ಮೂಡಬಿದರೆ,ನ.27 : ಶ್ರೀ ಕ್ಷೇ.ಧ.ಗ್ರಾ. ಯೋಜನೆ ಮೂಡುಬಿದಿರೆ ವಲಯ, ಮೂಡುಬಿದಿರೆ ವಲಯ ರೈತ ಸಂಘ, ಕೃಷಿ ವಿನಿಮಯ ಕೇಂದ್ರ ಇವುಗಳ ಆಶ್ರಯದಲ್ಲಿ ‘ಆಳ್ವಾಸ್ ನುಡಿಸಿರಿ’ಯ ಜೊತೆ ಜೊತೆಗೆ ಆರಂಭಗೊಂಡಿರುವ ‘ಆಳ್ವಾಸ್ ಕೃಷಿಸಿರಿ’ ಮಳಿಗೆಯನ್ನು ದಿ.ಮಿಜಾರು ಗುತ್ತು ಜೀವಾಂದರ ಕುಮಾರ್ ಸಭಾಂಗಣದಲ್ಲಿ ಮಿಜಾರುಗುತ್ತು ನವೀನ್ ಕುಮಾರ್ ಗುರುವಾರ ಬೆಳಗ್ಗೆ ಚಾಲನೆ ನೀಡಿದರು.
ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣ ಮತ್ತು ಗಿಡಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಸಂಬಂಧಿಸಿದ ಮಳಿಗೆಗಳನ್ನು ಇಲ್ಲಿ ತೆರೆಯಲಾಗಿದೆ. ಕೃಷಿಕರಾದ ಶಿರ್ತಾಡಿ ಸಂಪತ್ ಸಾಮ್ರಾಜ್ಯ, ರೈತ ಸಂಘದ ಅಧ್ಯಕ್ಷ ಧನಕೀರ್ತಿ ಬಲಿಪ, ಕೃಷಿ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ, ಕೃಷಿಕರಾದ ಬ್ರಹ್ಮಾವರದ ಶ್ಯಾಂ ಭಟ್, ಪಿ.ಕೆ.ರಾಜು ಪೂಜಾರಿ, ರಘುರಾಮ ಶೆಟ್ಟಿ, ಯತಿರಾಜ್ ಶೆಟ್ಟಿ, ಶ್ರೀ ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆಯ ಮೂಡುಬಿದಿರೆ ವಲಯದ ಮೇಲ್ವಿಚಾರಕಿ ಶಶಿಕಲಾ, ಪುತ್ತಿಗೆ ವಲಯದ ಉಮೇಶ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.




