ಕನ್ನಡ ವಾರ್ತೆಗಳು

ನ.28: ಗೋಕಥಾ ನಿರೂಪಕ ಮೊಹಮ್ಮದ್ ಫೈಜ್ ಖಾನ್ ಅವರಿಂದ ಗೋವಿನ ಕಥಾ ಕಾರ್ಯಕ್ರಮ

Pinterest LinkedIn Tumblr

faizal_kan_photo

ಮಂಗಳೂರು,ನ.17: ಅವರ ಹೆಸರು ಮೊಹಮ್ಮದ್ ಫೈಜ್ ಖಾನ್. ಅವರು ಮುಸ್ಲಿಮ್ ರಾಷ್ಟ್ರೀಯ ಮಂಚ್ ನ ಧಾರ್ಮಿಕ ಗೋ ಘಟಕದ ರಾಷ್ಟ್ರೀಯ ಸಂಚಾಲಕರು. ಮುಸ್ಲಿಮ್ ಗೋರಕ್ಷಾ ದಳದ ಮಾರ್ಗದರ್ಶಕರು. ಗೋರಕ್ಷಾ ಕ್ರಾಂತಿಯ ಸ್ಥಾಪಕರು. ಉತ್ತರಪ್ರದೇಶದ ಬಿಜ್ನೂರಿನಲ್ಲಿರುವ ಕೃಷ್ಣ ಗೋಶಾಲೆಯ ಆಶ್ರಯದಾತರು. 1980 ನೇ ಇಸವಿ ಜುಲೈ 10 ರಂದು ಚತ್ತೀಸ್ ಗಢದ ರಾಯ್‍ಪುರದಲ್ಲಿ ಹುಟ್ಟಿದ ಮೊಹಮ್ಮದ್ ಫೈಜ್ ಖಾನ್ ಅವರು ರಾಜಕೀಯ ಶಾಸ್ತ್ರ ಮತ್ತು ಹಿಂದಿ ಸಾಹಿತ್ಯದಲ್ಲಿ ಎಂಎ ಮಾಡಿದ್ದಾರೆ.

ಭಾರತೀಯತೆ, ಧಾರ್ಮಿಕತೆ ಮತ್ತು ಸಾಮಾಜಿಕ ರಾಜಕೀಯ ವಿಜಾದಿನದಲ್ಲಿ ಅವರು ಹೆಚ್ಚಿನ ಸಂಶೋಧನೆ ಮಾಡಿದ್ದಾರೆ. ಛತ್ತೀಸ್‍ಗಢದ ಸರ್ಜಾಪುರದಲ್ಲಿ ಎರಡು ವರ್ಷಗಳ ಕಾಲ ಅತಿಥಿ ಪ್ರಾಧ್ಯಾಪಕರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಬ್ಯಾಂಕಾಕ್‍ನ ಆಯುತ್ಯ ಸಿಟಿಯಲ್ಲಿ ನಡೆದ ಎಎಸ್‍ಇಎಂ ಅಂತರ್ ಧರ್ಮಿಯ ಸಾಂಸ್ಕತಿಕ ಸಮ್ಮೇಳನದಲ್ಲಿ ಭಾಗವಹಿಸಿ ಅತ್ಯುತ್ತಮ ಪಾಲುದಾರಿಕೆಗಾಗಿ ಸನ್ಮಾನಿಸಿಕೊಂಡವರು ಮೊಹಮ್ಮದ್ ಫೈಜ್ ಖಾನ್. ಉದಯಪುರದಲ್ಲಿ ನಡೆದ ರಾಷ್ಟ್ರೀಯ ಯುವ ಮಹೋತ್ಸವದಲ್ಲಿ ಭಾಷಣಗಾರಿಕೆಯಲ್ಲಿ ಚಿನ್ನದ ಪದಕವನ್ನು ಗಳಿಸಿದ ಮಹಾನ್ ಸಾಧಕ ಖಾನ್ ಅವರು.

