ಕನ್ನಡ ವಾರ್ತೆಗಳು

ಪಾದಾಚಾರಿಗಳು, ದ್ವಿಚಕ್ರವಾಹನ ಸವಾರರಿಗೆ ಕಂಠಕವಾದ ಕುಂದಾಪುರ ಮಿನಿ ವಿಧಾನಸೌಧದ ಕ್ಯಾಟಲ್ ಗ್ರಿಡ್

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲೂಕಿನಲ್ಲಿ ಜನವರಿಯಲ್ಲಿ ಉದ್ಘಾಟನೆಗೊಂಡ ಮಿನಿ ವಿಧಾನಸೌಧದ ಕಾಮಗಾರಿ ಕಳಪೆ ಎಂಬ ಬಗ್ಗೆ ಆರಂಭದಿಂದಲೂ ಅಪಸ್ವರಗಳು ಕೇಳಿಬಂದಿತ್ತು. ಅಲ್ಲದೇ ಈ ಬಗ್ಗೆ ಪ್ರಜ್ನಾವಂತ ನಾಗರೀಕರು ಧ್ವನಿ ಎತ್ತುವ ಮೂಲಕ ಕಳಪೆ ಕಾಮಗಾರಿಯನ್ನು ವಿರೋಧಿಸಿದ್ದರು.

Kndpr_Mini Vidhanasoudha_Cattle grid Problem (1) Kndpr_Mini Vidhanasoudha_Cattle grid Problem (3) Kndpr_Mini Vidhanasoudha_Cattle grid Problem (7) Kndpr_Mini Vidhanasoudha_Cattle grid Problem (5) Kndpr_Mini Vidhanasoudha_Cattle grid Problem (2) Kndpr_Mini Vidhanasoudha_Cattle grid Problem (8) Kndpr_Mini Vidhanasoudha_Cattle grid Problem (9) Kndpr_Mini Vidhanasoudha_Cattle grid Problem (4) Kndpr_Mini Vidhanasoudha_Cattle grid Problem (6)

ಇದಕ್ಕೆ ಇಂಬು ನೀಡುವಂತೆ ಒಂದೇ ವರ್ಷದ ಒಳಗೆ ಮಿನಿ ವಿಧಾನಸೌಧದ ಎದುರಿನ ಕ್ಯಾಟಲ್ ಗ್ರಿಡ್ ಸಂಪೂರ್ಣ ಜಖಂಗೊಂಡಿದ್ದು ಪಾದಾಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಸಂಚರಿಸಲು ಬಾರೀ ಕಷ್ಟವಾಗುತ್ತಿದೆ. ಜಾನುವಾರುಗಳು ಹಾಗೂ ಬೇರ್‍ಯಾವುದೇ ಪ್ರಾಣಿಗಳು ಹೋಗದಂತೆ ಈ ಕ್ಯಾಟಲ್ ಗ್ರಿಡ್ ಅಳವಡಿಸಲಾಗುತ್ತದೆ. ಈ ಮೂಲಕವಾಗಿ ಪಾದಾಚಾರಿಗಳು ಹಾಗೂ ವಾಹನಗಳು ಮಾತ್ರ ಹೋಗಲು ಅನುಕೂಲವಾಗಲಿದೆ. ಮಿನಿ ವಿಧಾನಸೌಧದ ಎದುರಿನ ಕ್ಯಾಟಲ್ ಗ್ರಿಡ್ ಕಂಬಿಗಳು ನೆಲಮಟ್ಟದಿಂದ ಮೇಲಕ್ಕೆದ್ದು ನಿಂತಿದ್ದು ಯಾರಾದರೂ ಕಾಲು ತಡೆದು ಬೀಳುವುದು ಗ್ಯಾರೆಂಟಿ. ಇನ್ನು ಪ್ರತಿ ವಾಹನಗಳು ಈ ಗ್ರಿಡ್ ಮೇಲೆ ಹಾದು ಹೋಗುವಾಗ ವಿಪರೀತ ಕರ್ಕಷ ಶಬ್ಧವಾಗುತ್ತಿದ್ದು ಸಮೀಪದಲ್ಲಿ ಕೋರ್ಟ್ ಇರುವ ಕಾರಣ ದೊಡ್ಡ ಸಮಸ್ಯೆಯಾಗುತ್ತಿದೆ.

ನಿತ್ಯ ಸಾವಿರಾರು ಜನರು ಈ ಮಿನಿವಿಧಾನಸೌಧಕ್ಕೆ ತಮ್ಮ ಕೆಲಸ ನಿಮಿತ್ತ ಬರುತ್ತಾರೆ. ಅವರ ಪೈಕಿ ಬಹುತೇಕ ಹಿರಿಯ ನಾಗರೀಕರು ಆಗಮಿಸುತ್ತಾರೆ. ಕಳೆದ ಕೆಲವು ದಿನಗಳಿಂದಲೂ ಈ ಸಮಸ್ಯೆ ಕಂಡುಬರುತ್ತಿದ್ದರೂ ಸಂಬಂದಪಟ್ಟವರ್‍ಯಾರು ಈ ಬಗ್ಗೆ ಗಮನ ವಹಿಸುತ್ತಿಲ್ಲ. ಇನ್ನಾದರೂ ಸಂಬಂದಪಟ್ಟವರು ಎಚ್ಚೆತ್ತುಕೊಂಡು ಈ ಕ್ಯಾಟಲ್ ಗ್ರಿಡ್ ಅವ್ಯವಸ್ಥೆಯನ್ನು ಸರಿಪಡಿಸಬೇಕಿದೆ.

Write A Comment