ಕನ್ನಡ ವಾರ್ತೆಗಳು

ಆಹಾರೋತ್ಸವ ಮೇಳ-2015

Pinterest LinkedIn Tumblr

Ulalla_tippu_sulthan_1

ಉಳ್ಳಾಲ. ನ, 30: ಉಳ್ಳಾಲ ಸೆಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಡಳಿತದ ಕೋಟೆಪುರ ಅನುದಾನಿತ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆ ಅಕ್ಷರ ದಾಸೋಹದ ನೂತನ ಕಟ್ಟಡ ಉದ್ಘಾಟನೆ ಮತ್ತು ವಸ್ತು ಪ್ರದರ್ಶನ ಮತ್ತು ಮರಾಟ, ಆಹಾರೋತ್ಸವ ಮೇಳ-2015 ಇತ್ತೀಚೆಗೆ ನಡೆಯಿತು.

ಉಳ್ಳಾಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಯು.ಎಸ್ ಹಂಝ ದಾಸೋಹದ ನೂತನ ಕಟ್ಟಡ ಉದ್ಘಾಟಸಿ ಮಾತನಾಡಿ ವಸ್ತು ಪ್ರದರ್ಶನ ಮತ್ತು ಆಹಾರಗಳ ಮರಾಟದಿಂದ ವಿದ್ಯಾರ್ಥಿಗಳಿಗೆ ಉದ್ದಿಮೆಯ ಕುರಿತಾದ ಜ್ಞಾನ ಹೆಚ್ಚಾಗುತ್ತಾದೆ. ವ್ಯಾಸಂಗದ ನಂತರ ನೇರ ಉದ್ಯಮಕ್ಕೆ ಹೋಗಲು ಸಹಕಾರ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು. ದಕ್ಷಿಣ ವಲಯ ಕ್ಷೇತ್ರ ಶಿಕ್ಷಾಣಾಧಿಕಾರಿ ಎಮ್.ಪಿ ಜ್ಞಾನೇಶ್ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಮಂಗಳೂರು ಮರೈನ್ ಪ್ರೋಡಕ್ಟ್ ಸಂಸ್ಥೆಯ ಮಾಲಕ ಎಚ್.ಕೆ ಖಾದರ್ ವಾರ್ಷಿಕ ಕ್ರೀಡಕೂಟದಲ್ಲಿ ವಿಜಯಶಾಲಿ ವಿದ್ಯಾರ್ಥಿಮತ್ತು ವಿದ್ಯಾರ್ಥಿ ತಂಡಗಳಿಗೆ ಬಹುಮಾನ ವಿತರಿಸಿದರು. ತಾಲೂಕು ಪಂಚಾಯತ್ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಯಶೋಧರ್ .ಜೆ ರವರು ಆಹಾರೋತ್ಸವ ಮೇಳವನ್ನು ಸೇಬು ಹಣ್ಣು ಕತ್ತರಿಸಿ ವಿದ್ಯಾರ್ಥಿಗಳಿಗೆ ಹಂಚುವ ಮೂಲಕ ವಿಶೇಷ ರೀತಿಯಲ್ಲಿ ಉದ್ಘಾಟಿಸಿ ಮಾತನಾಡಿದರು.

Ulalla_tippu_sulthan_2 Ulalla_tippu_sulthan_3 Ulalla_tippu_sulthan_4 Ulalla_tippu_sulthan_5 Ulalla_tippu_sulthan_6 Ulalla_tippu_sulthan_7 Ulalla_tippu_sulthan_8 Ulalla_tippu_sulthan_9 Ulalla_tippu_sulthan_10 Ulalla_tippu_sulthan_11 Ulalla_tippu_sulthan_12 Ulalla_tippu_sulthan_13 Ulalla_tippu_sulthan_14 Ulalla_tippu_sulthan_15 Ulalla_tippu_sulthan_17

ವಸ್ತು ಪ್ರದರ್ಶನ ಮತ್ತು ಆಹಾರೋತ್ಸವ ಮೇಳದಿಂದಾಗಿ ಕೋಟೆಪುರ ಪರಿಸರದಲ್ಲಿ ಹಬ್ಬದ ವಾತವರಣ ನಿರ್ಮಾಣವಗಿತ್ತು. ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆಯ ಸಂಚಾಲಕ ಹಾಜಿ ಎ.ಕೆ ಮೊಹಿಯುದ್ದೀನ್, ಉಳ್ಳಾಲ ಕೇಂದ್ರ ಜುಮಾ ಮಸೀದಿ ಮಾಜಿ ಉಪಾಧ್ಯಕ್ಷ ಮೋನು ಇಸ್ಮಾಯಿಲ್, ಉಳ್ಳಾಲ ನಗರಸಭೆ ಸದಸ್ಯ ಕೆ.ಹುಸೈನ್ ಕುಂಞಮೋನು, ದ.ಕ ಜಿಲ್ಲೆ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ಕೆ ಮಂಜನಾಡಿ, ಮಂಗಳೂರು ದಕ್ಷಿಣ ವಲಯ ಶಿಕ್ಷಣ ಸಂಯೋಜಕರುಗಳಾದ ಫ್ರಾನ್ಸಿಸ್ ಲ್ಯಾನ್ಸಿ ಮಿನೇಜಸ್, ಹಿಲ್ಡಾ ಕ್ಲೆಮೆನ್ಸಿಯಾ ಪಿಂಟೋ, ಸೆಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್‌ನ ಆಡಳಿತಾಧಿಕಾರಿ ಹಾಜಿ ಅಬ್ದುಲ್ಲತೀಫ್, ಎವರ್ ಗ್ರೀನ್ ಸಪ್ಲಾಯರ್‍ಸ್‌ನ ಮಾಲಕ ಯು.ಎ ಖಾದರ್, ಅಹ್ಮದ್ ಅಬ್ಬಾಸ್, ಅಬ್ದುರ್ರಹ್ಮಾನ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.

ಶಾಲಾ ಮುಖ್ಯೋಪಾಧ್ಯರು ಎಮ್.ಎಚ್ ಮಲಾರ್ ಸ್ವಾಗತಿಸಿದರು. ಕಲಾ ಶಿಕ್ಷಕ ರಫೀಕ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.

Write A Comment