ಕನ್ನಡ ವಾರ್ತೆಗಳು

ಬ್ರಹ್ಮಾವರ: ಕೊಸ್ಮೊಪೊಲಿಟನ್ ಹಿರಿಯ ಪ್ರಾಥಮಿಕ ಶಾಲೆ ಶತಮಾನೊತ್ಸವ ಸಮಾರಂಭ

Pinterest LinkedIn Tumblr

ಉಡುಪಿ: ಓರ್ಥೋಡೊಕ್ಸ್ ಸಿರಿಯನ್ ಕ್ರಿಶ್ಚಿಯನ್ ಇಗರ್ಜಿಯು ಜನರ ಧಾರ್ಮಿಕ ಅಗತ್ಯತೆಗಳನ್ನು ಪೂರೈಹಿಸುವುದರೊಂದಿಗೆ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ತನ್ನದೇ ಕೊಡುಗೆಯನ್ನು ನೀಡಿದೆ ಎಂದು ಭಾರತೀಯ (ಮಲಂಕರ) ಓರ್ಥೊಡೊಕ್ಸ್ ಸಿರಿಯನ್ ಸಭೆಯ ಪರಮಾಧ್ಯಕ್ಷ ಗುರುಗಳಾದ ಪರಮಪವಿತ್ರ ಬಸೆಲಿಯೋಸ್ ಮಾರ್ಥೊಮಾ ಪೌಲೊಸ್ ತಿಳಿಸಿದ್ದಾರೆ.

Brhmavara_News_programme (2)

Brhmavara_News_programme (1)

ಅವರು ಸೈಂಟ್ ಮೇರಿಸ್ ಓರ್ಥೊಡೊಕ್ಸ್ ಸಿರಿಯನ್ ಕೆಥೆಡ್ರೆಲ್ ಹಾಗೂ ಇದರ ಸಹ-ಇಗರ್ಜಿಗಳಿಗೆ ಪ್ರಥಮ ಬಾರಿಗೆ ಸಂದರ್ಶಿಸಿ, ಚರ್ಚಿನ ವಠಾರದಲ್ಲಿ ಗೌರವಾಥ ಸಾರ್ವಜನಿಕ ಸಭೆಯನ್ನು ಮತ್ತು ಕೊಸ್ಮೊಪೊಲಿಟನ್ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮಾವರ, ಇದರ ಶತಮಾನೊತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ್ದರು.

ಕಥೆಢ್ರಲ್ ಇಗರ್ಜಿಯು ಸರ್ವ ಧರ್ಮ ಸಮನ್ವಯದ ನೀತಿಯನ್ನು ಹೊಂದಿದ್ದು ಸ್ವದೇಶಿ ತತ್ವಗಳನ್ನು ಹೊಂದಿರುತ್ತದೆ ಎಂದ ಅವರು ಶತಮಾನೋತ್ಸವನ್ನು ಆಚರಿಸಿಕೊಳ್ಳುವ ಕೊಸ್ಮೊಪೊಲಿಟನ್ ಹಿರಿಯ ಪ್ರಾಥಮಿಕ ಶಾಲೆಯು, ಸುತ್ತ ಮುತ್ತಲಿನ ಜನರ ಮೂಲ ಶೈಕ್ಷಣಿಕ ಅವಶ್ಯಕತೆಗಳನ್ನು ಪೂರೈಸಿ, ಯಶಸ್ವಿಯಾಗಿ ಮುನ್ನಡೆದು ಸಮಾಜದಲ್ಲಿ ಉತ್ತಮ ಸಂಸ್ಥೆಯಾಗಿ ಮೂಡಿಬಂದಿದೆ, ವಿದ್ಯಾರ್ಥಿಗಳು ಕೌಶಲ್ಯತೆಯನ್ನು ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿರುವ ದುರ್ಬಲರಿಗೆ ನಾವು ಸಹಾಯ ಮಾಡುವ ಮನೋಭಾವನ್ನು ಹೊಂದಬೇಕು ಎಂದರು.

