ಕನ್ನಡ ವಾರ್ತೆಗಳು

ಜ್ಯೋತಿ ಕ್ರೆಡಿಟ್ ಸೊಸೈಟಿಯ ಉಪಕಾರ್ಯಾಧ್ಯಕ್ಷ ಕರುಣಾಕರ ಜೆ. ಮೂಲ್ಯ ನಿಧನ

Pinterest LinkedIn Tumblr

Mumbai_Moolya_KJ

ಮುಂಬಯಿ : ಕುಲಾಲ ಸಂಘ ಮುಂಬಯಿ ಪ್ರಾಯೋಜಿತ ಜ್ಯೋತಿ ಕೋ. ಆಪ್. ಕ್ರೆಡಿಟ್ ಸೊಸೈಟಿಯ ಉಪಕಾರ್ಯಾಧ್ಯಕ್ಷ, ಮಲಾಡ್ ಪಶ್ಚಿಮ ಚಿಂಚೋಲಿಯ ಡಾಲಿ ಅಪಾರ್ಟ್ ಮೆಂಟ್ ನ ನಿವಾಸಿ ಕರುಣಾಕರ ಜೆ. ಮೂಲ್ಯ (55) ಹೃದಯಘಾತ ದಿಂದಾಗಿ ನ. 14ರಂದು ನಿಧನ ಹೊಂದಿದರು.

ಮೂಲತ ಮಂಗಳೂರಿನ ಕೊಲ್ಯದ ಪಿಲಾರ್ ಪರಿಸರದವರಾದ ದಿವಂಗತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ

ಕುಲಾಲ ಸಂಘ ಮುಂಬಯಿಯಲ್ಲಿ ಎರಡು ದಶಕಗಳಿಂದಲೂ ಮಿಕ್ಕಿ ಸಕ್ರಿಯರಾಗಿದ್ದ ಇವರು ಸಂಘದ ವಿದ್ಯಾರ್ಥಿ ಬಳಗದ ಕಾರ್ಯಾಧ್ಯಕ್ಷರಾಗಿದ್ದರು. ಕರುಣಾಕರ ಜೆ. ಮೂಲ್ಯ ಅವರ ನಿಧನಕ್ಕೆ ಕುಲಾಲ ಸಂಘದ ಗೌರವ ಅಧ್ಯಕ್ಷ ಪಿ. ಕೆ. ಸಾಲ್ಯಾನ್, ಅಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್, ಕಾರ್ಯದರ್ಶಿ ಡಿ. ಐ. ಮೂಲ್ಯ, ಕೋಶಾಧಿಕಾರಿ ಜಯ ಅಂಚನ್, ಕಾರ್ಯಕಾರಿ ಸಮಿತಿ ಹಾಗೂ ಸ್ಥಳೀಯ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಸದಸ್ಯರುಗಳು, ಕುಲಾಲ್ ಪ್ರತಿಷ್ಠಾನ ಮಂಗಳೂರು ಇದರ ಮೆನೇಜಿಂಗ್ ಟ್ರಸ್ಟಿ ಸುರೇಶ್ ಕುಲಾಲ್, ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯದರ್ಶಿ ದೇವದಾಸ್ ಎಲ್. ಕುಲಾಲ್ ಮತ್ತು ನಿರ್ದೇಶಕರು ಸಂತಾಪ ಸೂಚಿಸಿದ್ದಾರೆ.

Write A Comment