ಕನ್ನಡ ವಾರ್ತೆಗಳು

ಮುಂಬೈ ಸೆಂಟ್ರಲ್- ಮಂಗಳೂರು ವಿಶೇಷ ರೈಲು ಸೇವೆಯೊಂದಿಗೆ ಕೊಂಕಣ ರೈಲ್ವೆಯಿಂದ ಇತಿಹಾಸ ನಿರ್ಮಾಣ

Pinterest LinkedIn Tumblr

Mumbai_railwy_photo_1

ವರದಿ : ಈಶ್ವರ ಎಂ. ಐಲ್
ಮುಂಬಯಿ : ಪಶ್ಚಿಮ ಮುಂಬಯಿಯಯಿಂದ ಮಂಗಳೂರಿಗೆ ರೈಲು ಪ್ರಾರಂಬಿಸುದರೊಂದಿಗೆ ಈ ಬಾಗದ ಜನರಿಗೆ ಆಗುತ್ತಿರುವ ಅನನುಕೂಲತೆಯನ್ನು ಕಡಿಮೆಗೊಳಿಸಲು ಕಳೆದ ಹಲವಾರು ವರ್ಷಗಳಿಂದ ಗೌರವ ಅಧ್ಯಕ್ಷ ವಿರಾರ್ ಶಂಕರ ಶೆಟ್ಟಿ ನೇತೃತ್ವದ ರೈಲ್ವೆ ಯಾತ್ರಿ ಸಂಘ ಬೊರಿವಲಿ ಹೋರಾಟ ನಡೆಸುತ್ತಿದ್ದು ಇದೀಗ ಮುಂಬಯಿಯ ತುಳು-ಕನ್ನಡಿಗರ ಜನಪ್ರಿಯ ಸಂಸದ ಗೋಪಾಲ ಶೆಟ್ಟಿ ಯವರ ಪ್ರಯತ್ನದಿಂದ ಬೋರಿವಲಿ, ವಸಾಯಿ ಮಾರ್ಗವಾಗಿ, ಮುಂಬೈ ಸೆಂಟ್ರಲ್- ಮಂಗಳೂರು ವಿಶೇಶ ರೈಲನ್ನು ಡಿ. 23ರಂದು ಪ್ರಾಯೋಗಿಕವಾಗಿ ಪ್ರಾರಂಭಿಸಿದ್ದು ಅಂದು ಮಧ್ಯ ರಾತ್ರಿ 12 ಗಂಟೆಗೆ ಸಂಸದ ಗೋಪಾಲ ಶೆಟ್ಟಿ, ರೈಲ್ವೆ ಯಾತ್ರಿ ಸಂಘ ಬೊರಿವಲಿ ಯ ಗೌರವ ಅಧ್ಯಕ್ಷ ವಿರಾರ್ ಶಂಕರ ಶೆಟ್ಟಿ, ಅಧ್ಯಕ್ಷ ಉದಯಶೆಟ್ಟಿ ಶಿಮಂತೂರು, ಇತರ ಪದಾಧಿಕಾರಿಗಳು ಹಾಗೂ ಕನ್ನಡ – ತುಳು ಸಂಘಟನೆಗಳ ಮತ್ತು ವಿವಿಧ ಜಾತೀಯ ಸಂಘಟನೆಗಳ ಪದಾಧಿಕಾರಿಗಳು ಸ್ವಾಗತಿಸಿದರು.

ರಾತ್ರಿ 11.45 ಕ್ಕೆ ಮುಂಬಯಿ ಸೆಂಟ್ರಲ್ ನಿಂದ ಹೊರಟ ಟ್ರೈನ್ ನಂಬ್ರ 09009 ನ ಎಲ್ಲಾ ಭೋಗಿಗಳು ಹೊಸತಾಗಿದ್ದು ಪ್ರಥಮ ದಿನದಲ್ಲೇ ಪ್ರಯಾಣಿಕರಿಂದ ತುಂಬಿತ್ತು. ಡಿ. 24 ರಂದು ರಾತ್ರಿ ಟ್ರೈನ್ ನಂಬ್ರ 09010 ಮಂಗಳೂರಿನಿಂದ ಹೊರಟಿದೆ. ಈ ಮಾರ್ಗವಾಗಿ ಮಂಗಳೂರಿಗೆ ಕೊಂಕಣ ರೈಲ್ವೆಯು ಪ್ರಥಮ ಓಡುತ್ತಿದ್ದು ಇತಿಹಾಸ ನಿರ್ಮಿಸಿದೆ.

Mumbai_railwy_photo_2 Mumbai_railwy_photo_3 Mumbai_railwy_photo_4 Mumbai_railwy_photo_5 Mumbai_railwy_photo_6 Mumbai_railwy_photo_7 Mumbai_railwy_photo_8

ರೈಲ್ವೆ ಯಾತ್ರಿ ಸಂಘ ಬೊರಿವಲಿ ಯ ಉಪಾಧ್ಯಕ್ಷ ಪ್ರೇಮನಾಥ ಕೋಟ್ಯಾನ್, ಗೌ. ಕಾರ್ಯದರ್ಶಿ ಶೀಲಾ ಶೆಟ್ಟಿ, ಜತೆ ಕಾರ್ಯದರ್ಶಿ ರಜಿತ್ ಸುವರ್ಣ, ಬೋರಿವಲಿ ತುಳು ಸಂಘದ ಅಧ್ಯಕ್ಷ ಪೇಟೆಮನೆ ಪ್ರಕಾಶ್ ಶೆಟ್ಟಿ, ಬಿಲ್ಲವರ ಅಸೋಷಿಯೇಷನ್ ಸ್ಥಳೀಯ ಸಮಿತಿಯ ಪದಾಧಿಕಾರಿಗಳಾದ ಮೋಹನ್ ಬಿ. ಅಮೀನ್, ಯಶವಂತ ಪೂಜಾರಿ, ಸದಾಶಿವ ಕರ್ಕೇರ, ಶಿವರಾಮ ಸಾಲ್ಯಾನ್, ಕರುಣಾಕರ ಪೂಜಾರಿ, ಪ್ರತೀಕ ಕರ್ಕೇರ ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕುಂದಾಪುರ ಮತ್ತು ಮೂಲ್ಕಿಯಲ್ಲಿ ಈ ರೈಲು ನಿಲುಗಡೆಗೆ ಮನವಿಯನ್ನು ಸಲ್ಲಿಸಲಾಗಿದೆ ಎಂದು ಅಧ್ಯಕ್ಷ ಉದಯಶೆಟ್ಟಿ ಶಿಮಂತೂರು ಅವರು ತಿಳಿಸಿದ್ದಾರೆ.

Write A Comment