ಕನ್ನಡ ವಾರ್ತೆಗಳು

ವಿದ್ಯಾರ್ಥಿಸಿರಿ ವೇದಿಕೆಯಲ್ಲಿ 8ರ ಹರೆಯದ ಪೋರನ ‘ಮುತ್ತು-ಚಿಪ್ಪು’ ಕೃತಿ ಬಿಡುಗಡೆ.

Pinterest LinkedIn Tumblr

Alvas_vidya_siri_9

ಮೂಡುಬಿದಿರೆ (ರತ್ನಾಕರವರ್ಣಿ ವೇದಿಕೆ), ನ.27: ಇಂದಿನ ಮಕ್ಕಳಿಗೆ ನಾಡುನುಡಿ ಸಂಸ್ಕೃತಿ ಹಾಗೂ ಸಾಹಿತಿಗಳ ಬಗ್ಗೆ ಸರಿಯಾಗಿ ಪರಿಚಯವಿಲ್ಲ. ಪ್ರಕೃತಿಯ ಮೂಲಕ ಕಲಿಯುವ ಪಾಠದ ಬಗ್ಗೆ ಗಮನವಿಲ್ಲ. ಇದಕ್ಕೆ ಮುಖ್ಯ ಕಾರಣ ಪಠ್ಯಪುಸ್ತಕಗಳಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಬರಹಗಳು ದೂರವಾಗುತ್ತಿರುವುದು ಎಂದು ಎಸ್‌ಡಿಎಂ ಪಪೂ ಕಾಲೇಜಿನ ವಿದ್ಯಾರ್ಥಿ ರಾಹುಲ್ ಎಸ್.ಎಂ.ಹೇಳಿದರು.

ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಗಾದೆ, ಒಗಟು, ವಚನ ಪ್ರಸ್ತುತಿ ಮೂಡುಬಿದಿರೆ ಪೊನ್ನೆಚ್ಚಾರಿ ನಿವಾಸಿ ಡಾ.ಪ್ರಸನ್ನ ಹೆಗ್ಡೆ ಶ್ರೇಯಾ ದಂಪತಿಯ 8ರ ಹರೆಯದ ಪುತ್ರ ಅಮೋಘ ಹೆಗ್ಡೆ ಅವರ ‘ಮುತ್ತು-ಚಿಪ್ಪು’ಎನ್ನುವ ಕೃತಿ ಬಿಡುಗಡೆಯು ವಿದ್ಯಾರ್ಥಿಸಿರಿ ವೇದಿಕೆಯಲ್ಲಿ ನಡೆದದ್ದು ವಿಶೇಷವಾಗಿ ಗಮನ ಸೆಳೆಯಿತು.

ಅವರು ಮೂಡುಬಿದಿರೆಯ ಆಳ್ವಾಸ್ ಸಂಸ್ಥೆಯ ವತಿಯಿಂದ ನಡೆದ ರಾಜ್ಯಮಟ್ಟದ ಸಮ್ಮೇಳನ ‘ಆಳ್ವಾಸ್ ವಿದ್ಯಾರ್ಥಿಸಿರಿ’ಯ ಸಮಾರೋಪ ಸಮಾರಂಭದಲ್ಲಿ ಸಮಾಪನ ಭಾಷಣ ಮಾಡಿದರು. ದ.ಕ., ಉಡುಪಿ ಜಿಲ್ಲೆಯ ಜನರ ಭಾಷೆ ತುಳುವಾಗಿದ್ದರೂ ಇತರ ಜಿಲ್ಲೆಗಳಿಗಿಂತ ಕನ್ನಡಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿರುವುದು ಸಂತಸದ ವಿಷಯ. ಆದರೆ, ಪ್ರತ್ಯೇಕ ತುಳುನಾಡು ಬೇಕೆಂಬ ಕೂಗು ಆತಂಕಕಾರಿಯಾದ ಬೆಳವಣಿಗೆ ಎಂದ ಅವರು, ಪ್ರಾಂತೀಯ ವಿಷಯಗಳನ್ನು ನಾವೆಲ್ಲರೂ ಒಟ್ಟಾಗಿ ಚರ್ಚಿಸಬೇಕಾಗಿದೆ ಎಂದು ಹೇಳಿದರು.

ಶಾಲಿಕಾ ಎಂ.ಎಕ್ಕಾರು ಅಧ್ಯಕ್ಷತೆಯನ್ನು ವಹಿಸಿದ್ದರು. ವಿದ್ಯಾರ್ಥಿ ಅಭಿಷೇಕ್ ಪಿ. ಸ್ವಾಗತಿಸಿದರು. ಜೈನ ಪ್ರೌಢಶಾಲೆಯ ಪಂಚಮಿ ಮಾರೂರು ವಂದಿಸಿದರು. ಆಳ್ವಾಸ್‌ನ ಅಕ್ಷತಾ ವಿ.ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

Write A Comment