ಕನ್ನಡ ವಾರ್ತೆಗಳು

ಶೋಭಾ ಕರಂದ್ಲಾಜೆ ಸುಳ್ಳು ಮಾತಿನ ಮೂಲಕ ಜನತೆ ಹಾದಿತಪ್ಪಿಸುತ್ತಿದ್ದಾರೆ: ಕರ್ನಾಟಕ ರೈತ ಸಂಘದ ಅಧ್ಯಕ್ಷ ಸಚಿನ್ ಮೀಗ್

Pinterest LinkedIn Tumblr

ಉಡುಪಿ: ಕಸ್ತೂರಿ ರಂಗನ್ ವರದಿಯ ಬಗ್ಗೆ ಚಿಕ್ಕಮಂಗಳೂರು ಮತ್ತು ಉಡುಪಿ ಸಂಸದೆ ಶೋಭಾ ಕರಂದ್ಲಾಜೆಯವರು ಇಲ್ಲಸಲ್ಲದ ಆರೋಪ ಹೇಳಿಕೆ ನೀಡಿ ರಾಜ್ಯದ ಜನತೆಗೆ ದಾರಿ ತಪ್ಪಿಸುವ ಕಾರ್ಯಮಾಡುತ್ತಿದ್ದಾರೆ ಜನಪ್ರತಿನಿಧಿಗಳಾದವರು ಇಂತಹ ತಪ್ಪು ಹೇಳಿಕೆ ಕೊಡುವುದು ಸರಿಯಲ್ಲ ಎಂದು ಕರ್ನಾಟಕ ರೈತ ಸಂಘದ ಅಧ್ಯಕ್ಷರು ಸಚಿನ್ ಮೀಗ್ ಹೇಳಿದ್ದಾರೆ.

UDP_Press meet_Raita sangha

ಜಿಲ್ಲಾ ಪತ್ರಕರ್ತರ ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರರ್ಕಾರಕ್ಕೆ ಕಸ್ತೂರಿ ರಂಗ ವರದಿಯನ್ನು ಎರಡು ತಿಂಗಳ ಹಿಂದೆ ವರದಿ ನೀಡಲಾಯಿತ್ತು ಆದರೆ ಕೇಂದ್ರ ಸರರ್ಕಾರ ಆ ವರದಿಯನ್ನು ತೀರಸ್ಕರ ಮಾಡಿ 4 ಕ್ಕೆ ನೀಡುವಂತೆ ಹೇಳಿತ್ತು ಆದರಂತೆ ರಾಜ್ಯ ಸರರ್ಕಾರ ರಾಜ್ಯದ ಜನತೆಗೆ ಉಪಯೋಗವಾಗುವಂತೆ 26ಶಿಫಾರಸಿನಲ್ಲಿ 3 ತಿದ್ದುಮಾಡಿ 20-10-2015 ವರದಿ ಕಳುಹಿಸಲಾಗಿದೆ,ಆದರಿಂದ ಶೋಭಾ ಕರಂದ್ಲಾಜೆಯವರು ಹೇಳಿಕೆಯನ್ನು ಒಂದಡೆ ಇಟ್ಟು ಕಳುಹಿಸಿದ ವರದಿ ಅನುಷ್ಟಾನದ ಕಡೆ ಗಮನ ನೀಡಿ ಎಂದರು.

ಕುಂದಾಪುರದ ರೈತ ಮಹೇಶ ಪೂಜಾರಿ ಕೃಷಿಗಾಗಿ ಬ್ಯಾಂಕ್‌ನಲ್ಲಿ ಮಾಡಲಾಗಿತ್ತು ಆ ಸಾಲ ಮರುಪಾವತಿ ಮಾಡಲಾಗದ ಕಾರಣ ಆತ್ಮಹತ್ಯೆ ಮಾಡಲಾಗಿದ್ದರು,ಕೃಷಿಗೆ ತೆಗೆದ ಸಾಲದ ದಾಖಲಾತಿ ಇದೆ ಆದರೆ ಅಧಿಕಾರಿಗಳು ಮಹೇಶ ಪೂಜಾರಿಯವರು ವಾಹನ ರಿಪೇರಿಗಾಗಿ ಮಾಡಲಾಗಿದೆ ಅದಕ್ಕಾಗಿ ಅವರಿಗೆ,ಪರಿಹಾರ ನೀಡಲು ನಿರಾಕರಿಸಿದರು ಆದ್ದುದರಿಂದ ಕೃಷಿ ಜೆಂಟಿ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರನ್ನು ಉಸ್ತುವಾರಿ ಸಚಿವರು ತುರ್ತಾಗಿ ಅವರನ್ನು ಕರ್ತವ್ಯಲೋಪದ ಮೇರೆಗೆ ಹುದ್ದೆಯಿಂದ ವಜಾಮಾಡಬೇಕೆಂದು.

ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಶಶಿಧರ್ ಮತ್ತು ಇತರ ರೈತ ಸಂಘದ ಸದಸ್ಯರು ಉಪಸ್ಥಿತರಿದ್ದರು.

Write A Comment