ಕನ್ನಡ ವಾರ್ತೆಗಳು

ಡಿ.27: ಪಿಲಿಕುಳದಲ್ಲಿ ‘ಡಿಂಕಿ ಐಸ್‌ಕ್ರೀಂ’ ತಿನ್ನುವ ಸ್ಪರ್ಧೆ

Pinterest LinkedIn Tumblr

Pilikula_ice_cream_cpmu

ಮಂಗಳೂರು,ಡಿ.21: ‘ಪಿಲಿಕುಳ ಹಬ್ಬ’ ದ ಪ್ರಯುಕ್ತ ನಿಸರ್ಗ ಫೌಂಡೇಶನ್‌ನ ಸಹಯೋಗದಲ್ಲಿ ಮಕ್ಕಳಿಗಾಗಿ ‘ಡಿಂಕಿ ಐಸ್‌ಕ್ರೀಂ’ ತಿನ್ನುವ ಸ್ಪರ್ಧೆ (Dinky Ice Cream Eating Competition) ಯನ್ನು ,ಡಿ.27 ರ ಭಾನುವಾರ ಪಿಲಿಕುಳದಲ್ಲಿ ನಡೆಸ ಲಾಗುವುದು. ಸಾಯಂಕಾಲ 4.30 ಕ್ಕೆ ಸರಿಯಾಗಿ ಪಿಲಿಕುಳ ಅರ್ಬನ್ ಹಾಥ್ ನಲ್ಲಿ ನಡೆಲಿರುವ ಈ ಸ್ಪರ್ಧೆಗೆ ವಿಶೇಷವಾಗಿ ಲೈಟ್‌ಹೌಸ್ ಐಸ್‌ಕ್ರೀಂನ್ನು ತಯಾರಿಸಲಾಗುತ್ತದೆ. ರಿಂದ 12 ವರ್ಷದ ಒಳಗಿನ ಮಕ್ಕಳು ಭಾಗವಹಿಸಬಹುದು. ಜನ್ಮ ದಿನಾಂಕದ ದಾಖಲೆ ಹಾಗೂ ಫೋಟೋ ಸಹಿತ ಗುರುತಿನ ಚೀಟಿ ತೋರಿಸಬೇಕು.

ಭಾಗವಹಿಸಲಿಚ್ಚಿಸುವವರು ದಿನಾಂಕ 26.12.2015 ರ ಸಂಜೆ 3.೦೦ರ ಒಳಗಾಗಿ nisargamangalore@yahoo.com ಅಥವಾ 08244289414 ಮೂಲಕ ದಾಖಲಾತಿ ಮಾಡಿಸಿಕೊಳ್ಳಬಹುದು. ಅಥವಾ ದಿನಾಂಕ 27.12.2015 ರ ಸಂಜೆ 4.00ರ ಒಳಗಾಗಿ ಸ್ಥಳದಲ್ಲೇ ದಾಖಲಾತಿ ಮಾಡಿಕೊಳ್ಳಬಹುದು ಎಂದು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಕಾರ್ಯನಿರ್ವಾಹಕ ನಿರ್ದೇಶಕರಾದ ಪ್ರಭಾಕರ್ ಶರ್ಮಾ ಹೇಳಿದರು.

 

Write A Comment