ಕನ್ನಡ ವಾರ್ತೆಗಳು

ಬೈಂದೂರು: ಸೈಕಲ್‌ಗೆ ಕಾರು ಢಿಕ್ಕಿಯಾಗಿ ಶಾಲಾ ವಿದ್ಯಾರ್ಥಿ ಸಾವು

Pinterest LinkedIn Tumblr

ಕುಂದಾಪುರ: ಸೈಕಲ್‌ನಲ್ಲಿ ಸಾಗುತ್ತಿದ್ದ ಶಾಲಾ ಬಾಲಕನಿಗೆ ಸ್ವಿಪ್ಟ್ ಕಾರು ಢಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಂದೂರು ಸಮೀಪದ ನಾಗೂರಿನಲ್ಲಿ ಸಂಭವಿಸಿದೆ. ನಾಗೇಶ (೧೬) ಮೃತಗೊಂಡಿರುವ ವಿದ್ಯಾರ್ಥಿ. ಈತ ಕಿರಿಮಂಜೇಶ್ವರ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.

Byndoor_Accident_student death (2) Byndoor_Accident_student death (1)

ಶಾಲೆಯಿಂದ ಮನೆಗೆ ಬರುವ ವೇಳೆ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ ಹಾಗೂ ಎಸ್ಸೈ ಸಂತೋಷ ಕಾಯ್ಕಿಣಿ ಭೇಟಿ ನೀಡಿ ಕಾರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೈಂದೂರಿನಲ್ಲಿ ಕಳೆದ ಮೂರು ದಿನಗಳಲ್ಲಿ ನಡೆದ ಕೆಲವು ಅಪಘಾತಗಳಲ್ಲಿ ಇದು ನಾಲ್ಕನೆಯ ಸಾವು.

Write A Comment