ಇದೇ ಸಂಧರ್ಭದಲ್ಲಿ ಮಾತನಾಡಿದ ನಗರಾಭಿವೃದ್ಧಿ ಸಚಿವ ವಿನಯ ಕುಮಾರ ಸೊರಕೆ, ನೂರಾರು ವರ್ಷಗಳಿಂದ ಬಡವ -ಶ್ರೀಮಂತ ಎನ್ನುವ ಭೇದವಿಲ್ಲದೇ,ವಿದ್ಯಾಭ್ಯಾಸ ವಂಚಿತ ಗ್ರಾಮಂತರ ಜನರಿಗೆ ಯಾವುದೇ ಸ್ವಾರ್ಥವಿಲ್ಲದೇ ಜ್ನಾನ ಬೆಳಕಿನಡೆಗೆ ಮುನ್ನಡೆಸುವ ,ಮೂಲಕ ಉತ್ತಮ ಸಮಾಜದ ನಿರ್ಮಾಣ ಮಾಡುವ ಕಾರ್ಯವನ್ನು ಇಗರ್ಜಿ ಶಿಕ್ಷಣ ಸಮೂಹ ಸಂಸ್ಥೆ ಮಾಡುತ್ತಿದ್ದೆ ಎಂದು ಹೇಳಿದ್ದರು.

ಕಾರ್ಯಕ್ರಮದಲಿ ಬ್ರಹ್ಮಾವರ ಧರ್ಮಪ್ರಾಂತ್ಯದ ಮೆಟ್ರೊಪೊಲಿಟನ್ ವಂ ಯಾಕೂಬ್ ಮಾರ್ ಇಲಿಯಾಸ್ ,ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ ಜೆರಾಲ್ಡ್ ಐಸಾಕ್ ಲೋಬೊ, ಸಿ‌ಎಸ್‌ಐ ಧರ್ಮಾಧ್ಯಕ್ಷ ವಂ ಮೋಹನ್ ಮನೋರಾಜ್, ಕಲ್ಕತ್ತಾ ಧರ್ಮಪ್ರಾಂತ್ಯದ ಮೆಟ್ರೊ ಪಾಲಿಟನ್ ವಂ ಡಾ ಜೋಸೆಫ್ ಮಾರ್ ದಿಯೊನಿಯಸ್, ಮದ್ರಾಸ್ ಧರ್ಮಪ್ರಾಂತ್ಯದ ಡಾ ಯೊಹಾನ್ ಮಾರ್ ದಿಸ್‌ಕೋರಸ್, ವಂ ಯೋಹಾನ್ ಮಾರ್ ದಿಮೆತ್ರಿಯೊಸ್, ವಂ ಡಾ ಜೋನ್ ಆಬ್ರಾಹಾಂ ಕೊನಟ್ಟು, ಎಮ್ ಜಿ ಜಾರ್ಜ್ ಮುತ್ತೊಟ್, ಡಾ ಜಾಜ್ ಜೊಸೇಪ್, ಕರ್ನಾಟಕ ಸಾಬೂನು ಮತ್ತು ಮಾರ್ಜಕ ಮಂಡಳಿ ಇದರ ಅಧ್ಯಕ್ಷರಾದ ವೆರೋನಿಕಾ ಕರ್ನೆಲಿಯೊ, ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಉಪಸ್ಥಿತರು.

ಸ್ವಾಗತವನ್ನು ಎಸ್‌ಎಮ್‌ಎಸ್ ಸೀರಿಯನ್ ಕ್ಯಾಥೆಡ್ರಲ್ ಇದರ ವಿಕಾರ್ ಜನರಲ್ ವಂ ಐಸಾಕ್ ಸಿ ಎ ,ಕಾರ್‍ಯಕ್ರಮದ ನಿರ್ವಹಣೆಯನ್ನು ಅನಿಲ್ ರೊಡ್ರಿಗಸ್ ಮತ್ತು ಜೀವನ ರೊಡ್ರಿಗಸ್ ಮಾಡಿದ್ದರು.

Write A Comment