ಕನ್ನಡ ವಾರ್ತೆಗಳು

ಡಿ.27 : ಲ್ಯಾಂಡ್‌ಲಿಂಕ್ಸ್ ಸಂಸ್ಥೆಯ 35ನೇ ವರ್ಷದ ಸಂಭ್ರಮಾಚರಣೆ : 35ರ ವಿಶೇಷ ಕೊಡುಗೆ – ಮೊದಲ 35 ಗ್ರಾಹಕರಿಗೆ 25 ವರ್ಷದ ಬಳಿಕ ಸಂಪೂರ್ಣ ಹಣ ವಾಪಸ್ಸು

Pinterest LinkedIn Tumblr

Palemar_Land_Links_1

ವರದಿ / ಚಿತ್ರ : ಸತೀಶ್ ಕಾಪಿಕಾಡ್

ಮಂಗಳೂರು : ಪ್ರತಿಷ್ಠಿತ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಮಂಗಳೂರಿನ ಲ್ಯಾಂಡ್‌ಲಿಂಕ್ಸ್ ಸಂಸ್ಥೆ ಈಗ ಸ್ಥಾಪನೆಯ 35ನೇ ವರ್ಷದ ಸಂಭ್ರಮದಲ್ಲಿದೆ. ಸಂಭ್ರಮಾಚರಣೆಯ ಕಾರ್ಯಕ್ರಮ ಇದೇ ಡಿ.27ರಂದು ಸಂಜೆ 6ರಿಂದ ಮೇರಿಹಿಲ್‌ನ ವಿಕಾಸ್ ಪಿಯು ಕಾಲೇಜ್ ಗ್ರೌಂಡ್‌ನಲ್ಲಿ ಜರಗಲಿದೆ ಎಂದು ಲ್ಯಾಂಡ್‌ಲಿಂಕ್ಸ್ ಸಂಸ್ಥೆಯ ಸ್ಥಾಪಕ, ಮಾಲಕ, ಪ್ರವರ್ತಕ ಜೆ.ಕೃಷ್ಣ ಪಾಲೆಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

1981ರಲ್ಲಿ ಜೆ. ಕೃಷ್ಣ ಪಾಲೆಮಾರ್ ಅವರು ಪುಟ್ಟದಾಗಿ ಆರಂಭಿಸಿದ ಲ್ಯಾಂಡ್‌ಲಿಂಕ್ಸ್ ಸಂಸ್ಥೆ ಜನತೆಯ ಆಶೀರ್ವಾದದೊಂದಿಗೆ ಈ ಮೂರುವರೆ ದಶಕದಲ್ಲಿ ವಿಶ್ವಾಸಾರ್ಹ ಪರಂಪರೆಯೊಂದಿಗೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಬ್ರ್ಯಾಂಡ್ ಎಂಬ ಸ್ವರೂಪವನ್ನು ಪಡೆದುಕೊಂಡಿದೆ.

ಸಮಾಜದ ವಿವಿಧ ಆರ್ಥಿಕ ಸಾಮರ್ಥ್ಯದವರ ಅನುಕೂಲಕ್ಕೆ ತಕ್ಕಂತೆ, ಅತೀ ಕಡಿಮೆ ದರದಲ್ಲಿ ಉತ್ಕೃಷ್ಟ ಗುಣಮಟ್ಟದ ಮನೆ, ಅಪಾರ್ಟ್‌ಮೆಂಟ್, ನಿವೇಶನ ಒದಗಿಸಿಕೊಡುವ ಬದ್ಧತೆಯೊಂದಿಗೆ ಪಾಲೆಮಾರ್ ಅವರು ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.ಮನೆ, ಅಪಾರ್ಟ್‌ಮೆಂಟ್, ನಿವೇಶನಗಳ ಜತೆಯಲ್ಲಿ ಎಲ್ಲಾ, ಬಂಗಲೆ, ಬಡಾವಣೆ, ವಾಣಿಜ್ಯ ಸಮುಚ್ಛಯ, ಕೈಗಾರಿಕಾ ನಿವೇಶನ, ಫಾರ್ಮ್ ಹೌಸ್‌ಗಳನ್ನು ಲ್ಯಾಂಡ್‌ಲಿಂಕ್ಸ್ ಒದಗಿಸುತ್ತದೆ. ದೇರೆಬೈಲ್ ಕೊಂಚಾಡಿಯ ಲ್ಯಾಂಡ್‌ಲಿಂಕ್ಸ್ ಟೌನ್‌ಶಿಪ್‌ನಲ್ಲಿ ಈ ಸರಿಸುಮಾರು 2000ದಷ್ಟು ಮನೆಗಳು ನಿಮಾರ್ಣವಾಗಿದ್ದು ದೇಶದಲ್ಲೇ ಅತೀ ವಿಶಿಷ್ಟ ಎಂಬ ಗೌರವಕ್ಕೆ ಪಾತ್ರವಾಗಿದೆ.

ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ… ಹೀಗೆ ವಿವಿಧ ಕ್ಷೇತ್ರಗಳಲ್ಲಿ ದಾನಿಯಾಗಿ, ಸಂಘಟಕರಾಗಿ, ಮಾರ್ಗದರ್ಶಿಕರಾಗಿ ಪಾಲೆಮಾರ್, ಸಮಾಜದಿಂದ ಪಡೆದಿರುವುದು ಸಮಾಜಕ್ಕೆ ಮರು ಅರ್ಪಣೆ ಎಂಬ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ. ಕರ್ನಾಟಕ ಸರಕಾರದಲ್ಲಿ ಸಚಿವರಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅವರು ಅನೇಕ ಯೋಜನೆಗಳನ್ನು ಸಮಾಜಕ್ಕೆ ಅರ್ಪಿಸಿದವರು. ತಮ್ಮ ರಾಜಕೀಯ ಪ್ರಭಾವವನ್ನು ಎಂದೂ ಉದ್ಯಮಕ್ಕೆ ಬಳಸಿದವರಲ್ಲ. ಸರ್ವರ ಪ್ರೀತ್ಯಾದರಗಳಿಗೆ ಪಾತ್ರರಾಗಿ `ಕೃಷ್ಣಣ್ಣ’ ಎಂದೇ ಜನಪ್ರಿಯರು.

ಬೊಂದೇಲ್‌ನಲ್ಲಿ ಅವರು 2012ರಲ್ಲಿ ಸ್ಥಾಪಿಸಿರುವ ವಿಕಾಸ್ ಪದವಿಪೂರ್ವ ಕಾಲೇಜು ಈಗ ರಾಜ್ಯದ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿ ಪ್ರಸಿದ್ಧಿಯಾಗಿದೆ. ಈಗ ಕೃಷ್ಣ ಪಾಲೆಮಾರ್ ಅವರ ಪುತ್ರ ಪ್ರದೀಪ್ ಪಾಲೆಮಾರ್ ಅವರು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

Palemar_Land_Links_2 Palemar_Land_Links_3 Palemar_Land_Links_4 Palemar_Land_Links_5 Palemar_Land_Links_6

35ರ ವಿಶೇಷ ಕೊಡುಗೆ – ಮೊದಲ 35 ಗ್ರಾಹಕರಿಗೆ 25 ವರ್ಷದ ಬಳಿಕ ಸಂಪೂರ್ಣ ಹಣ ವಾಪಸ್ಸು :

ಲ್ಯಾಂಡ್ ಲಿಂಕ್ಸ್ ವಿವಿಧ ಯೋಜನೆಗಳಲ್ಲಿ ಲಭ್ಯವಿರುವ ಪ್ಲಾಟ್‌ಗಳ ಪೈಕಿ ಮೊದಲ 35ನ್ನು ಖರೀದಿಸಿದ ಗ್ರಾಹಕರಿಗೆ ಅವರು ಖರೀದಿಸಿದಾಗ ನೀಡುವ ಮೊತ್ತವನ್ನು 25 ವರ್ಷಗಳಲ್ಲಿ ಅವರಿಗೇ ಹಿಂತಿರುಗಿಸಲಾಗುತ್ತದೆ. ಬ್ಯಾಂಕ್ ಮುಂಗಡ ಪಡೆದವರಿಗೂ ಬ್ಯಾಂಕಿನ ನಿಯಮಾನುಸಾರ ಇದು ಲಭ್ಯವಿದೆ. ಒಂದು ಕುಟುಂಬ ಒಂದೇ ಮನೆ ಖರೀದಿಸಬಹುದು. ಈ ಕೊಡುಗೆ 27-12-2015ರಿಂದ 13-01-2016ರ ವರೆಗೆ. ರಿಯಲ್ ಎಸ್ಟೇಟ್ ಉದ್ಯಮದ ಇತಿಹಾಸದಲ್ಲಿಯೇ ಇದು ಅಪೂರ್ವ ಕೊಡುಗೆ ಎಂದು ಪಾಲೆಮಾರ್ ಬಣ್ಣಿಸಿದರು.

ಜನ ಸಾಮಾನ್ಯರೂ ಮನೆ ಹೊಂದುವಂತಾಗಲು ಮಂಗಳೂರು ನಗರದ ಕುಡುಪುವಿನಲ್ಲಿ ೧೦ ಲಕ್ಷ ರೂ. ಗೆ ಮನೆ ಒದಗಿಸಲು ತೀಮಾನಿಸಿಲಾಗಿದೆ. ಆರ್ಥಿಕವಾಗಿ ಹಿಂದುಳಿದವರು ಮನೆ ಹೊಂದುವ ಕನಸು ನನಸಾಗಲು ಇಲ್ಲಿ 250 ಮನೆಗಳನ್ನು ನಿರ್ಮಿಸಲಾಗುತ್ತದೆ. ಕುಂಜತ್ತಬೈಲಿನಲ್ಲಿ 20ಎಕರೆಯಲ್ಲಿ ವಿಲ್ಲಾಗಳ ನಿರ್ಮಾಣ / ಪಂಪ್‌ವೆಲ್‌ನಲ್ಲಿ 6 ಎಕರೆ ಜಮೀನಿನಲ್ಲಿ ನಿವೇಶನ / ಬಲ್ಲಾಳ್‌ಬಾಗ್‌ನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ / ಬ್ಯಾಂಕ್ ಲೋನ್ ವ್ಯವಸ್ಥೆ ಮಾಡಲಾಗುವುದು ಎಂದು ಪಾಲೆಮಾರ್ ವಿವರಿಸಿದರು.

