ಕನ್ನಡ ವಾರ್ತೆಗಳು

ಬಡಾ ವಠಾರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ.

Pinterest LinkedIn Tumblr

padubidre_watar_tank

ಪಡುಬಿದ್ರೆ, ನ.16: ಉಡುಪಿ ಪವರ್ ಕಾರ್ಪೊರೇಷನ್ ಸಂಸ್ಥೆಯು ತನ್ನ ಸಾಮಾಜಿಕ ಜವಾಬ್ದಾರಿ ನಿರ್ವಹಿಸುವ ಅಂಗ ಸಂಸ್ಥೆಯಾದ ಅದಾನಿ ಫೌಂಡೇಶನ್‌ ವತಿಯಿಂದ ಉಡುಪಿ ಜಿಲ್ಲೆಯ ಬಡಾ ಗ್ರಾಪಂನ ವಠಾರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಸ್ಥಾಪನೆಗಾಗಿ ಇತ್ತೀಚೆಗೆ ಭೂಮಿ ಪೂಜೆ ನೆರವೇರಿಸಲಾಯಿತು. ಭೂಮಿ ಪೂಜೆಯನ್ನು ಅದಾನಿ ಸಮೂಹದ ಜಂಟಿ ಅಧ್ಯಕ್ಷ ಜತಿಂದರ್ ಭಟ್ನಾಗರ್, ಅಂದಾಜು 20 ಲಕ್ಷ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿರುವ ಈ ಘಟಕವು 1,000 ಲೀಟರ್‌ನಷ್ಟು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದ್ದು, 5,000 ಲೀ. ಶುದ್ಧೀಕರಿಸಿದ ನೀರನ್ನು ಶೇಖರಣೆ ಮಾಡುವ ಘಟಕವಾಗಿರುತ್ತದೆ.

ಇದೇ ರೀತಿಯ ಘಟಕವು ಬೆಳಪು ಗ್ರಾಮದಲ್ಲಿ ಯುಪಿಸಿಎಲ್ ನಿರ್ಮಿಸಿದ್ದು, ಸುಮಾರು 2,500 ಗ್ರಾಮಸ್ಥರು ಇದರ ಸದುಪಯೋಗವನ್ನು ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಶುದ್ಧ ನೀರಿನ ಘಟಕವನ್ನು ಎಲ್ಲೂರು ಗ್ರಾಮದಲ್ಲಿ ಯುಪಿಸಿಎಲ್ ವತಿಯಿಂದ ನಿರ್ಮಿಸಲಾಗುತ್ತಿದೆ ಎಂದರು.

ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗರತ್ನಾ ಮಾತನಾಡಿದರು. ಯುಪಿಸಿಎಲ್‌ನ ಕಾರ್ಯನಿರ್ವಾಹಕ ಅಕಾರಿಯಾದ ಕಿಶೋರ್ ಆಳ್ವ, ಮತ್ತು ಪಂಚಾಯತ್‌ನ ಸದಸ್ಯರು ಭಾಗವಹಿಸಿದ್ದರು. ಯುಪಿಸಿಎಲ್‌ನ ಅಸೋಸಿಯೇಟ್ ಜನರಲ್ ಮ್ಯಾನೇಜರ್ ಗಿರೀಶ್ ನಾವಡ, ಡೆಪ್ಯೂಟಿ ಜನರಲ್ ಮ್ಯಾನೇಜರ್ ಸುದರ್ಶನ ಪ್ರಸಾದ್, ಮ್ಯಾನೇಜರ್ ರವಿಜೇರೆ ಮತ್ತು ಅದಾನಿ ಫೌಂಡೇಶನ್‌ನ ವಿನೀತ್ ಅಂಚನ್ ಉಪಸ್ಥಿತರಿದ್ದರು.

ವರದಿ ಕೃಪೆ: ವಾಭಾ

Write A Comment