ಕನ್ನಡ ವಾರ್ತೆಗಳು

ಬೈಂದೂರು: 9 ವರ್ಷದ ಬಾಲಕನ ಮೇಲೆ ಹರಿದ ಟ್ರ್ಯಾಕ್ಟರ್, ಬಾಲಕ ಸಾವು

Pinterest LinkedIn Tumblr

ಕುಂದಾಪುರ: ಬಿಜೂರು ಗ್ರಾಮದ ಕಂಚಿಕಾನ್ ಬಳಿಯ ನಾರಂಬಳ್ಳಿ ಎಂಬಲ್ಲಿನ ಗದ್ದೆಯಲ್ಲಿ ಟ್ರಾಕ್ಟರ್ ಮೂಲಕ ಉಳುಮೆ ನಡೆಸುತ್ತಿರುವ ಸಂದರ್ಭ ಟ್ರ್ಯಾಕ್ಟರ್‌ಗೆ ಸಿಲುಕಿ ಬಾಲಕನೋರ್ವ ಮೃತಪಟ್ಟಿದ್ದಾನೆ.

Byndoor_boy_death

ಚೇತನ್ (9) ಮೃತಪಟ್ಟ ಬಾಲಕ. ರವಿವಾರ ಬೆಳಗ್ಗೆ ಗದ್ದೆಯಲ್ಲಿ ಟ್ರ್ಯಾಕ್ಟರ್ ನಲ್ಲಿ ಉಳುಮೆ ನಡೆಸುತ್ತಿರುವಾಗ ಟ್ರ್ಯಾಕ್ಟರ್‌ನ ಹಿಂಬದಿಯ ನೇಗಿಲುಗಳಿಗೆ ಅಕಸ್ಮಿಕವಾಗಿ ಸಿಲುಕಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ. ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.

ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment