ಕನ್ನಡ ವಾರ್ತೆಗಳು

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದಿಂದ ಮೈಸೂರು ಸಿಲ್ಕ್ ವಿಂಟೇಜ್‌ ಸೀರೆಗಳ ಪ್ರದರ್ಶನ ಮತ್ತು ಮಾರಾಟ

Pinterest LinkedIn Tumblr

Mysore_silk_dc_1

ಮಂಗಳೂರು,ಡಿ.12: ಕೆಎಸ್‌ಐಸಿ ಕರ್ನಾಟಕ ಸರಕಾರದ ಒಂದು ಉದ್ಯಮವಾಗಿದ್ದ್ದು, ಮೈಸೂರು ಸಿಲ್ಕ್ ವಿಂಟೇಜ್‌ ಸೀರೆಗಳ ಸ್ಪರ್ಧೆಯಲ್ಲಿ ಆಯ್ಕೆಯಾಗಿ ಬಹುಮಾನ ತನ್ನ ಮುಡಿಗೆರಿಸಿಕೊಂಡ ವಿಜೇತ ವಿಂಟೇಜ್‌ ಸೀರೆಗಳ ಪ್ರದರ್ಶನವನ್ನು ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಶುಕ್ರವಾರ ಉದ್ಘಾಟಿಸಿದರು.

ಕರ್ನಾಟಕದ ಪಾರಂಪರಿಕ ಉತ್ಪನ್ನವಾದ ಮೈಸೂರ್‌ ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ನಗರದ ಲಾಲ್‌ಬಾಗ್‌ ಸಮೀಪದ ಹಿಂದಿ ಪ್ರಚಾರ ಸಮಿತಿ ಭವನದಲ್ಲಿ ಆರಂಭಗೊಂಡಿತು. ಕೆಎಸ್‌ಐಸಿ (ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ) ಆಯೋಜಿಸಿರುವ ಈ ಪ್ರದರ್ಶನ ಡಿ. 14ರ ವರೆಗೆ ನಡೆಯಲಿದ್ದು, ಇದರ ಪ್ರದರ್ಶನವು ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ.

Mysore_silk_dc_2 Mysore_silk_dc_3 Mysore_silk_dc_4 Mysore_silk_dc_5 Mysore_silk_dc_6 Mysore_silk_dc_7

ಸಾಂಪ್ರದಾಯಿಕ ರೀತಿಯಲ್ಲದೆ, ಕೆಎಸ್‌ಐಸಿಯು ಈಗ ನಾಜೂಕಾದ ವಿನ್ಯಾಸದ ಸಂಗ್ರಹಿತ ಕ್ರೇಪ್‌ ಡಿ ಚೈನ್‌ ಸೀರೆ ಹಾಗೂ ಜಾರ್ಜೆಟ್‌ ಮತ್ತು ಸಾದಾ ಮುದ್ರಿತ ಸೀರೆ, ಟೈ, ಸ್ಕಾರ್ಫ್‌ ಇತ್ಯಾದಿ ಉತ್ಪನ್ನಗಳು ಪ್ರದರ್ಶನದಲ್ಲಿವೆ. ನವನವೀನ ವಿವಾಹ ಸಂಗ್ರಹ ಸೀರೆಗಳನ್ನು ಪರಿಚಯಿಸಲಾಗಿದೆ ಹಾಗೂ ಕೆಎಸ್‌ಐಸಿಯು ತನ್ನ ಎಲ್ಲ ಉತ್ಪನ್ನಗಳ ಮೇಲೆ ಶೇ. 25ರ ವರೆಗೆ ರಿಯಾಯಿತಿ ನೀಡುತ್ತಿದೆ. ಸರಕಾರಿ ನೌಕರರಿಗೆ ಬಡ್ಡಿ ರಹಿತ ಸುಲಭ ಕಂತುಗಳಲ್ಲಿ ಮೈಸೂರು ಸಿಲ್ಕ್ ಸೀರೆಗಳನ್ನು ಕೊಳ್ಳಲು ಅವಕಾಶವಿರುತ್ತದೆ ಎಂದು ಕೆಎಸ್‌ಐಸಿ ವ್ಯವಸ್ಥಾಪಕ ನಿರ್ದೇಶಕ ಫಿಲೋಮೆನ್‌ ರಾಜ್‌ ತಿಳಿಸಿದರು.

