ಕರ್ನಾಟಕ

ಬಿಗ್‍ಬಾಸ್ ಮನೆಯಲ್ಲಿ ಹುಚ್ಚ ವೆಂಕಟ್ ಇಲ್ಲದೇ ಏನೇನೆಲ್ಲಾ ನಡೆಯೋತ್ತಿದೆ…!

Pinterest LinkedIn Tumblr

big

ಬೆಂಗಳೂರು: ಬಿಗ್‍ಬಾಸ್ ಮನೆಗೆ ಬರುವಾಗಲೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದ್ದ ಹುಚ್ಚ ವೆಂಕಟ್, ಇದ್ದಕ್ಕಿದ್ದಂತೆ ಮನೆಯಿಂದ ಹೊರಬಿದ್ದು ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಿದ್ದರು. ಅವರು ಮಾಡಿದ್ದು ಸರಿಯೋ ತಪ್ಪೋ ಎಂದು ಪರ ವಿರೋಧ ಚರ್ಚೆಗಳು ಸಹ ನಡೆದವು. ಕೆಲವು ಅಭಿಮಾನಿಗಳಂತೂ ವೆಂಕಟ್ ಇಲ್ಲದೆ ಬಿಗ್ ಬಾಸ್ ನೋಡುವುದೇ ಇಲ್ಲ ಎಂದಿದ್ದರು. ಆದರೆ ಬಿಗ್ ಬಾಸ್ ಮನೆಯಲ್ಲಿ ಮಾತ್ರ ಯಾರೂ ಕೂಡ ವೆಂಕಟ್‍ರನ್ನು ಮಿಸ್ ಮಾಡಿಕೊಳ್ಳುತ್ತಿರುವಂತೆ ಕಾಣುತ್ತಿಲ್ಲ.

ಅವರ ಬಗ್ಗೆ ಮಾತುಗಳಾಗಲಿ, ಲೇವಡಿಯಾಗಲಿ, ಟೀಕೆ ಟಿಪ್ಪಣಿಗಳಾಗಲೀ ಕೇಳಿ ಬರುತ್ತಿಲ್ಲ. ಅದರ ಬದಲಾಗಿ ಬಿಗ್‍ಬಾಸ್ ಮಂದಿ ನಿನ್ನೆಯ ಡ್ಯಾನ್ಸ್ ಟಾಸ್ಕ್‍ನಲ್ಲಿ ಸಿಕ್ಕಾಪಟ್ಟೆ ಮಜಾ ಮಾಡಿದ್ದಾರೆ. ಅದರಲ್ಲೂ ರವಿ ಮುರೂರ್ ಅವರ ಡಾನ್ಸ್ ಜನರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿದೆ. ವೆಂಕಟ್ ಕೊಟ್ಟ ಏಟನ್ನು ಡಾನ್ಸ್‍ನಲ್ಲೂ ನೆನೆಸಿಕೊಂಡು ರವಿ ಎಲ್ಲರನ್ನೂ ನಗಿಸಿದ್ದಾರೆ.

ರವಿ ಡಾನ್ಸ್‍ಗೆ ಶಿಳ್ಳೆ ಮತ್ತು ಚಪ್ಪಾಳೆಗಳ ಸುರಿಮಳೆ. ಇಷ್ಟು ದಿನ ಬಹಳ ಗಂಭೀರವಾಗಿಯೇ ಇರುತ್ತಿದ್ದ ರವಿ ಈಗ ಸೂಪರ್ ಎಂಟರ್ಟೈನರ್ ಆಗಿದ್ದಾರೆ. ಅವರ ಡಾನ್ಸ್‍ನ ಮೋಡಿಗೆ ಶೃತಿ ಅವರಂತು ಸಿಕ್ಕಾಪಟ್ಟೆ ನಕ್ಕು ಮಜಾ ಮಾಡಿದ್ದಾರೆ. ಅಲ್ಲದೆ ಹೆಣ್ಣು ಮಕ್ಕಳ ಉಡುಪಿನ ವಿಚಾರದಲ್ಲಿ, ವೆಂಕಟ ಇದ್ದಾಗಿನ ಸಂಕಟ ಈಗ ಅವರಿಗಿಲ್ಲ. ಟೀಗಾಗಿ ಹಾಲು ಬಚ್ಚಿಡುವಂತಹ ಕೆಲಸವೂ ಇಲ್ಲ.

ಕಳೆದ ವಾರ ಮನೆಯಲ್ಲಿ ಮುಸುಕು ಕವಿದಂತಿದ್ದ ನಿರಾಸೆ, ಸಿಟ್ಟು, ಜಗಳ ಎಲ್ಲವೂ ಈಗ ತಣ್ಣಗಾಗಿದೆ. ಮನೆಯಲ್ಲಿ ವೆಂಕಟ್ ಇಲ್ಲದಿದ್ದರೆ ಏನಂತೆ, ವೀಕ್ಷಕರಿಗೆ ಮನೋರಂಜನೆಯ ಕೊರತೆಯಂತೂ ಸದ್ಯಕ್ಕಿಲ್ಲ.

Write A Comment