ಕನ್ನಡ ವಾರ್ತೆಗಳು

ನ.18: ಕೆ‌ಎಂಎಫ್‌ನಲ್ಲಿ ಸಹಕಾರಿ ಸಪ್ತಾಹ 

Pinterest LinkedIn Tumblr

KMF-logo

ಮ೦ಗಳೂರು, ನ.16: 62 ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಆಚರಣೆ ಅಂಗವಾಗಿ ಸಹಕಾರಿ ಮಾರುಕಟ್ಟೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ ದಿನ ಆಚರಣೆ ಮಂಗಳೂರು ಡೇರಿ ಆವರಣದಲ್ಲಿ ನ.18ರಂದು ಬೆಳಿಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಅರಣ್ಯ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮನಾಥ ರೈ ನೆರವೇರಿಸಲಿದ್ದು, ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಅವರು ಹೋಮೋಜಿನೈಜರ್ ಉದ್ಘಾಟಿಸಲಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಪಾಶ್ಚರೈಜರ್ ಉದ್ಘಾಟಿಸಲಿದ್ದು, ದ.ಕ. ಹಾಲು ಒಕ್ಕೂಟ ಅಧ್ಯಕ್ಷ ರವಿರಾಜ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ನಂದಿನಿ ಸಾದಾ ಮಜ್ಜಿಗೆಯನ್ನು ಡಾ. ಬಿ.ಎಂ. ಹೆಗ್ಡೆ ಬಿಡುಗಡೆ ಮಾಡಲಿದ್ದಾರೆ.

Write A Comment