ಕನ್ನಡ ವಾರ್ತೆಗಳು

ಕುಂಭಾಸಿಯಲ್ಲಿ ‘ಡಿವೈಡ್’ರ್ ಗೊಂದಲ: ಬಸ್ಸು ನಿಲ್ದಾಣ ಸಮೀಪ ಡಿವೈಡರ್ ನಿರ್ಮಿಸಲು ಪ್ರತಿಭಟನೆ

Pinterest LinkedIn Tumblr

ಕುಂದಾಪುರ: ಕುಂಭಾಸಿ ರಿಕ್ಷಾ ಸ್ಟಾಂಡ್ ಸಮೀಪದ ಡಿವೈಡರ್ ಮುಚ್ಚಿದ ಕುರಿತು ಆ ಭಾಗದ ಜನರು ಹಾಗೂ ರಿಕ್ಷಾ ಚಾಲಕರು ಸೋಮವಾರ ಪ್ರತಿಭಟನೆಯನ್ನು ನಡೆಸಿದರು, ಈ ವೇಳೆ ರಸ್ತೆ ತಡೆಯೂ ನಡೇಯಿತು. ಈ ಕುರಿತಾದ ಒಂದು ವರದಿಯಿಲ್ಲಿದೆ.

ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ನಡೆಯುತ್ತಿರುವ ತರುವಾಯ ಕುಂಭಾಸಿಯಲ್ಲಿ ಈ ಹಿಂದೆ ತಾತ್ಕಾಲಿಕ ಡಿವೈಡರ್ ನೀಡಲಾಗಿತ್ತು, ಪುರಾಣ ಪ್ರಸಿದ್ಧ ಶ್ರೀ ಹರಿಹರ ದೇವಸ್ಥಾನ, ಸರ್ಕಾರಿ ಶಾಲೆ, ನಾಗಾಚಲಾ ಶ್ರೀ ಅಯ್ಯಪ್ಪ ಸ್ವಾಮೀ ದೇವಸ್ಥಾನ ಸೇರಿದಂತೆ ಬ್ಯಾಂಕುಗಳು, ವಾಣಿಜ್ಯ ಮಳಿಗೆಗಳು ಈ ಭಾಗದಲ್ಲಿದೆಯೆಂಬ ಕಾರಣದಿಂದಾಗಿ ಜನರಿಗೆ ಸಮಸ್ಯೆಯಾಗದಂತೆ ಡಿವೈಡರ್ ಕಳೆದ ಒಂದೂವರೆ ವರ್ಷದಿಂದಲೂ ಈ ಭಾಗದಲ್ಲಿತ್ತು. ಆದರೇ ಹೆದ್ದಾರಿ ಪ್ರಾಧಿಕಾರ ಹಾಗೂ ನವಯುಗ ಕಂಪೆನಿಯವರು ಇತ್ತೀಚೆಗೆ ಈ ಡಿವೈಡರ್ ಮುಚ್ಚಿರುವುದೇ ಈಗ ಸ್ಥಳಿಯ ಜನರ ಆಕ್ರೋಷಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ಥಳಿಯ ಕುಂಭಾಸಿ ಗ್ರಾಮಪಂಚಾಯತ್ ಕೂಡ ಜನರ ಸಮಸ್ಯೆಗೆ ಸ್ಪಂದಿಸದೇ ರಜಕೀಯ ಮಾಡುತ್ತಿದೆಯೆಂಬ ಆರೋಪಗಳು ಈ ಭಾಗದ ಜನರಿಂದ ಕೇಳಿಬರುತ್ತಿದೆ.

Kumbasi_Divider problem_Protest (13) Kumbasi_Divider problem_Protest (12) Kumbasi_Divider problem_Protest (11) Kumbasi_Divider problem_Protest (2) Kumbasi_Divider problem_Protest (7) Kumbasi_Divider problem_Protest (6) Kumbasi_Divider problem_Protest (5) Kumbasi_Divider problem_Protest (4) Kumbasi_Divider problem_Protest (3) Kumbasi_Divider problem_Protest (8) Kumbasi_Divider problem_Protest (10) Kumbasi_Divider problem_Protest (9) Kumbasi_Divider problem_Protest (20) Kumbasi_Divider problem_Protest (21) Kumbasi_Divider problem_Protest (22) Kumbasi_Divider problem_Protest (18) Kumbasi_Divider problem_Protest (17) Kumbasi_Divider problem_Protest (23)

Kumbasi_Divider problem_Protest (1)

Kumbasi_Divider problem_Protest (15) Kumbasi_Divider problem_Protest (19) Kumbasi_Divider problem_Protest (14) Kumbasi_Divider problem_Protest (16)

