ಕನ್ನಡ ವಾರ್ತೆಗಳು

ವಿಧಾನ ಪರಿಷತ್‌ ಚುನಾವಣೆ : ಬಿಜೆಪಿಯ ಕೋಟಾ ಶ್ರೀನಿವಾಸ್ ಪೂಜಾರಿ ಹಾಗೂ ಕಾಂಗ್ರೆಸ್‌ನ ಪ್ರತಾಪ್‌ಚಂದ್ರ ಶೆಟ್ಟಿ ಗೆಲುವು

Pinterest LinkedIn Tumblr

Shrinivas_Pratapchandra_1

ಮಂಗಳೂರು, ಡಿ.30: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣಾ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್‌ನ ಎರಡು ಸ್ಥಾನಗಳಿಗೆ ರವಿವಾರ ನಡೆದ ಚುನಾವಣೆಯ ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆ ಕಾರ್ಯ ಮುಗಿದಿದ್ದು, ಬಿಜೆಪಿಯ ಕೋಟಾ ಶ್ರೀನಿವಾಸ್ ಪೂಜಾರಿ ಅವರು 2793 ಮತಗಳನ್ನು ಪಡೆಯುವ ಮೂಲಕ ದಾಖಲೆಯ ಅಂತರದ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಅದೇ ರೀತಿ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪ್‌ಚಂದ್ರ ಶೆಟ್ಟಿಯವರು ಕೂಡ 2237 ಮತ (ಎರಡನೇ ಪ್ರಾಶಸ್ತ್ಯದ) ಗಳನ್ನು ಪಡೆದು ವಿಜಯಿಯಾಗಿದ್ದಾರೆ.

ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಗಳಾಗಿ ಸ್ಫರ್ಧಿಸಿ, ಬಾರೀ ಗೆಲುವಿನ ನಿರೀಕ್ಷೆಯಲ್ಲಿದ್ದ ಜಯಪ್ರಕಾಶ್ ಹೆಗ್ಡೆ ಮತ್ತು ಹರಿಕೃಷ್ಣ ಬಂಟ್ವಾಳ ಅವರು ಪರಾಜಯ ಹೊಂದಿದ್ದಾರೆ. ಜಯಪ್ರಕಾಶ್ ಹೆಗ್ಡೆಯವರು 872 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದರೆ, ಮಂಗಳೂರಿನಲ್ಲಿ ಬಾರೀ ನಿರೀಕ್ಷೆಯನ್ನುಂಟು ಮಾಡಿದ್ದ ಹರಿಕೃಷ್ಣ ಬಂಟ್ವಾಳ್ ಅವರು ಬರೀ 127  ಮತಗಳನ್ನು ಪಡೆಯುವ ಮೂಲಕ ಬಾರೀ ಅಂತರದಲ್ಲಿ ಸೋತಿದ್ದಾರೆ.

ಪಕ್ಷೇತರ ಅಭ್ಯರ್ಥಿಗಳಾದ ಅಲ್ಫೋನ್ಸ್ ಫ್ರಾಂಕೊ ಅವರಿಗೆ 51 ಮತ ಸಿಕ್ಕಿದರೆ, ಇಸ್ಮಾಯೀಲ್ ದೊಡ್ಡಮನೆಯವರಿಗೆ ಬರೀ ಒಂದು ಮತ ಸಿಕ್ಕಿದೆ.

Mlc_elction_vijotsva_1 Mlc_elction_vijotsva_2 Mlc_elction_vijotsva_3 Mlc_elction_vijotsva_4 Mlc_elction_vijotsva_5 Mlc_elction_vijotsva_6 Mlc_elction_vijotsva_7 Mlc_elction_vijotsva_8 Mlc_elction_vijotsva_9 Mlc_elction_vijotsva_10 Mlc_elction_vijotsva_11 Mlc_elction_vijotsva_12

ಕಣದಲ್ಲಿದ್ದ ಅಭ್ಯರ್ಥಿಗಳ ವಿವರ :

ಕಾಂಗ್ರೆಸ್‌ನಿಂದ ಕೆ.ಪ್ರತಾಪ್‌ಚಂದ್ರ ಶೆಟ್ಟಿ, ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ, ಜೆಡಿಎಸ್‌ನಿಂದ ಎಸ್.ಪ್ರಕಾಶ್ ಶೆಟ್ಟಿ, ಪ್ರವೀಣ್‌ಚಂದ್ರ ಜೈನ್, ಪಕ್ಷೇತರ ಅಭ್ಯರ್ಥಿಗಳಾಗಿ ಕೆ.ಜಯಪ್ರಕಾಶ್ ಹೆಗ್ಡೆ, ಹರಿಕೃಷ್ಣ ಬಂಟ್ವಾಳ, ಅಲ್ಫೋನ್ಸ್ ಫ್ರಾಂಕೊ, ಇಸ್ಮಾಯೀಲ್ ದೊಡ್ಡಮನೆ ಸ್ಪರ್ಧಾ ಕಣದಲ್ಲಿದ್ದರು.

