ಕನ್ನಡ ವಾರ್ತೆಗಳು

ಸಾಸ್ತಾನ ಫ್ಯಾನ್ಸಿ ಅಂಗಡಿಗೆ ಬೆಂಕಿ ಹಾಕಿದ ಪ್ರಕರಣ: ಪರಾರಿಯಾಗಿದ್ದ ‘ಬೆಂಕಿ’ ರುವಾರಿ ಅರೆಸ್ಟ್

Pinterest LinkedIn Tumblr

ಕುಂದಾಪುರ: ಸಾಸ್ತಾನದ ಪೇಟೆಯ ಸಮೀಪವಿರುವ ಮಂದಾರ ಫ್ಯಾನ್ಸಿ ಸ್ಟೋರ್ ಎಂಬ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಹಾಗೂ ಪ್ರಕರಣದ ರುವಾರಿ ಅಭಿಷೇಕ್ ಯಾನೆ ಅಭಿ ಎಂಬಾತನನ್ನು ಸೋಮವಾರ ಬೆಳಿಗ್ಗೆ ಕೋಟ ಪೊಲೀಸರು ಬಂಧಿಸಿದ್ದಾರೆ.

Sasthana_Store Fire Case_Arrest (1)

ಆ.27ರ ರಾತ್ರಿ ಅಂಗಡಿಗೆ ಬೆಂಕಿ ಹಚ್ಚಿದ್ದು ಮರುದಿನ ಬೆಳಿಗ್ಗೆ (ಆ.28) ಘಟನೆ ಬೆಳಕಿಗೆ ಬಂದಿತ್ತು. ಇದಕ್ಕೆ ಕೋಮುಬಣ್ಣ ನೀಡಿ ಪ್ರತಿಭಟನೆಯನೂ ನಡೆಸಲಾಗಿತ್ತು.

Sasthana_Store Fire Case_Arrest (3) Sasthana_Store Fire Case_Arrest (2) Sasthana_Store Fire Case_Arrest (4)

ಪ್ರಕರಣದ ಹಿನ್ನೆಲೆ: ಹಿಂದೂ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದ ಪ್ರವೀಣ್ ಎನ್ನುವವರಿಗೆ ಸೇರಿದ ಈ ಫ್ಯಾನ್ಸಿ ಅಂಗಡಿ ಇದಾಗಿದ್ದು ಕಳೆದ ಎಂಟು ತಿಂಗಳಿನ ಹಿಂದೆ ಶಿವರಾತ್ರಿ ದಿನದಂದು ಕಳ್ಳತನ ಪ್ರಕರಣವೊಂದರಲ್ಲಿ ಅಭಿಷೇಕ್ ಎಂಬಾತ ತನ್ನ ಸ್ನೇಹಿತನೊಂದಿಗೆ ಪ್ರವೀಣನಿಗೆ ಸಿಕ್ಕಿಹಾಕಿಕೊಂಡಿದ್ದು ಈ ವೇಳೆ ಅವರು ಈತನಿಗೆ ಹೊಡೇದಿದ್ದರಂತೆ, ಅಲ್ಲಿನಿಂದ ಅದೇ ದ್ವೇಷವನ್ನು ಬೆಳೆಸಿದ್ದ ಈತ ಪ್ರವೀಣನಿಗೆ ಶಾಸ್ತಿ ಮಾಡುವ ಬಗ್ಗೆ ಹಲವರಲ್ಲಿ ಕೇಳೀಕೊಂಡು ತಿರುಗಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ತನ್ನ ಸ್ನೇಹಿತರ ಬಳಿಯೂ ಚರ್ಚಿಸಿದ್ದ ಈತ ಎಷ್ಟೇ ಖರ್ಚಾದರೂ ಆತನನ್ನು ನೆಮ್ಮಡಿಯಾಗಿ ಬದುಕಲು ಬಿಡಬಾರದೆಂದು ಹೇಳಿಕೊಂಡಿದ್ದ ಎನ್ನಲಾಗಿದೆ. ಇದೇ ದ್ವೇಷವನ್ನು ಮುಂದುವರಿಸಿದ್ದ ಅಭಿಷೇಕ್ ಸಮಯಕ್ಕಾಗಿ ಕಾಯುತ್ತಿದ್ದು ಆ.26 ರಂದು ಹಿಂದೂ ಸಂಘಟನೆಯ (ಅಂಗಡಿ ಮಾಲೀಕ) ಪ್ರವೀಣ ಹಾಗೂ ಕೆಲವು ಅನ್ಯಕೋಮಿನ ಯುವಕರಿಗೆ ಘರ್ಷಣೆ ಉಂಟಾಗಿತ್ತು. ಇದನ್ನೇ ದಾಳವನ್ನಾಗಿ ಬಳಸಿಕೊಂಡ ಅಭಿಷೇಕ್ ತನ್ನ ಗೆಳೆಯ ಶರತ್ ಎಂಬಾತನಿಗೆ ಚೆನ್ನಾಗಿ ಮದ್ಯ ಕುಡಿಸಿ ಅಂಗಡಿಗೆ ಬೆಂಕಿ ಹಾಕಲು ಸುಫಾರಿ ನೀಡಿದ್ದ ಅದರಂತೆಯೇ ಶರತ್ ಹಾಗೂ ವಿಘ್ನೇಶ್ ಎಂಬಿಬ್ಬರು ಅಂಗಡಿಗೆ ಬೆಂಕಿ ಹಾಕಿದ್ದರು. ಆರೋಪಿಗಳು ನಾಜೂಕಗಿ ಕೆಲಸ ಮುಗಿಸಿ ತಮ್ಮದೇನು ಪಾತ್ರವೇ ಇಲ್ಲವೆಂಬಂತಿದ್ದರಲ್ಲದೇ ಬೆಂಕಿ ಪ್ರಕರಣಕ್ಕೆ ಕೋಮು ಬಣ್ಣ ಬಳಿಯುವ ಬಗ್ಗೆಯೂ ಕೆಲಸ ಮಾಡಿದ್ದರೆನ್ನಲಾಗಿದೆ.

