ಮ೦ಗಳೂರು,ಡಿಸೆಂಬರ್.23: ದಿಲ್‌ವಾಲೆ ಚಲನಚಿತ್ರವು ಡಿ.18ರಂದು ಮಂಗಳೂರು ನಗರದಲ್ಲಿ ಬಿಡುಗಡೆಯಾಗಿರುತ್ತದೆ. ಈ ಚಲನಚಿತ್ರವು ಮಂಗಳೂರು ನಗರದಲ್ಲಿ ಡಿ.18 ಮತ್ತು 19ರಂದು ಪ್ರದರ್ಶಿತವಾಗಿರುತ್ತದೆ.
ಡಿ.20ರಂದು ಸಂಜೆ 6 ಗಂಟೆಯ ಸಮಯದಲ್ಲಿ ಚಲನಚಿತ್ರ ಪ್ರದರ್ಶನದ ವೇಳೆ ಕೆಲವರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಸೂಕ್ತ ಬಂದೋಬಸ್ತು ಒದಗಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ.
ಡಿ.21ರಂದು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆಯನ್ನು ಮಾಡಿದವರ ವಿರುದ್ದ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಡಿ.22ರಂದು ಚಲನಚಿತ್ರ ಪ್ರದರ್ಶಕರ ಸಭೆ ನಡೆಸಿ ಅವರ ಅಭಿಪ್ರಾಯ ತಿಳಿದುಕೊಳ್ಳಲಾಗಿರುತ್ತದೆ. ಪೊಲೀಸ್ ವತಿಯಿಂದ ಚಲನಚಿತ್ರ ಪ್ರದರ್ಶಕರಿಗೆ ಸಿನಿಮಾ ಪ್ರದರ್ಶಿಸಲು ಸೂಕ್ತ ಬಂದೋಬಸ್ತು ಒದಗಿಸಲಾಗುವುದೆಂದು ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.