ಕನ್ನಡ ವಾರ್ತೆಗಳು

ಅಪಘಾತದಲ್ಲಿ ಒಂದು ಕೈಯನ್ನೇ ಕಳೆದುಕೊಂಡ ನತದೃಷ್ಟ.

Pinterest LinkedIn Tumblr

Car_bike_acdent_1

ಬಂಟ್ವಾಳ,ನ.30: ಬಂಟ್ವಾಳ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಕಾವಳಪಡೂರು ರಸ್ತೆ ಮಧ್ವದಲ್ಲಿ ಕಾರು ಮತ್ತು ಬೈಕ್ ನಡುವೆ ನಡೆದ ಅಪಾಘಾತ ಬೈಕ್ ಸವಾರ ತನ್ನ ಕೈಯನ್ನೇ ಕಳೆದುಕೊಂಡು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಗಾಯಗೊಂಡ ವ್ಯಕ್ತಿಯನ್ನು ಮಂಗಳೂರು ಶಕ್ತಿನಗರ ನಿವಾಸಿ ಕ್ಯಾನ್ವಿಲ್ ಎಂದು ಗುರುತಿಸಲಾಗಿದೆ . ಕಾರು ಬೆಳ್ತಂಗಡಿಯಿಂದ ಮಂಗಳೂರು   ಕಡೆಯಿಂದ ಬರುತ್ತಿದ್ದು, ಎದುರುಗಡೆಯಿಂದ ಬರುತ್ತಿದ್ದ ಬೈಕ್ ಗೆ ಢಿಕ್ಕಿಯಾಗಿದೆ. ಅಪಘಾತದಲ್ಲಿ ಕ್ಯಾನ್ವಿಲ್ ಅವರ
ಬಲಗೈ ತುಂಡಾಗಿದ್ದು, ಕಾಲಿಗೆ ಗಂಭೀರ ಗಾಯವಾಗಿತ್ತು.

Car_bike_acdent_2 Car_bike_acdent_3 Car_bike_acdent_4

ಘಟನೆಯ ತೀವ್ರತೆಗೆ ಕಾರು ಚಾಲಕನಿಗೂ ಗಾಯಗಳಾಗಿದ್ದು ಇಬ್ಬರನ್ನೂ ತುಂಬೆ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು ಬಳಿಕ ಕ್ಯಾನ್ವಿಲ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಬಂಟ್ವಾಳ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Write A Comment