ಈ ನಡುವೆ ಎಲ್ಲಾ ಆರೋಪಿಗಳು ಪರಾರಿಯಾಗಿದ್ದು ತೀಂಗಳ ಹಿಂದಷ್ಟೇ ಕೋಟ ಪೊಲಿಸರು ಶರತ್ ಹಾಗೂ ವಿಘ್ನೇಶನನ್ನು ಬಂಧಿಸಿದ್ದರು. ಫ್ಲ್ಯಾನ್ ನಡೆಸಿದ ಭರತ್ ಹಾಗೂ ಶಶಿ ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದು ಪ್ರಮುಖ ಆರೋಪಿ ಅಭಿಶೇಕ್ ಮಾತ್ರ ತಲೆ ಮರೆಸಿಕೊಂಡಿದ್ದ. ಸೋಮವಾರ ಬೆಳಿಗ್ಗೆ ಸಿಕ್ಕ ಖಚಿತ ವರ್ತಮಾನದ ಮೇರೆಗೆ ಆರೋಪಿ ಅಭಿಶೇಕ್ ಕೊಮೆ ಎಂಬಲ್ಲಿರುವ ಮಾಹಿತಿ ಪಡೇದು ಕಾರ್ಯಾಚರಣೆ ನಡೆಸಿದ ಕೋಟ ಪೊಲೀಸರು ಆರೋಪಿಯನ್ನು ಬಂಧಿಸಿ ಕುಂದಾಪುರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಬ್ರಹ್ಮಾವರ ವ್ರತ್ತನಿರೀಕ್ಷಕ ಅರುಣ ನಾಯ್ಕ್ ಮಾರ್ಗದರ್ಶನದಲ್ಲಿ ಕೋಟ ಠಾಣೆಯ ಪಿಎಸ್.ಐ. ಕಬ್ಬಾಳ್ ರಾಜ್ ಮತ್ತು ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು ಬೆಂಕಿ ಪ್ರಕರಣದ ಎಲ್ಲಾ ಆರೋಪಿಗಳು ಸಿಕ್ಕಿದಂತಾಗಿದೆ.

ಸಾಸ್ತಾನ ಅಂಗಡಿ ಬೆಂಕಿ ಪ್ರಕರಣದ ಇನ್ನಷ್ಟು ಸುದ್ದಿಗಳು:

ಸಾಸ್ತಾನ: ಫ್ಯಾನ್ಸಿ ಅಂಗಡಿಗೆ ಬೆಂಕಿ; ಅಪಾರ ನಷ್ಟ; ಬೆಂಕಿಯ ಕಾರಣ ನಿಗೂಢ..? | KANNADIGA WORLD

ಸಾಸ್ತಾನ ಅಂಗಡಿಗೆ ಬೆಂಕಿ ಪ್ರಕರಣ; ಆರೋಪಿಗಳ ಬಗ್ಗೆ ಪೊಲೀಸರಿಗೆ ಸುಳಿವು | KANNADIGA WORLD

ಸ್ನೇಹಿತನ ಮಾತು ಕೇಳಿ ಅಂಗಡಿಗೆ ಬೆಂಕಿಯಿಟ್ಟ ಹುಡುಗರು..! ಸಾಸ್ತಾನ ಬೆಂಕಿ ಪ್ರಕರಣ ಬಯಲು | KANNADIGA WORLD

Write A Comment