ಕನ್ನಡ ವಾರ್ತೆಗಳು

ಓದು ಬರಹ ಮತ್ತು ಅಭಿವ್ಯಕ್ತಿ ಸಾಮರ್ಥ್ಯದ ಸ್ಪರ್ಧಾ ಮಾಸ -ಕಲಿಕೋತ್ಸವ

Pinterest LinkedIn Tumblr

kalaotsva_prgm_pic_1

ಮಂಗಳೂರು,ಡಿ.17: ಮಂಗಳೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ,ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮತ್ತು ಸಮೂಹ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಓದು ಬರಹ ಮತ್ತು ಅಭಿವ್ಯಕ್ತಿ ಸಾಮರ್ಥ್ಯದ ಸ್ಪರ್ಧಾ ಮಾಸ -ಕಲಿಕೋತ್ಸವ ಕಾರ್ಯಕ್ರಮವು ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬಬ್ಬುಕಟ್ಟೆಯಲ್ಲಿ ಹಿರಿಯ ಸಮಾಜ ಸೇವಕಿ ಸುಹಾಸಿನಿ ಬಬ್ಬುಕಟ್ಟೆಯವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಶಿಕ್ಷಣ ಪಡೆದು ಶಾಲೆಗೆ ಉತ್ತಮ ಹೆಸರು ತರಬೇಕೆಂದು ಕೇಳಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪೆರ್ಮನ್ನೂರು ಫ್ರೌಡ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಮಾತನಾಡಿ ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮನೋಭಾವ ಮೈಗೂಡಿಸಿ ವಿದ್ಯಾರ್ಥಿಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವನ್ನು ಈ ಇಲಾಖೆಯು ಮಾಡುತ್ತಾ ಬಂದಿದೆ.

kalaotsva_prgm_pic_2 kalaotsva_prgm_pic_3 kalaotsva_prgm_pic_4

ಉಳ್ಳಾಲ ಸಿ.ಆರ್.ಪಿ ಶ್ರೀಮತಿ ನಳಿನಿ, ಕಲ್ಲಾಪು ಉರ್ದು ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪದ್ಯಾಯರಾದ ಶ್ರೀಮತಿ ಅಸ್ಮಾ.ಮಂಗಳೂರು ದಕ್ಷಿಣ ಕ್ಷೇತ್ರ ಬಿ.ಆರ್.ಪಿ. ಶ್ರೀಮತಿ ತುಳಸಿ.ಉಪಸ್ಥಿತರಿದ್ದರು.

ಬಬ್ಬುಕಟ್ಟೆ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ.ಟಿ ಸೀತಾಲಕ್ಷ್ಮಿ ಸ್ವಾಗತಿಸಿದರು,ಶ್ರೀಮತಿ ಚಂಚಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.ಪೆರ್ಮನ್ನೂರು ಸಿ.ಆರ್.ಪಿ ಶ್ರೀಮತಿ ಹರ್ಷಲತಾ ಪ್ರಸ್ತಾವಿಕವಾಗಿ ಮಾತನಾಡಿದರು.ಸಹ ಶಿಕ್ಷಕಿ.ಜಿ.ಟಿ ಕಲಾಕುಮಾರಿ ದನ್ಯವಾದವಿತ್ತರು

Write A Comment