ಮಂಗಳೂರು ಮತ್ತು ಅಮೃತಸರದಲ್ಲಿ ನಡೆದ ಯುವ ಸಮ್ಮೇಳನದಲ್ಲಿ ಬೆಳ್ಳಿಯ ಪದಕಗಳನ್ನು ಮುಡಿಗೇರಿಸಿಕೊಂಡ ಯುವ ಸಾಧಕ. 2003 ರಲ್ಲಿ ಪ್ರಜಾಪ್ರಭುತ್ವ ದಿನದಂದು ನಡೆದ ಪೇರೆಡ್ ನಲ್ಲಿ ಎನ್ ಎಸ್ ಎಸ್ ಘಟಕದ ವತಿಯಿಂದ ಪಾಲ್ಗೊಂಡ ಯುವ ತರುಣ. ಗೋವಿನ ಬಗ್ಗೆ ಗೋಕಥಾ ಪ್ರವಚನಕಾರರಾಗಿ 20 ಕ್ಕೂ ಹೆಚ್ಚು ಕಡೆ ಗೋಕಥಾ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.

ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಪರಿಸರಕ್ಕೆ ಸಂಬಂಧಪಟ್ಟಂತೆ ಗೋವಿನ ಬಗ್ಗೆ ಇರುವ ಮಹತ್ವದ ಸಮಾಜಕ್ಕೆ ತಿಳಿಸುವ ನಿಟ್ಟಿನಲ್ಲಿ 200 ಕ್ಕೂ ಹೆಚ್ಚಿನ ಗೋಕಥಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ರಾಷ್ಟ್ರವ್ಯಾಪಿ ಗೋಹತ್ಯೆಯನ್ನು ನಿಷೇಧಿಸಬೇಕೆಂದು 2013 ನವೆಂಬರ್ 10 ರಿಂದ ಡಿಸೆಂಬರ್ 1 ರ ತನಕ ಜಂತರ್ ಮಂತರ್ ನಲ್ಲಿ 22 ದಿನಗಳ ತನಕ ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದಾರೆ.