ಕುಂಭಾಸಿ ಬಸ್ಸುನಿಲ್ದಾಣದ ಪ್ರಸ್ತುತ ಡಿವೈಡರ್ ಮುಚ್ಚಿರುವ ಪ್ರದೇಶದಲ್ಲಿಯೇ ಗೋಪಾಡಿ, ಕೊರವಡಿಗೆ ತೆರಳಬೇಕಾದ ಮೀನುಗಾರಿಕಾ ರಸ್ತೆಯಿದೆ ಅಲ್ಲದೇ ಜನತಾ ಕಾಲೋನಿ ರಸ್ತೆಯೂ ಇದೆ. ನಿತ್ಯ ಸಾವಿರಾರು ಜನರು ಈ ಡಿವೈಡರ್ ಆಶ್ರಯಿಸಿದ್ದಾರೆ, ಒಂದೊಮ್ಮೆ ಡಿವೈಡರ್ ಮುಚ್ಚಿದಲ್ಲಿ ಕಿಲೋಮೀಟರುಗಳ ದೂರ ಸುತ್ತುಹಾಕಿ ಬರಬೇಕಾದ ಅನಿವಾರ್ತಯಿದೆ ಎನ್ನುವುದು ಪ್ರತಿಭಟನಾಕಾರರ ಮಾತುಗಳು. ಅಲ್ಲದೇ ಪ್ರಸ್ತುತ ಈಗಿರುವ ಆನೆಗುಡ್ಡೆ ಸ್ವಾಗತ ಗೋಪುರದ ಎದುರುಗಿನ ಡಿವೈಡರ್ ಅವೈಜ್ನಾನಿಕವಾಗಿದ್ದು ಹಲವು ಅಪಘಾತಗಳು ನಡೆದಿರುವ ಕಾರಣ ಬಸ್ಸು ನಿಲ್ದಾಣದ ಸಮೀಪವೇ ಡಿವೈಡರ್ ನಿರ್ಮಿಸಬೇಕೆಂಬುದು ಇವರ ಆಗ್ರಹವಾಗಿದೆ.

ಇವೆಲ್ಲಾ ಬೇಡಿಕೆಗಳನ್ನು ಮುಂದಿಟ್ಟುಕೊಂಡ ಸ್ಥಳಿಯರು ಹಾಗೂ ರಿಕ್ಷಾ ಚಾಲಕರು ಸೋಮವಾರ ಬ್ರಹತ್ ಪ್ರತಿಭಟನೆಯನ್ನು ನಡೆಸಿದ್ರು. ಹತ್ತು ನಿಮಿಷಗಳ ಕಾಲ ರಸ್ತೆಯನ್ನು ತಡೆದು ತಮ್ಮ ಆಕ್ರೋಷವನ್ನು ಹೊರಹಾಕಿದ್ರು. ಸ್ಥಳಕ್ಕೆ ಬಂದ ತಹಶಿಲ್ದಾರ್ ಗಾಯತ್ರಿ ನಾಯಕ್ ಅವರಿಗೆ ತಮ್ಮ ಸಮಸ್ಯೆಗಳನ್ನು ಹೇಳಿ ಮನವಿಯನ್ನು ನೀಡಿದ್ರು. ಈ ಸಂದರ್ಭ ತಹಶಿಲ್ದಾರ್ ಅವರು ಸಂಬಂದಪಟ್ಟವರೊಂದಿಗೆ ಮಾತುಕತೆ ನಡೆಸಿ ಈ ಬಗ್ಗೆ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದ್ರು. ಆದ್ರೇ ಇಷ್ಟೆಲ್ಲಾ ನಡಿತಾ ಇದ್ರೂ ಕೂಡ ಕುಂಭಾಸಿ ಗ್ರಾಮಪಂಚಾಯತ್ ಮಾತ್ರ ತನಗೇನು ತಿಳಿದಿಲ್ಲವೆಂಬಂತೆ ಮೌನವಹಿಸಿದ್ದು ಪ್ರತಿಭಟನಾಕಾರರನು ಕೆರಳಿಸಿತ್ತು. ಪ್ರತಿಭಟನಾ ಸ್ಥಳದಿಂದ ಗ್ರಾಮಪಂಚಯತ್ ಕಛೇರಿಯವರೆಗೂ ಕಾಲ್ನಡಿಗೆ ಮೂಲಕ ಸಾಗಿದ ಅವರು ಸ್ಥಳಕ್ಕೆ ಬಾರದ ಪಂಚಾಯತ್ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದ್ರು.

