ಕನ್ನಡ ವಾರ್ತೆಗಳು

ಕಂಕನಾಡಿ ಪೊಲೀಸರು ಬಂಧಿಸಿದ ಅಬೂಬಕ್ಕರ್ ಸಿದ್ಧಿಕ್ ಅಮಾಯಕನಲ್ಲ – ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ : ಮೊಯ್ದಿನ್ ಬಾವಗೆ ಸಂತ್ರಸ್ತೆ ತಿರುಗೇಟು

Pinterest LinkedIn Tumblr

Woodland_press_meet_2

ಮಂಗಳೂರು: ಉಳಾಯಿಬೆಟ್ಟು ಗಲಾಭೆ ಪ್ರಕರಣದಲ್ಲಿ ಕಂಕನಾಡಿ ಗ್ರಾಮಾಂತರ ಪೊಲೀಸರಿಂದ ಬಂಧಿತನಾಗಿ ಬಳಿಕ ಪೊಲೀಸರ ಪ್ರತಿಭಟನೆಗೆ ಕಾರಣನಾದ ಅಬೂಬಕ್ಕರ್ ಸಿದ್ಧಿಕ್ ಅಮಾಯಕನಲ್ಲ, ಈತ ಗಲಾಭೆ ಪ್ರಕರಣದಲ್ಲಿ ಮಾತ್ರವಲ್ಲದೇ ಅತ್ಯಾಚಾರಕ್ಕೆ ಪ್ರಯತ್ನಿಸಿದ ಆರೋಪಿಯೂ ಆಗಿದ್ದಾನೆ ಎಂದು ಉಳಾಯಿಬೆಟ್ಟು ಪರಿಸರದ ಯುವತಿಯೊಬ್ಬಳು ಆರೋಪಿಸಿದ್ದಾಳೆ.

ಮಂಗಳೂರಿನ ಖಾಸಗಿ ಹೊಟೇಲೊಂದರಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಳಾಯಿಬೆಟ್ಟು ಪರಿಸರದ ಸೌಮ್ಯಾ ಎಂಬ ಯುವತಿ, ಅಬೂಬಕ್ಕರ್ ಸಿದ್ಧಿಕ್ ಕಳೆದ ವರ್ಷ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯಾಗಿದ್ದಾನೆ. ಬಂಧಿತ ಸಿದ್ಧಿಕ್ ಅಮಾಯಕ ಎಂದು ಹೇಳಿ ಗುರುವಾರ ಶಾಸಕ ಮೊಯ್ದಿನ್ ಬಾವ ಅವರು ಪತ್ರಿಕಾಗೋಷ್ಠಿ ಕರೆದು ಹೇಳಿದ್ದಾರೆ. ಆದರೆ ಈತ ಅಮಾಯಕನಲ್ಲ ಎಂದು ತಿಳಿಸಿದ್ದಾರೆ.

Woodland_press_meet_4

ಅ ದಿನ ತಾನು ಮೆಹಂದಿ ಕಾರ್ಯಕ್ರಮಕ್ಕೆ ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದಾಗ ರಿಕ್ಷಾ ತಡೆದು ನೂರಾರು ಮಂದಿ ಗಲಾಟೆ ಮಾಡಿದ್ದು, ಇದರಲ್ಲಿ ಅಬೂಬಕ್ಕರ್ ಸಿದ್ಧಿಕ್ ಪ್ರಮುಖನಾಗಿದ್ದಾನೆ. ಸಿದ್ಧಿಕ್ ಕೈಯಲ್ಲಿ ತಲವಾರು ಹಿಡಿದು ನಮ್ಮ ಮೇಲೆ ಹಲ್ಲೆ ನಡೆಸಿ, ಕೈ ಹಿಡಿದು ಎಳೆದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅತನ ಮುಖ ಪರಿಚಯದಿಂದ ನಾನು ಆತನನ್ನು ಗುರುತಿಸಿದ್ದೇನೆ ಎಂದು ಸೌಮ್ಯಾ ತಿಳಿಸಿದ್ದಾರೆ.

ಸಿದ್ಧಿಕ್‌ನಂತಹ ಆರೋಪಿಯನ್ನು ಬಂಧಿಸಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಆದರೆ ಇಲ್ಲಿ ಶಾಸಕರು ಸಿದ್ಧಿಕ್‌ನನ್ನು ಅಮಾಯಕ ಎನ್ನುವ ಮೂಲಕ ಆತನ ರಕ್ಷಣೆಗೆ ನಿಂತಿದ್ದಾರೆ. ಆರೋಪಿಗಳನ್ನು ನಿರಾಪರಾಧಿ ಎನ್ನುತ್ತಿದ್ದಾರೆ. ಸಿದ್ಧಿಕ್ ಅಮಾಯಕನಾದರೆ ಪೆಟ್ಟು ತಿಂದ ನಾವು ಏನು ಎಂದು ಪ್ರಶ್ನಿಸಿದ್ದಾರೆ.

Woodland_press_meet_3

ಉಳಾಯಿಬೆಟ್ಟುವಿನಲ್ಲಿ ಹಿಂದುಗಳಿಗೆ ಮುಕ್ತವಾಗಿ ಓಡಾಡಲು ಆಗದಂತಹ ಸ್ಥಿತಿ ಇದೆ. ಭಯದಿಂದ ಬದುಕುವಂತಾಗಿದೆ. ನಾವು ಪಾಕಿಸ್ತಾನದಲ್ಲಿದ್ದೇವೆಯೇ ಅಥವಾ ಭಾರತದಲ್ಲಿದ್ದೇವೆಯೇ ಎಂಬುದು ನಮಗೇ ತಿಳಿಯುತ್ತಿಲ್ಲ. ಗ್ರಾಮಾಂತರ ಠಾಣೆಗೆ ಪ್ರಮೋದ್ ಅವರು ಬಂದ ನಂತರ ನಮಗೆ ಸ್ವಲ್ಪ ಧೈರ್ಯ ಬಂದಿದೆ. ಅವರು ಇಲ್ಲಿ ನಿತ್ಯ ಓಡಾಡುತ್ತಿದ್ದಾರೆ. ಭಯದ ವಾತಾವರಣ ದೂರವಾಗುತ್ತಿದೆ ಎಂದರು.

ಕೋಮು ಗಲಭೆಯ ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಅವರೆಲ್ಲರಿಗೂ ಸೂಕ್ತ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ ಅವರು,. ಉಳಾಯಿಬೆಟ್ಟು ಪ್ರಕರಣದ ಆರೋಪಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಇದುವರೆಗೆ ಆಸ್ತಿತ್ವದಲ್ಲಿರದ ನಾಗರಿಕ ಸಮಿತಿ ಈಗ ಆಸ್ತಿತ್ವಕ್ಕೆ ಬಂದಿದೆ ಆಸ್ತಿತ್ವದಲ್ಲಿರದ ನಾಗರಿಕ ಸಮಿತಿ ಈಗ ಆಸ್ತಿತ್ವಕ್ಕೆ ಬಂದಿದೆ ಎಂದು ಸೌಮ್ಯಾ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಳಾಯಿಬೆಟ್ಟು ಪರಿಸರದ ಮನೋಜ್, ಗಂಗಾಧರ್, ಉದಯ ಹಾಗೂ ಯಶೋಧಾ ಉಪಸ್ಥಿತರಿದ್ದರು.

Write A Comment