಿ ಮಂಗಳವಾರ ಸಂಜೆ ಪತ್ತೆಯಾಗಿದೆ.

ULLALA_DEAD_BODY_1 ULLALA_DEAD_BODY_3 ULLALA_DEAD_BODY_4

40-45ರ ಹರೆಯದ ವ್ಯಕ್ತಿಯ ಶವ ಇದಾಗಿದ್ದು, ಬೇರೆಕಡೆ ಹತ್ಯೆಗೈದು ಸಮುದ್ರಕ್ಕೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಕೈ ಮತ್ತು ಕಾಲುಗಳನ್ನು ಹಗ್ಗದಿಂದ ಬಿಗಿಯಾಗಿ ಕಟ್ಟಲಾಗಿತ್ತು. ವಾರದ ಹಿಂದೆ ಈ ಶವವನ್ನು ಎಸೆದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಉಳ್ಳಾಲ ಪೊಲೀಸರು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಮಹಜರಿಗಾಗಿ ಶವವನ್ನು ಇರಿಸಿದ್ದಾರೆ. ಉಳ್ಳಾಲ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ

Write A Comment