2014 ಡಿಸೆಂಬರ್ 15 ರಿಂದ ಫೆಬ್ರವರಿ 5 ರತನಕ ದೇಶಿಯ ದನದ ಹಾಲು ದೇಹದ ಆರೋಗ್ಯಕ್ಕೆ ಸಂಪೂರ್ಣ ಶ್ರೇಷ್ಟವಾದದ್ದು ಎಂದು ಸಾಬೀತುಪಡಿಸಲು ಕಾರ್ಯಕ್ರಮಗಳು. 2014 ರಂದು ಡಿಸೆಂಬರ್ 15 ರಂದು ಮಹಾರಾಷ್ಟ್ರ ಸರಕಾರದ ವಿರುದ್ಧ ಮುಂಬೈಯಲ್ಲಿ ಪ್ರಕರಣ ದಾಖಲು. ಭಕ್ರೀದ್ ದಿನದಂದು 12000 ಗೋಹತ್ಯೆ ನಡೆಯುವುದರಿಂದ ಅದನ್ನು ನಿಲ್ಲಿಸಲು ಆದೇಶ ಕೊಡಬೇಕೆಂದು ಮುಂಬೈ ಉಚ್ಚನ್ಯಾಯಾಲಯಕ್ಕೆ ಮನವಿ. ಮನವಿ ಪುರಸ್ಕರಿಸಿದ ನ್ಯಾಯಾಲಯದಿಂದ ಬೃಹತ್ ಪ್ರಮಾಣದಲ್ಲಿ ಭಕ್ರೀದ್ ದಿನದಂದು ನಡೆಯುವ ಗೋಹತ್ಯೆಗೆ ಲಗಾಮು ಹಾಕಲು ಸರಕಾರಕ್ಕೆ ಆದೇಶ. 2015, ಸೆಪ್ಟೆಂಬರ್ 13 ರಂದು ಹರ್ಯಾಣದಲ್ಲಿ ಅಖಿಲ ಭಾರತ್ ಮುಸ್ಲಿಂ ಗೋಪಾಲಕ್ ಸಮ್ಮೇಳನ. ಆ ಕಾರ್ಯಕ್ರಮದಲ್ಲಿ 10 ಸಾವಿರ ಮುಸ್ಲಿಂ ಗೋಪಾಲಕರು ಆಗಮಿಸಿ ಭವಿಷ್ಯದಲ್ಲಿ ಗೋ ಹತ್ಯೆಯನ್ನು ನಿಲ್ಲಿಸಲು ಪಣ, ಅಖಿಲ ಭಾರತೀಯ ಮುಸ್ಲಿಂ ಸಂಘಟನೆಯ ಅಧ್ಯಕ್ಷ ಮೌಲಾನಾ ಉಮೇರ್ ಇಲ್ಯಾಸಿ ಅವರ ಮೂಲಕ ಮುಸ್ಲಿಮ್ ಗೋಪಾಲಕರಿಗೆ ಶಪಥ ಭೋದನೆ. ಆ ಕಾರ್ಯಕ್ರಮದಲ್ಲಿ ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಹಾಗೂ ಇಂದ್ರೇಶ್ ಕುಮಾರ್ ಅವರ ಉಪಸ್ಥಿತಿ. ಗಾಯ್ ಔರ್ ಇಸ್ಲಾಂ ಎನ್ನುವ ಪುಸ್ತಕದ ಲೇಖಕರಾಗಿರುವ ಮೊಹಮ್ಮದ್ ಫೈಜ್ ಖಾನ್ ಅವರು ದನದ ಮಾಂಸ ತಿನ್ನುವವರ ವಿರುದ್ಧ ದನದ ಹಾಲನ್ನು ಕುಡಿಯುವ ನೂರಕ್ಕಿಂತಲೂ ಹೆಚ್ಚು ಪ್ರೇರಣಾ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಗೋಶಾಲೆಗಳಲ್ಲಿ ಈದ್, ಭಕ್ರೀದ್ ಹಾಗೂ ಈದ್ ಮಿಲಾದ್ ಆಚರಿಸುವ ಮೂಲಕ ಭಾರತೀಯರಿಗೆ ಗೋವಿನ ಬಗ್ಗೆ ಹೊಸ ಕಲ್ಪನೆಯನ್ನು ಮೂಡಿಸುತ್ತಿರುವ ಧೀಮಂತ ವ್ಯಕ್ತಿ. ಇಂತಹ ಆದರ್ಶ ವ್ಯಕ್ತಿಯನ್ನು ಕಣ್ಣಾರೆ ಕಾಣುವ, ಅವರ ಮಾತುಗಳನ್ನು ಕೇಳುವ ಆ ಮೂಲಕ ತಮ್ಮ ಭಾರತೀಯ ಸಂಸ್ಕತಿಯ ಮೂಲಬೇರುಗಳನ್ನು ಮತ್ತೆ ನೆನಪಿಸುವ ಎಲ್ಲಕ್ಕಿಂತ ಹೆಚ್ಚಾಗಿ ಗೋಮಾತೆಯ ಪ್ರಾಮುಖ್ಯತೆಯನ್ನು ಅರಿಯುವ ಕಾರ್ಯವನ್ನು ನಾವು ಮಾಡಬೇಕಾಗಿದೆ. ಯುವಬ್ರಿಗೇಡ್ ಈ ಕಾರ್ಯದಲ್ಲಿ ತನ್ನನ್ನು ತಾನು ಹೆಮ್ಮೆಯಿಂದ ತೊಡಗಿಸಿಕೊಳ್ಳುತ್ತಿದೆ.

ಯುವಬ್ರಿಗೇಡ್ ವತಿಯಿಂದ ಮಂಗಳೂರಿನ ಸಂಘನಿಕೇತನದಲ್ಲಿ ಇದೇ ತಿಂಗಳ 28ರಂದು ಸಂಜೆ 5.30ಕ್ಕೆ ಗೋಕಥಾ ನಿರೂಪಕ ಮೊಹಮ್ಮದ್ ಫೈಜ್ ಖಾನ್ ಅವರಿಂದ ಗೋವಿನ ಕಥಾ ಕಾರ್ಯಕ್ರಮ ನಡೆಯಲಿದೆ.. ಕಾರ್ಯಕ್ರಮದಲ್ಲಿ ಯುವಬ್ರೀಗೆಡ್ ಮಾರ್ಗದರ್ಶಕರಾಗಿರುವ ಚಕ್ರವರ್ತಿ ಸೂಲಿಬೆಲೆ ಹಾಗೂ ಮಂಗಲ್ಪಾಡಿ ನರೇಶ್ ಶೆಣೈ ಅವರು ಉಪಸ್ಥಿತರಿರುವರು.

Write A Comment