35ರ ಸಂಭ್ರಮ :

ಲ್ಯಾಂಡ್‌ಲಿಂಕ್ಸ್ 35ನೇ ವರ್ಷದ ಸಂಭ್ರ್ರಮಾಚರಣೆಯ ಕಾರ್ಯಕ್ರಮದ ವೈಶಿಷ್ಟ್ಯ / 27-12-2015ನೇ ಭಾನುವಾರ ಸಂಜೆ 6ರಿಂದ ಮೇರಿಹಿಲ್‌ನ ವಿಕಾಸ್ ಪಿ ಯು ಕಾಲೇಜ್ ಗ್ರೌಂಡ್ / ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಅವರಿಂದ ಉದ್ಘಾಟನೆ. ಶಾಸಕ ಜೆ.ಆರ್.ಲೋಬೊ ಅವರಿಂದ ಅತ್ಯಾಧುನಿಕ ಸೌಲಭ್ಯಗಳ ಅಲ್ ಹೆಲೆನ್ ಅಪಾರ್ಟ್‌ಮೆಂಟಿನ ಉದ್ಘಾಟನೆ ನಡೆಯಲಿದೆ. ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಪಿ. ಜಯರಾಮ ಭಟ್ ಅಧ್ಯಕ್ಷತೆ. ಸಂಸದ ನಳಿನ್ ಕುಮಾರ್ ಕಟೀಲು, ಬಿ.ವಿ. ಆಚಾರ್ಯ ಲ್ಯಾನ್ಸ್‌ಲಾಪ್ ಪಿಂಟೊ ಅವರು ಮುಖ್ಯ ಅತಿಥಿಗಳು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮದ ಜತೆ ಸಹಭೋಜನ ಹಮ್ಮಿಕೊಳ್ಳಲಾಗಿದೆ ಎಂದು ಕೃಷ್ಣ ಪಾಲೆಮಾರ್ ತಿಳಿಸಿದರು.

ಸಂಸ್ಥೆಗೆ ಸೇವೆ ಸಂತೃಪ್ತಿ :

ಲ್ಯಾಂಡ್‌ಲಿಂಕ್ಸ್ ವತಿಯಿಂದ ನಿರಾಸರವಾಗಿ ಅಂಗವಿಕಲ ಶಿಕ್ಷಣ ಸಂಸ್ಥೆಗಳಿಗೆ ದೇಣಿಗೆ, ಬಡವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಪುಸ್ತಕ, ಸಮವಸ್ತ್ರ ವಿತರಣೆ / ಕನಿಷ್ಠ ಆದಾಯದ ಕುಟುಂಬಗಳಿಗೂ ಸ್ವಂತ ಸೂರನ್ನು ಒದಗಿಸಿದ ಸಂತೃಪ್ತಿ. / ಸಹಸ್ರಾರು ಮಂದಿಗೆ ಪ್ರತ್ಯಕ್ಷ-ಅಪ್ರತ್ಯಕ್ಷ ಉದ್ಯೋಗ / ಪರಿಸರ ಸಂರಕ್ಷಣೆ ಆದ್ಯತೆ, ಹಸಿರಿನ ರಕ್ಷಣೆ. ಪಿಲಿಕುಳದಲ್ಲಿ ಎರಡು ಹುಲಿಗಳನ್ನು ದತ್ತು ಸ್ವೀಕರಿಸಿ ಪಾಲನೆ ಮಾಡುತ್ತಿರುವ ಸಂತಸ. / ಜಾತಿಮತ ಬೇಧವಿಲ್ಲದೆ ಎಲ್ಲಾ ಧಾರ್ಮಿಕ ಸಂಸ್ಥೆಗಳ ಪುನರುತ್ಥಾನ ಹಾಗೂ ಅಭಿವೃದ್ಧಿಗೆ ನೆರವು ಇದೆಲ್ಲಾ ಸೇವೆ ಸಂಸ್ಥೆಗೆ ಸೇವೆ ಸಂತೃಪ್ತಿ ತಂದಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಲ್ಯಾಂಡ್‌ಲಿಂಕ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಪಾಲೆಮಾರ್, ಸಂಸ್ಥೆಯ ಸಲಹೆಗಾರರಾದ ಅನಂತ ಪ್ರಭು, ವಿಕಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿಗಳಾದ ಎಸ್.ಕೊರಗಪ್ಪ ಹಾಗೂ ಜೆ.ಕೆ.ರಾವ್ ಮುಂತಾದವರು ಉಪಸ್ಥಿತರಿದ್ದರು.

Write A Comment