ಕನ್ನಡ ವಾರ್ತೆಗಳು

ಕರ್ತವ್ಯನಿರತ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ.

Pinterest LinkedIn Tumblr

kasrgod_attck_bus_driver

ಕಾಸರಗೋಡು, ಡಿ.09: ಸೈಡ್ ನೀಡದ ವಿಚಾರಕ್ಕೆ ಕಾರಿನಲ್ಲಿ ಬಂದ ತಂಡವೊಂದು ಬಸ್ ಚಾಲಕನಿಗೆ ಹಲ್ಲೆ ನಡೆಸಿದ್ದು, ನಿಯಂತ್ರಣ ತಪ್ಪಿದ ಬಸ್ ಪುಟ್‌ಪಾತ್ ಗೆ ನುಗ್ಗಿದ ಘಟನೆ ಮಂಗಳವಾರ ಕಾಸರಗೋಡುನಲ್ಲಿ ನಡೆದಿದೆ.

ಘಟನೆಯಲ್ಲಿ ಗಾಯಗೊಂಡ ಬಸ್ಸು ಚಾಲಕ ಮಧೂರಿನ ಪ್ರಸಾದ್ (30)ರನ್ನು ಕಾಸರಗೋಡು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಸರಗೋಡು ಕಾಞಂಗಾಡ್ ದಾರಿಯಾಗಿ ಸಂಚರಿಸುವ ಖಾಸಗಿ ಬಸ್ಸು ಕಾರೊಂದಕ್ಕೆ ಸೈಡ್ ನೀಡಿಲ್ಲ ಎಂದು ಆರೋಪಿಸಿ ಬಸ್ಸು ಚಲಾಯಿಸುತ್ತಿದ್ದಾಗಲೇ ಚಾಲಕನ ಮೇಲೆ ಹಲ್ಲೆ ನಡೆಸಿದ್ದು, ಈ ಸಂದರ್ಭ ದಲ್ಲಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಪುಟ್‌ಪಾತ್ ಗೆ ನುಗ್ಗಿದೆ.

ಈ ಸಂದರ್ಭದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕರು, ವ್ಯಾಪಾರಿಗಳು, ಪಾದಚಾರಿಗಳು ಓಡಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಜನ ಸೇರುತ್ತಿದ್ದಂತೆಯೇ    ತಂಡವು ಕಾರಿನಲ್ಲಿ ಪರಾರಿಯಾಗಿದೆ ಎನ್ನಲಾಗಿದೆ. ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment