ಕನ್ನಡ ವಾರ್ತೆಗಳು

ಮಂಗಳೂರು : ಕರ್ತವ್ಯ ನಿರತ ಎಸೈ ಮೇಲೆ ಹಲ್ಲೆ

Pinterest LinkedIn Tumblr

assault

ಮಂಗಳೂರು, ನ. 30: ಬಾನುವಾರ ತಡರಾತ್ರಿವರೆಗೂ ತೆರೆದಿದ್ದ ಬಾರ್‌ನ್ನು ಮುಚ್ಚುವಂತೆ ಸೂಚಿಸಿದ ಎಎಸ್ಸೈಗೆ ಮೇಲೆ ಬಾರ್ ಮಾಲಕ ಸಹಿತ ಮೂವರು ಹಲ್ಲೆ ನಡೆಸಿರುವ ಘಟನೆ ಶನಿವಾರ ರಾತ್ರಿ ನಗರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ರವಿವಾರ ಬಂಧಿಸಿದ್ದಾರೆ.

ಬಂದರ್ ಪೊಲೀಸ್ ಠಾಣೆಯ ಎಎಸ್ಸೈ ನಾಗೇಶ್ ಸಿಬ್ಬಂದಿಯೊಂದಿಗೆ ಶನಿವಾರ ರಾತ್ರಿ ರೌಂಡ್ಸ್‌ನಲ್ಲಿದ್ದ ಸಂದರ್ಭ ನಗರದ ಫಳ್ನೀರ್ ರಸ್ತೆಯ ಅವೇರಿ ಜಂಕ್ಷನ್ ಬಳಿ ಮಧ್ಯರಾತ್ರಿವರೆಗೂ ತೆರೆದಿದ್ದ ಯಶ್‌ರಾಜ್ ಬಾರ್ ಆ್ಯಂಡ್ ರೆಸ್ಟೋರಂಟ್‌ನ್ನು ಮುಚ್ಚುವಂತೆ ಸೂಚಿಸಿದ್ದರು. ಇದರಿಂದ ಕೆರಳಿದ ಮನೋಜ್ ಕುಮಾರ್, ಬಾರ್‌ನ ಮ್ಯಾನೇಜರ್ ಸುಂದರ ಮತ್ತು ಸುಪರ್‌ವೈಸರ್ ಅಶೋಕ್ ಎಂಬವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಪಡಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Write A Comment