ಇದೇ ವೇಳೆ ಪ್ರತಿಭಟನಾಕಾರರು ಪಂಚಾಯತ್ ಉಪಾಧ್ಯಕ್ಷರ ರಾಜಿನಾಮೆಗೂ ಆಗ್ರಹಿಸಿದ್ರು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಪಂಚಾಯತ್ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಇನ್ನಾದರೂ ನಮ್ಮ ಸಮಸ್ಯೆಗೆ ಸ್ಪಂದಿಸಿ ನ್ಯಾಯ ಒದಗಿಸಿಕೊಡಿ ಎಂದು ಅಧ್ಯಕ್ಷರಿಗೆ ಮನವಿ ನೀಡಿದ್ರು. ಇದಕ್ಕೆ ಪ್ರತಿಕ್ರಿಸಿದ ಗ್ರಾಮಪಂಚಾಯತ್ ಅಧ್ಯಕ್ಷೆ ಶ್ರೀವಾಣಿ ಅಡಿಗ ಅವರು, ಮನವಿಯನ್ನು ಸಂಬಂದಪಟ್ಟವರಿಗೆ ತಲುಪಿಸುವ ಮೂಲಕ ಸ್ಥಳದಲ್ಲಿನ ಸಮಸ್ಯೆ ಬಗ್ಗೆ ಗಮಸೆಳೆಯುವುದಗಿಯೂ ಆಶ್ವಾಸನೆ ನೀಡಿದ್ರು.

ಪ್ರತಿಭಟನೆಯಲ್ಲಿ ರಿಕ್ಷಾ ಚಾಲಕರು, ಗೋಪಾಡಿ ಪಂಚಾಯತ್ ಅಧ್ಯಕ್ಷರು ಸೇರಿದಂತೆ ಕುಂಭಾಸಿ ಗ್ರಾಮಪಂಚಾಯತ್ ಒಂದಿಬ್ಬರು ಸದಸ್ಯರು ಹಾಗೂ ಸ್ಥಳಿಯ ನಾಗರೀಕರು ಭಾಗವಹಿದ್ರು. ಜಿಲ್ಲಾಪಂಚಾಯತ್ ಸದಸ್ಯ ಗಣಪತಿ ಟಿ. ಶ್ರೀಯಾನ್ ಪ್ರತಿಭಟನೆಯಲ್ಲಿ ಭಾಗವಹಿಸಿ ಬಸ್ಸು ನಿಲ್ದಾಣದ ಸಮೀಪ ಡಿವೈಡರ್ ನಿರ್ಮಿಸಬೇಕೆಂದು ಅಗ್ರಹಿಸಿದ್ರು.

ಆದರೇ ಈಗಿರುವ ಡಿವೈಡರ್ ಆನೆಗುಡ್ಡೆ ದೇವಸ್ಥಾನಕ್ಕೆ ತೆರಳಲು ಅನುಕೂಲವಾಗುವುದಲ್ಲದೇ ಗ್ರಾಮಪಂಚಾಯತ್, ಸರಕಾರಿ ಆಸ್ಪತ್ರೆ, ಪಶು ಆಸ್ಪತ್ರೆ, ಕೊರಗ ಕಾಲನಿ, ಅಂಚೆಕಛೆರಿ ಸೇರಿದಂತೆ ಹಲವು ಭಾಗಗಳಿಗೆ ಸಂಪರ್ಕ ಕೊಂಡಿಯಾಗಿದೆ. ಊರಿಗೆ ಒಂದೇ ಡಿವೈಡರ್ ನಿರ್ಮಿಸುವ ನಿಯಮವಿದ್ದು ಬಸ್ಸು ನಿಲ್ದಾಣದ ಸಮೀಪ ಡಿವೈಡರ್ ಆದಲ್ಲಿ ಇಲ್ಲಿನ ಜನರಿಗೂ ಸಮಸ್ಯೆಯಾಗುತ್ತೆ ಅನ್ನುತ್ತಾರೆ ಈ ಭಾಗದ ಜನರು. ಅಲ್ಲದೇ ಎಲ್ಲರೂ ಒಗ್ಗೂಡಿ ಸರ್ವೀಸ್ ರಸ್ತೆ ನಿರ್ಮಾಣದ ಬಗ್ಗೆ ಪ್ರತಿಭಟಿಸಬೇಕೆ ಹೊರತು ಡಿವೈಡರ್ ನಿರ್ಮಾಣಕ್ಕಾಗಿ ಬಣವಾಗಿ ಪ್ರತಿಭಟನೆ ಮಾಡುವುದು ಸೂಕ್ತವಲ್ಲ ಎಂದು ಹಿರಿಯರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಸಂಬಂದಪಟ್ಟವ್ರು ಈ ಬಗ್ಗೆ ಸೂಕ್ತ ಸ್ಥಳವನ್ನು ಪರಾಮರ್ಷಿಸಿ, ಜನಾಭಿಪ್ರಾಯವನ್ನು ಪಡೆದು ಯಾರಿಗೂ ಸಮಸ್ಯೆಯಾಗದಂತೆ ಡಿವೈಡರ್ ನಿರ್ಮಿಸಿದಲ್ಲಿ ಇವೆಲ್ಲಾ ಗೊಂದಲಗಳಿಗೂ ತೆರೆಬೀಳಲಿದೆ.

Write A Comment