ಜಯಪ್ರಕಾಶ್ ಹೆಗ್ಡೆ ಮತ್ತು ಹರಿಕೃಷ್ಣ ಬಂಟ್ವಾಳ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಗಳಾಗಿದ್ದು, ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಯಾಗಿ ಅಲ್ಫೋನ್ಸ್ ಫ್ರಾಂಕೊ ಕಣದಲ್ಲಿದ್ದರು.

ವಿಧಾನಪರಿಷತ್ ಚುನಾವಣೆ ಫಲಿತಾಂಶ

 ದಕ್ಷಿಣ ಕನ್ನಡ ಕ್ಷೇತ್ರದ ವಿಧಾನಪರಿಷತ್ ದ್ವಿಸದಸ್ಯ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಕೆ. ಪ್ರತಾಪ್‌ಚಂದ್ರ ಶೆಟ್ಟಿ ಅವರು ಮೊದಲ ಪ್ರಾಶಸ್ತ್ಯ ಮತಗಳಲ್ಲಿ ಚುನಾಯಿತರಾಗಿದ್ದಾರೆ. ಬುಧವಾರ ಲೇಡಿಹಿಲ್ ವಿಕ್ಟೋರಿಯಾ ಕಾಲೇಜಿನಲ್ಲಿ ನಡೆದ ಮತ ಎಣಿಕೆಯಲ್ಲಿ ಅಭ್ಯರ್ಥಿಗಳು ಮೊದಲ ಪ್ರಾಶಸ್ತ್ಯ ಮತಗಳ ಆಧಾರದಲ್ಲಿ ಜಯಗಳಿಸಲು 2012 ಮತಗಳ ಕೋಟಾ ಪಡೆಯಬೇಕಿತ್ತು. ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಕೆ. ಪ್ರತಾಪ್‌ಚಂದ್ರ ಶೆಟ್ಟಿ ಅವರು ಮೊದಲ ಪ್ರಾಶಸ್ತ್ಯದಲ್ಲಿಯೇ ನಿಗದಿತ ಕೋಟಾ ದಾಟಿದ್ದರಿಂದ ವಿಜೇತರಾದರು.

ಅಭ್ಯರ್ಥಿಗಳು ಪಡೆದ ಮತ ವಿವರ ಇಂತಿವೆ.  

ಅಭ್ಯರ್ಥಿ ಮತಗಳು
ಎಸ್.ಪ್ರಕಾಶ್ ಶೆಟ್ಟಿ———— 6
ಕೆ. ಪ್ರತಾಪ್‌ಚಂದ್ರ ಶೆಟ್ಟಿ ——–2237
ಪ್ರವೀಣ್ ಚಂದ್ರ ಜೈನ್———-30
ಕೋಟಾ ಶ್ರೀನಿವಾಸ ಪೂಜಾರಿ    2977
ಅಲ್ಫೋನ್ಸ್ ಫ್ರಾಂಕೋ  ———15
ಇಸ್ಮಾಯಿಲ್ ದೊಡ್ಡಮನೆ ——-1
ಕೆ. ಜಯಪ್ರಕಾಶ್ ಹೆಗ್ಡೆ———- 872
ಹರಿಕೃಷ್ಣ ಬಂಟ್ವಾಳ ————127

ನೋಟಾ ಮತಗಳು———— 2
ತಿರಸ್ಕೃತ ಮತಗಳು————231
ಒಟ್ಟು ಮತಗಳು —————6534

ಮತ ಎಣಿಕೆ ಸಂದರ್ಭದಲ್ಲಿ ಚುನಾವಣಾ ವೀಕ್ಷಕ ಅದೋನಿ ಸಯ್ಯದ್ ಸಲೀಂ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಉಡುಪಿ ಜಿಲ್ಲಾಧಿಕಾರಿ ಡಾ. ವಿಶಾಲ್ ಮತ್ತಿತರರು ಇದ್ದರು.

Write A Comment