ಕನ್ನಡ ವಾರ್ತೆಗಳು

ಕುಖ್ಯಾತ ಕಳ್ಳನ ಬಂಧನ : ಚಿನ್ನಾಭರಣ ಹಾಗೂ 2ಬೈಕ್ ವಶ

Pinterest LinkedIn Tumblr

Bikechain_thefe_accuesed

ಮಂಗಳೂರು,ನ.26 : ನಗರದಲ್ಲಿ ಸರಗಳ್ಳತನ ಹಾಗೂ ವಾಹನ ಕಳವು ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕಣ್ಣೂರು ಬಳ್ಳೂರು ಗುಡ್ಡೆಯ ನುಮಾನ್‌ ಬೀರಾನ್‌ ಯಾನೆ ನುಮಾನ್‌ (20) ಎಂದು ಗುರುತಿಸಲಾಗಿದ್ದು, ಈತನಿಂದ ಒಂದು ಚಿನ್ನದ ಕರಿಮಣಿ ಸರ, ಚಿನ್ನದ ಚೈನ್‌ ಹಾಗೂ ಒಂದೂವರೆ ಲಕ್ಷ ರೂ. ಮೌಲ್ಯದ ಎರಡು ಮೋಟಾರ್‌ ಬೈಕ್‌ಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಚಿನ್ನಾಭರಣಗಳು ಕಳೆದ ಸೆಪ್ಟೆಂಬರ್‌ನಲ್ಲಿ ಅರ್ಕುಳದಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದ್ದಾಗಿವೆ.

ಆರೋಪಿಯು ಉಳಾಯಿಬೆಟ್ಟುವಿನಲ್ಲಿ ಸಾದತ್‌ ಮತ್ತು ಮಹಮ್ಮದ್‌ ರಫೀಕ್‌ ಜತೆ ಸೇರಿ ಕರಿಮಣಿ ಸರವನ್ನು ಎಳೆದಿದ್ದು, ಈ ಪ್ರಕರಣದಲ್ಲಿ ಬಂಟ್ವಾಳ ಗೂಡಿನಬಳಿಯ ಮಹಮ್ಮದ್‌ ರಫೀಕ್‌ ನ್ಯಾಯಾಂಗ ಬಂಧನದಲ್ಲಿದ್ದಾನೆ. ಫರಂಗಿಪೇಟೆ ಜುಮಾದಿಗುಡ್ಡೆಯ ಸಾದತ್‌ ಅಲಿ ತಲೆ ಮರೆಸಿಕೊಂಡಿದ್ದಾನೆ. ಮೋಟಾರ್‌ ಬೈಕ್‌ಗಳನ್ನು ಆರೋಪಿಗಳು ಮಲ್ಲೂರು ಮತ್ತು ಕಣ್ಣೂರಿನಿಂದ ಕಳವು ಮಾಡಿದ್ದಾಗಿದೆ.

ಗ್ರಾಮಾಂತರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಪ್ರಮೋದ್‌ ಕುಮಾರ್‌ ಪಿ. ಮತ್ತು ಪಿಎಸ್‌ಐ ಗಳಾದ ಎಂ.ಡಿ. ಮಡ್ಡಿ, ವೆಂಕಟೇಶ್‌ ಹಾಗೂ ಸಿಬ್ಬಂದಿ ಸುಭಾಶ್ಚಂದ್ರ, ಮೋಹನ್‌, ಸುಧಾಕರ್‌, ಮೆಲ್ವಿನ್‌, ಸುಧೀರ್‌, ಶಿವಾನಂದ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Write A Comment