ಮೈಸೂರ್‌ ಸಿಲ್ಕ್ ವೈಶಿಷ್ಟ್ಯ:
ಭಾರತದಲ್ಲಿ ದೊರೆಯುವ ರೇಷ್ಮೆ ವಸ್ತ್ರಗಳಿಗಿಂತ ಮೈಸೂರ್‌ ಸಿಲ್ಕ್ ಭಿನ್ನವಾಗಿದೆ. ಇದನ್ನು ಹಳೆ ಮೈಸೂರು ಪ್ರದೇಶದಲ್ಲಿ ದೊರೆಯುವ ಪ್ರಾಕೃತಿಕ ರೇಷ್ಮೆ ಗೂಡಿನಿಂದ ದೊರೆಯುವ ಅತ್ಯುತ್ತಮ ರೇಷ್ಮೆಯಿಂದ ತಯಾರಿಸಲಾಗುತ್ತದೆ. ಇದು ಬಟ್ಟೆಗಳಿಗೆ ವಿಶಿಷ್ಟ ಹೊಳಪು ಮತ್ತು ಭೌಗೋಳಿಕ ಸುವಾಸನೆ ನೀಡಿದೆ. 12,000 ರೂ.ನಿಂದ 2.78 ಲಕ್ಷ ರೂ. ಬೆಲೆಬಾಳುವ ಸೀರೆಗಳ ಸಂಗ್ರಹ ಇಲ್ಲಿದೆ.

ಸಾಂಪ್ರದಾಯಿಕ ರೀತಿಯ ಉತ್ಪಾದನೆ, ವಸ್ತ್ರದಲ್ಲಿ ಅಳವಡಿಸಲಾಗಿರುವ ಹುರಿ ಮಾಡುವ ವಿಧಾನ ಮುಂತಾದ ಅಂಶಗಳಿಂದ ಮೈಸೂರ್‌ ಸಿಲ್ಕ್ ಬಟ್ಟೆಯು ಭಾರತದಲ್ಲಿ ದೊರೆಯುವ ಕ್ರೇಪ್‌ ಸಿಲ್ಕ್ ಬಟ್ಟೆಗಳಲ್ಲಿಯೇ ಅತ್ಯುತ್ತಮವಾಗಿರುವುದಲ್ಲದೆ ಬಟ್ಟೆಗೆ ವಿಶೇಷ ಮೆರುಗನ್ನು ನೀಡಿದೆ. ಮೈಸೂರು ಸಿಲ್ಕ್ ಗೆ ಉಪಯೋಗಿಸುವ ಜರಿ ಪರಿಶುದ್ಧ ಚಿನ್ನವಾಗಿದ್ದು, ಶೇ. 0.65 ಚಿನ್ನ ಮತ್ತು ಶೇ. 65ರಷ್ಟು ಬೆಳ್ಳಿಯಿಂದ ತಯಾರಿಸಲಾಗಿದೆ. ವಿನ್ಯಾಸಗಳು ಸಾಂಪ್ರದಾಯಿಕ ಮತ್ತು ಆಧುನಿಕತೆಯಿಂದ ಕೂಡಿವೆ.

ಕೆಎಸ್‌ಐಸಿಯು ಇತ್ತೀಚೆಗೆ ಇ-ಜಕಾರ್ಡ್‌ ಮಗ್ಗಗಳನ್ನು ಅಳವಡಿಸಿದ್ದು, 15ರಿಂದ 20 ನವನವೀನ ವಿನ್ಯಾಸಗಳ ಸೀರೆಗಳನ್ನು ಉತ್ಪಾದಿಸಿ ಗ್ರಾಹಕರಿಗೆ ಪರಿಚಯಿಸಿದೆ. ಕಂಪೆನಿ ಐಎಸ್‌ಒ 9001-2008, ಐಎಂಎಸ್‌ 14001-2004 ಹಾಗೂ ಒಎಚ್‌ಎಸ್‌ಎಎಸ್‌ 18001- 2007ರ ದೃಢೀಕರಣ ಪತ್ರ ಹೊಂದಿದೆ ಎಂದು ಕೆಎಸ್‌ಐಸಿ ವ್ಯವಸ್ಥಾಪಕ ನಿರ್ದೇಶಕ ಫಿಲೋಮೆನ್‌ ರಾಜ್‌ ವಿವರಿಸಿದರು.

Write A Comment